ನರಕಲದಿನ್ನಿ: ಹಿಂದಿನ ಪಿಡಿಓ ಅಧ್ಯಕ್ಷ ಫೋರ್ಜರಿ ಸಹಿ11ಲಕ್ಷರೂ ವಂಚನೆ ಅನಧಿಕೃತ ಕಂ,ಆ ಕಿತ್ತಿಹಾಕಲು ಒತ್ತಾಯ…

Spread the love

ನರಕಲದಿನ್ನಿ: ಹಿಂದಿನ ಪಿಡಿಓ ಅಧ್ಯಕ್ಷ ಫೋರ್ಜರಿ ಸಹಿ11ಲಕ್ಷರೂ ವಂಚನೆ ಅನಧಿಕೃತ ಕಂ, ಕಿತ್ತಿಹಾಕಲು ಒತ್ತಾಯ…

ಲಿಂಗಸುಗೂರ ತಾಲೂಕಿನ ನರಕಲದಿನ್ನಿ ಗ್ರಾಮ ಪಂಚಾಯತನಲ್ಲಿಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ಕಂಪ್ಯೂಟರ ಆಪರೇಟರ ಅಮರೇಶ  ರಾಠೋಡ ಕಿತ್ತಿ ಹಾಕಿ  ಹಾಗೂ ಇತನ ಜೊತೆಶ್ಯಾಮಿಲಾದ ಸಿಬ್ಬಂದಿಗಳವಿರುದ್ದ ಕ್ರಮಜರುಗಿಸಲು ಒತ್ತಾಯಿಸಿ ಪಂಚಾಯತ ವ್ಯಾಪ್ತಿಯ ಗ್ರಾಮಸ್ಥರು ಅಧ್ಯಕ್ಷ ಹಾಗೂ ಪಿಡಿಓವರಿಗೆ ದೂರು ಸಲ್ಲಿಸಿರುವರು. ನರಕಲದಿನ್ನಿ ಗ್ರಾಮ ಪಂಚಾಯತ ನಲ್ಲಿಅನಧಿಕೃತವಾಗಿ ಕಂಪ್ಯೂಟರ ಆಪರೇಟರಾಗಿ ಕಾರ್ಯ ನಿರ್ವಹಿಸುತ್ತಿರುವ ಅಮರೇಶ ಈತನು ಸರಕಾರದಿಂದ ಬರುವ ಅನುದಾನ ಪಾಸಪುಸ್ತಕಗಳನ್ನು ಇಟ್ಟುಕೊಂಡು ಕಾಮಗಾರಿ ಕುರಿತು ಸುಳ್ಳು  ಮಾಹಿತಿ ನೀಡಿ ಪಂಚಾಯತಸದಸ್ಯರಿಗೆ ಹಣದ ಆಮೀಷ ಒಡ್ಡಿ ಸರಕಾರದಹಣ ಸಹೋದರನ ಖಾತೆಗೆ ಜಮಾಮಾಡಿ ಹಣ ದುರ್ಬಳಕೆ ಮಾಡುತ್ತಾನೆ  ಈತನ ಕಾರ್ಯವೈಖರಿ ಕುರಿತುಅನೇಕ ಬ್ರಷ್ಠಾಚಾರದ ದೂರುಗಳಿದ್ದು ಈ ಮೊದಲು ಇತನನ್ನು ಕಂಪ್ಯೂಟರ ಆಪರೇಟರ ಹುದ್ದೆ ಯಿಂದ ಕಿತ್ತಿಹಾಕಿದ್ದು ಪಂಚಾಯತಿ ಠರಾವಿದ್ದು ಅಲ್ಲದೆ ಲೋಕಾಯುಕ್ತ ಮತ್ತು ಎಸಿಬಿ ಪ್ರಕರಣದಲ್ಲಿದ್ದು  ಭಾರಿ ಪ್ರಮಾಣದ ಹಣ ದುರ್ಬಳಕೆ ಅರೋಪದ ಹಿನ್ನಲೆಯಲ್ಲಿ ಕೂಡಲೆ ಆಪರೇಟರ ಹುದ್ದೆಯಿಂದ ಕಿತ್ತಿಹಾಕಲು ತಿಳಿಸಿದ್ದು ಈ ಹಿಂದಿನ ಪಂಚಾಯತ ಪಿಡಿಓ ಮಹ್ಮದ ಖಾಜಾ ಸೇವೆಯಿಂದಅಮಾನತಗೊಂಡನಂತರ ಹಾಗೂ ಅಧ್ಯಕ್ಷರುಅಧಿಕಾರ ತ್ಯೇಜಿಸಿದ ನಂತರ ಆಪರೇಟರ ಅವರಫೋರ್ಜರಿ ಸಹಿ ಮಾಡಿ 11ಲಕ್ಷರೂ  ವಂಚನೆ ಸಾಬಿತಾಗಿದ್ದು ಕಾರಣ ಕೂಡಲೆ ಕಾನೂನು ಪ್ರಕಾರ ಕ್ರಮಕ್ಕೆ ಒತ್ತಾಯಿಸಿರುವರು. ನರಕಲದಿನ್ನಿ ಕಮಲದಿನ್ನಿ ನವಲಿ ರಾಮಪೂರ ಜೂಲಗುಡ್ಡ ಗ್ರಾಮದ ಜನರು ಲಿಖಿತ ದೂರು ನೀಡಿರುವರು. ಈ ಸಂದರ್ಭದಲ್ಲಿ ನುಗ್ಗಪ್ಪ ಗುರಿಕಾರ, ಶರಣಪ್ಪ ಶೀಲಪ್ಪ,ಬಸಲಿಂಗಪ್ಪ, ಷಡಕ್ಷರಯ್ಯ,ಲಕ್ಕಪ್ಪ ಸಂಗಯ್ಯ ನಡಳ್ಳಿ, ಬಸಣ್ಣ, ಈಶಪ್ಪ ಗುರಿಕಾರ ರಾಯಣ್ಣ ಸೇರಿದಂತೆ ಗ್ರಾಮಸ್ಥರು ಇದ್ದರು.

ವರದಿ – ಅಮಾಜಪ್ಪ ಹೆಚ್.ಜುಮಾಲಾಪೂರ

Leave a Reply

Your email address will not be published. Required fields are marked *