ಯಲಬುರ್ಗಾ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಕ್ಷಯ ರೋಗದ ಕುರಿತು ಎಲ್ಲರಿಗೂ ಜಾಗೃತಿ ಜಾಥಾ ಕಾರ್ಯಕ್ರಮ ನಡೆಸಿದರು….
ಕೋವಿಡ್ -19 ನಿಂದ ಬಳಲಿದ ನಂತರ ಅನೇಕ ರೋಗಿಗಳು ಶ್ವಾಸಕೋಶದಲ್ಲಿ ಫೈಬ್ರೋಸಿಸ್ ರೂಪದಲ್ಲಿ ಉಳಿದಿರುವ ಬದಲಾವಣೆಗಳು ಅಭಿವೃದ್ಧಿಯಾಗುತ್ತದೆ. ಈ ವರ್ಗದ ರೋಗಿಗಳಲ್ಲಿ ಮುಂದೆ ಕ್ಷಯರೋಗ ಕಾಡುವ ಅಪಾಯವಿದೆ. ಕೊರೋನಾ ಸೋಂಕಿರುವಾಗ ಹಾಗೂ ಕೊರೋನಾ ನಿವಾರಣೆಯ ನಂತರವೂ ಕ್ಷಯ ರೋಗ ಸಂಭವಿಸಬಹುದಾಗಿದೆ ಮತ್ತು ಕ್ಷಯ ರೋಗಿಗಳು ಚಿಕಿತ್ಸೆ ಪಡೆಯುವ ಜೊತೆಗೆ ಯಾವುದೇ ರೋಗ ಹರಡದಂತೆ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾಕ್ಟರ್ ಮಂಜುನಾಥ್ ಬ್ಯಾಳಹುಣಸಿ ಅವರು ಎಲ್ಲರಿಗೂ ಎಚ್ಚರಿಸಿದರು. ಕ್ಷಯ ರೋಗಕ್ಕೆ ಇದೀಗ ಸಾಕಷ್ಟು ಚಿಕಿತ್ಸೆಗಳಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ರೋಗಕ್ಕೆ ಸೂಕ್ತ ಚಿಕಿತ್ಸೆ ನೀಡುವುದು ಮತ್ತು ಸರಿಯಾದ ಪರೀಕ್ಷೆ ಮಾಡಿಸಬೇಕು ಚಿಕಿತ್ಸೆ ಪಡೆದು ಗುಣಮುಖರಾಗುವಂತೆ ಸಲಹೆ ನೀಡಿದರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಟ್ಟಣ ಗ್ರಾಮೀಣ ಭಾಗದ ಜನರ ಜೀವನ ಆರೋಗ್ಯ ಸುಧಾರಣೆಗಾಗಿ ಹಲವಾರು ಕಾರ್ಯಕ್ರಮಗಳು ಜಾರಿಗೊಳಿಸಿದ್ದು ಅದನ್ನು ಪ್ರತಿಯೊಬ್ಬರು ಸರ್ಕಾರಿ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಎಲ್ಲರಿಗೂ ಕರೆ ನೀಡಿದರು. ಈ ಸಂದರ್ಭದಲ್ಲಿ ಮುಖ್ಯ ಅಧಿಕಾರಿಗಳಾದ ಡಾ, ಪ್ರಕಾಶ ವಿ. ಡಾ, ಶೇಖರ್ ಬಜಂತ್ರಿ ಡಾ,ಸಂಗಣಬಸಪ್ಪ. ಚನ್ನಬಸಯ್ಯ ಹಿರೇಮಠ. ಶಿವರಾಜ್ ಮತ್ತಿತರರು ಉಪಸ್ಥಿತರಿದ್ದರು.
ವರದಿ – ಹುಸೇನ್ ಮೋತೆಖಾನ್