ಪತ್ರಕರ್ತರು ಬರವಣಿಗೆ, ಹೋರಾಟ ಮನೋಭಾವ ಹೊಂದಬೇಕು…..
*ಪತ್ರಕರ್ತರು ಬರವಣಿಗೆ, ಹೋರಾಟ ಮನೋಭಾವ ಹೊಂದಬೇಕು-ಚಿಕ್ಕಪ್ಪನಹಳ್ಳಿ ಷಣ್ಮುಖ*-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಾಮಡಗು ದಾಸೋಹಮಠದಲ್ಲಿ ನಡೆದ, ಪತ್ರಿಕಾ ದಿನಾಚರಣೆಯಲ್ಲಿ ಸಾಹಿತಿ ಹಾಗೂ ಹಿರಿಯ ಪತ್ರಕರ್ತರಾದ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿದರು.ಪತ್ರಕರ್ತರು ಪತ್ರಿಕೋದ್ಯಮದಲ್ಲಿ ಬರವಣಿಗೆ ಜೊತೆಗೆ ಹೋರಾಟದ ಮನೋಭಾವನೆ ಹೊಂದಬೇಕಿದೆ ಎಂದರು. ಪತ್ರಕರ್ತರು ಹೋರಾಟದ ಮನೋಭಾವನೆಯ ಮೂಲಕ, ನೊಂದವರ ಪರವಾದ ಬರವಣಿಗೆಯ ಮೂಲಕ ಸಮಾಜದ ಅಂಕು-ಡೊಂಕು ತಿದ್ದುವ ಕೆಲಸ ಮಾಡಬೇಕಿದೆ.ಮುದ್ರಣ ಮಾಧ್ಯಮವು ಸಂಕಷ್ಟದ ಹಾದಿಯಲ್ಲಿದ್ದು,ಪತ್ರಕರ್ತರ ಸ್ಥಿತಿಯೂ ಭಿನ್ನವಾಗಿಲ್ಲ ಗ್ರಾಮೀಣ ಭಾಗದ ಪತ್ರಕರ್ತರು ತಮ್ಮ ವರದಿಗಾರಿಕೆ ವೃತ್ತಿಯ ಜೊತೆಗೆ ಕುಟುಂಬಗಳ ಜೀವನ ನಿರ್ವಹಣೆಗೆ ಇತರೆ ಆದಾಯ ಮೂಲದ ಕಾಯಕವನ್ನು ನಂಬಿಕೊಳ್ಳುವಂಥ ಪರಿಸ್ಥಿತಿ ತಲೆದೋರಿದೆ ಎಂದರು. ಮಾಜಿ ಶಾಸಕ ಕೆ.ವಿ.ರವೀಂದ್ರನಾಥ ಬಾಬು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು,ದಿವಾನ್ ರಾಮಸ್ವಾಮಿ ಮೊದಲಿಯಾರ್ ಮತ್ತು ಚಿಕ್ಕಜೋಗಿಹಳ್ಳಿಯ ಉದ್ಯಮಿ ವೆಂಕಟಸ್ವಾಮಿ ಜೊತೆಗೂಡಿ. ಕರ್ನಾಟಕದ ಪ್ರತಿಷ್ಠಿತ ಎರಡು ದಿನ ಪತ್ರಿಕೆಗಳನ್ನು ಹೊರತಂದಿದ್ದು, ಎರಡು ಪತ್ರಿಕೆಗಳಿಗೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನವರ ಮಾಲೀಕತ್ವ ಎನ್ನುವುದು ಹೆಮ್ಮೆಯ ಸಂಗತಿ ಎಂದರು. ಪತ್ರಿಕೆಗಳು ಇತ್ತೀಚೆಗೆ ಪಕ್ಷಗಳ ಹಾಗೂ ಅವರ ಮುಖಂಡರ ಓಲೈಕೆಗೆ ಮುಖ ಮಾಡಿದ್ದು, ಪತ್ರಿಕಾರಂಗದ ಒಳ್ಳೆಯ ಬೆಳವಣಿಗೆಯಲ್ಲ ಇನ್ನೂ ಕೆಲ ಮಾಧ್ಯಮದಲ್ಲಂತೂ ಬ್ರೇಕಿಂಗ್ ಭರಾಟೆಯಲ್ಲಿ ತಪ್ಪು ಸುದ್ದಿಗಳು ಬಿತ್ತರವಾಗುತ್ತಿವೆ. ಅಂಥವುಗಳು ಕಡಿಮೆಯಾಗಿ ನಿಖರ ಮಾಹಿತಿಯೊಂದಿಗೆ ಸುದ್ದಿ ಪ್ರಕಟವಾದರೆ ಅದಕ್ಕೊಂದು ಮಹತ್ವ ಇರಲಿದೆ ಎಂದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಕೆ. ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ದಾಸೋಹ ಮಠದ ಐಮಡಿ ಶರಣಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜಿಪಂ ಸದಸ್ಯ ಎಚ್.ರೇವಣ್ಣ, ಮಾಜಿ ಸದಸ್ಯ ಕೆಂ.ಎಂ.ಶಶಿಧರ್, ಕಾಂಗ್ರೆಸ್ ಮುಖಂಡ ಗುಜ್ಜಲ್ ರಘು,ತಾಪಂ ಸದಸ್ಯ ಹುಡೇಂ ಪಾಪನಾಯಕ, ಹವ್ಯಾಸಿ ಬರಹಗಾರ ಹಾಗೂ ಪೊಲೀಸ್ ಪೇದೆ ಸ್ವರೂಪಾನಂದ ಎಂ.ಕೊಟ್ಟೂರು, ಹಿರಿಯ ಗಣ್ಯಮಾನ್ಯರಾದ ಕೆ.ಎಂ.ತಿಪ್ಪೇಸ್ವಾಮಿ, ಸೂರ್ಯಪಾಪಣ್ಣ, ಕೆ.ಚನ್ನಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ.ಶಿವರಾಜ್ ಮಾತನಾಡಿದರು. ತಾಪಂ ಅಧ್ಯಕ್ಷೆ ನಾಗರತ್ನಮ್ಮ, ಕೆ.ಲಿಂಗಪ್ಪ, ಕೂಡ್ಲಿಗಿ ಪಪಂ ಸದಸ್ಯರಾದ ಕಾವಲ್ಲಿ ಶಿವಪ್ಪನಾಯಕ, ಸೈಯದ್ ಶುಕೂರ್, ಮುಖಂಡರಾದ ಜಿ.ಆರ್.ಸಿದ್ದೇಶ್, ಜುಮ್ಮೋಬನಹಳ್ಳಿ ಜಿ. ಓಬಣ್ಣ, ಕೊಲುಮೆ ಹಟ್ಟಿ ವೆಂಕಟೇಶ್, ಸೂರ್ಯಪ್ರಕಾಶ್, ಅರುಣ್ ಕುಮಾರ್ ಗೌಡ, ಬಿ.ಟಿ.ಗುದ್ದಿ ದುರುಗೇಶ್, ಕೆ.ಜಿ.ಬಸವರಾಜ್, ಸೂಲದಹಳ್ಳಿ ರಾಜಪ್ಪ, ಪತ್ರಕರ್ತ ಹುಡೇಂ ಕೃಷ್ಣಮೂರ್ತಿ,ನಿವೃತ್ತ ಪಿಎಸೈ ಸಿದ್ದಪ್ಪ ಹಾಗೂ ಗಣ್ಯ ಮನ್ಯರು ವೇದಿಕೆಯಲ್ಲಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಭೀಮಣ್ಣ ಗಜಾಪುರ ಕಾರ್ಯಕ್ರಮ ನಿರ್ವಹಿಸಿದರು, ಪತ್ರಕರ್ತ ಭೀಮಸಮುದ್ರ ರಂಗನಾಥ ಸ್ವಾಗತಿಸಿ, ವಂದಿಸಿದರು. *ಸನ್ಮಾನ*-ಕೂಡ್ಲಿಗಿ ಮೈದಾನ ಗೆಳೆಯರ ಬಳಗ, ಜೆಸಿಐ ಪದಾಧಿಕಾರಿಗಳು, ಛಾಯಾಗ್ರಾಹಕ ಉಜ್ಜಿನಿ ಕೆ.ಎಂ.ರವಿಕುಮಾರ್ ಸೇರಿದಂತೆ ಇತರೆ ಗಣ್ಯಮಾನ್ಯರಿಗೆ ಸನ್ಮಾನಿಸಲಾಯಿತು. *ಗ್ರಾಮೀಣ ಪತ್ರಕರ್ತರಿಗೆ ಸರ್ಕಾರದ ಸೌಲಭ್ಯ ಸಿಗಲಿ-ಬಂಗ್ಲೆ ಮಲ್ಲಿಕಾರ್ಜುನ*- ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ ಮಾತನಾಡಿ, ಪತ್ರಕರ್ತ ಇಡೀ ತಿಂಗಳಿಗೆ ಕೇವಲ ಮೂರ್ನಾಲ್ಕು ಸಾವಿರ₹ ಸಂಭಾವನೆ ಪಡೆಯುತ್ತಿದ್ದು, ಗ್ರಾಮೀಣ ಭಾಗದ ಪತ್ರಕರ್ತರಿಗೆ ಸರ್ಕಾರದಿಂದ ಸೌಲಭ್ಯ ಸಿಗಬೇಕಿದೆ. ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ ಒತ್ತಾಯಿಸಿದರು. ಪತ್ರಿಕೆಗಳಿಗೆ ಸುದ್ದಿ ನೀಡಲು ದಿನವಿಡೀ ದುಡಿಯುವ ಪತ್ರಕರ್ತರನ್ನು,ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಸೇರಿಸಿ ಅಗತ್ಯ ಸೌಲಭ್ಯಗಳನ್ಜು ಕಲ್ಪಿಸುವಲ್ಲಿ ಪತ್ರಿಕೆಗಳ ಮಾಲೀಕರು, ಸಂಪಾದಕರೂ ಕಾಳಜಿ ತೋರಬೇಕಿದೆ ಎಂದರು.
ವರದಿ – ಚಲುವಾದಿ ಅಣ್ಣಪ್ಪ