ಕುಕನೂರು ತಾಲೂಕಿನಲ್ಲಿ ಹಮ್ಮಿಕೊಂಡ ಜನಸಂಖ್ಯಾ ನಿಯಂತ್ರಣ ಜಾಗೃತಿ ಅಗತ್ಯ….
ಕುಕನೂರ್ : ನೂತನ ತಾಲ್ಲೂಕಿನಲ್ಲಿ ಹಮ್ಮಿಕೊಂಡಿದ್ದ. ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಅತ್ಯಗತ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಉಪವಿಭಾಗಾಧಿಕಾರಿಗಳಾದ ಡಾ,ರವೀಂದ್ರ ಅವರು ಮಾತನಾಡಿದರು ಕುಕನೂರು ಎಪಿಎಂಸಿ ಆವರಣದಲ್ಲಿ ವಿಶ್ವ ಜನಸಂಖ್ಯಾ ದಿನದ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕೋವಿಡ್ ಮಾರ್ಗಸೂಚಿ ಅನುಸರಿಸಿ ಕಾರ್ಯಕ್ರಮ ಮಾಡಬೇಕು. ಜನರಿಗೆ ಅರಿವು ಮೂಡಿಸಬೇಕು’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ನಮ್ಮ ಭಾರತ ದೇಶದಲ್ಲಿ ಜನಸಂಖ್ಯೆ ಎರಡನೇ ಸ್ಥಾನದಲ್ಲಿದೆ ಈ ಜನಸಂಖ್ಯೆ ಹೆಚ್ಚಳ ಪ್ರಗತಿಗೆ ಧಕ್ಕೆ ಉಂಟು ಮಾಡಲಿದೆ ಎಂದು ಹೇಳಿದರು. ತಾಲ್ಲೂಕು ವೈದ್ಯಾಧಿಕಾರಿಗಳು ಡಾ. ಮಂಜುನಾಥ್ ಬ್ಯಾಲುಣಸಿ ಅವರು ಮಾತನಾಡಿ,‘ಕೋವಿಡ್ ಇರುವುದರಿಂದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಅದ್ಧೂರಿಯಾಗಿ ಮಾಡುವುದು ಸರಿಯಲ್ಲ. ಜನರು ಇರುವಲ್ಲಿಗೆ ಹೋಗಿ ವಿಶ್ವ ಜನಸಂಖ್ಯಾ ನಿಯಂತ್ರಣದ ಕುರಿತು ಜಾಗೃತಿ ಮೂಡಿಸಲಾಗುವುದು’ ಹೇಳಿ ಎಂದು ಸಭೆಗೆ ಮಾಹಿತಿ ನೀಡಿದರು. ಕುಕನೂರ್ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಾದ ಅರವಿಂದ್ರ ಬಾಗಲಕೋಟೆ. ಬಸವರೆಡ್ಡಿ ಬಿಡನಾಳ. ಚನ್ನಬಸಯ್ಯ ಸಗಣಾಚಾರ. ಅಶೋಕ್ ಆಲೂರ್. ಪ್ರವೀಣ. ಜಗನ್ನಾಥ್. ಇತರರು ಭಾಗಿಯಾಗಿದ್ದರು.
ವರದಿ – ಹುಸೇನ್ ಮೋತೆಖಾನ್