ಅಕ್ರಮ ಮದ್ಯ,ಮರಳು,ಮಟ್ಕಾ ದಂಧೆ ಮಾಮೂಲಾ..!?-ದಲಿತ ಮುಖಂಡ ಎಸ್.ದುರುಗೇಶ……
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ,ಅಕ್ರಮ ಮದ್ಯ, ಮರಳು,ಮಟ್ಕಾ ರಾಜಾರೋಶವಾಗಿ ಜರುಗುತ್ತಿದೆ ಇದಕ್ಕೆ ಪೊಲೀಸರಿಗೆ ಮಾಮೂಲು ಕೊಡಲಾಗುತ್ತಿದೆ. ಎಂಬ ಆರೋಪ ಇದೆ.!? ಎಂದು ದಲಿತ ಮುಖಂಡ ಎಸ್.ದುರುಗೇಶ ಪೊಲೀಸ್ ಅಧಿಕಾರಿಗಳನ್ನು ನೇರವಾಗಿ ಪ್ರೆಶ್ನಿಸಿದ್ದಾರೆ. ಅವರು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದಲಿತರ ಸಭೆಯಲ್ಲಿ ಮಾತನಾಡಿದರು, ಹಾಡು ಹಗಲೇ ಅಕ್ರಮ ಮದ್ಯವನ್ನ ರಾಜಾರೋಷವಾಗಿ ಸಾಗಿಸಲಾಗುತ್ತಿದೆ. ಅಕ್ರಮ ಮರಳು ಸಾಗಿಸಲಾಗುತ್ತಿದೆ ಎಂಬ ದೂರುಗಳಿವೆ,ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಗಲ್ಲಿ ಗಲ್ಲಿಗಳಲ್ಲಿ ಮಟ್ಕಾ ಜೂಜು ಜರುಗುತ್ತಿರುವುದಾಗಿ ದೂರುಗಳಿದ್ದು. ಇದಕ್ಕೆ ಪೊಲೀಸರಿಗೆ ತಿಂಗಳಾ ಮಾಮೂಲು ಕೊಡುತ್ತಿರುವುದಾಗಿ ಅಕ್ರಮಕೋರರು ಹೇಳಿಕೊಳ್ಳುತ್ತಿದ್ದಾರೆ,ಸಭೆಗಳಲ್ಲಿ ಪ್ರಸ್ಥಾಪಿಸಿದರೂ ಏನೂ ಪ್ರಯೋಜನವಾಗುತ್ತಿಲ್ಲ. ಅಕ್ರಮ ಮದ್ಯ ಮಟ್ಕಾ ಹತ್ತಿಕ್ಕಿ ಪೊಲೀಸರು ಪ್ರಾಮಾಣಿಕವಾಗಿ ದಕಿತರ ಪರ ಕರ್ಥವ್ಯ ನಿರ್ವಹಿಸಬೇಕಿದೆ ಎಂದು ಪೊಲೀಸ್ ಅಧಿಕಾರಿಗಳಿಗೆ ದುರುಗೇಶ ತಿಳಿಸಿದರು. ಅಕ್ರಮ ಮದ್ಯ ಮಟ್ಕಾ ಜೂಜುಗಳಿಂದಲೇ ದಲಿತರು ಆರ್ಥಿಕವಾಗಿ ಶೋಷಣೆಗೊಳಗಾಗುತ್ತಿದ್ದಾರೆ. ಕಾರಣ ಶೀಘ್ರವೇ ಅಕ್ರಮಗಳನ್ನು ಹತ್ತಿಕ್ಕಬೇಕಿದೆ ಮತ್ತು ಹಿಂದಿನ ಸಭೆಯಲ್ಲಿ ಪ್ರಸ್ಥಾಪಿಸಿರುವ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ.ದಲಿತರ ಸಭೆಗಳನ್ನ ಗ್ರಾಮೀಣ ಭಾಗಗಳಲ್ಲಿ ಹಾಗೂ ಉನ್ನತ ವರ್ಗದವರಿರುವ ಊರು ಕೇರಿಗಳಲ್ಲಿ, ಆಗಾಗ್ಗೆ ದಲಿತರ ಸಭೆ ಜರುಗಿಸಬೇಕಿದೆ ಇತರೆ ಇಲಾಖಾಧಿಕಾರಿಗಳು ಸಭೆಗಳಲ್ಲಿ ಪಲ್ಗೊಂಡಲ್ಲಿ ಸಭೆ ಅರ್ಥಪೂರ್ಣವಾಗಲಿದೆ ಎಂದರು. ಪಪಂ ಸದಸ್ಯ ಕಾವಲ್ಲಿ ಶಿವಪ್ಪನಾಯಕ,ದಲಿತ ಹಿರಿಯ ಮುಖಂಡರಾದ ಕರಿಬಸಪ್ಪ,ಯುವ ಮುಖಂಡರಾದ ಗುರಿಕಾರ ರಾಘವೇಂದ್ರ,ಸಾಲುಮನಿ ರಾಘವೇಂದ್ರ,ಕಾರ್ಮಿಕ ಮುಖಂಡ ಗುನ್ನಳ್ಳಿ ರಾಘವೇಂದ್ರ ಮಾತನಾಡಿದರು. ಡಿವೈಎಸ್ಪಿ ಹರೀಶ್ ಮಾತನಾಡಿ ಸಭೆಯಲ್ಲಿ ಪ್ರಸ್ಥಾಪಿಸಿರುವ ವಿಷಯಗಳ ಕುರಿತು, ಪ್ರಾಮಾಣಿಕವಾಗಿ ಸ್ಪಂಧಿಸಲಾಗುವುದು ಅದಕ್ಕೆ ಮುಖಂಡರು ನಾಗರೀಕರು ಸಹಕರಿಸಬೇಕೆಂದರು.ಸಿಪಿಐ ವಸಂತ ಅಸೋದೆ,ಪಿಎಸೈ ಶರತ್,ಅಪರಾಧ ಪಿಎಸೈ ಸೇರಿದಂತೆ ಪೋಲೀಸ್ ಸಿಬ್ಬಂದಿ ಇದ್ದರು.ಜನಪ್ರತಿನಿಧಿಗಳು ಹಾಗೂ ದಲಿತ ಮುಖಂಡರು ಸಭೆಯಲ್ಲಿದ್ದರು..
ವರದಿ – ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ