ಚಿಕ್ಕ ಮ್ಯಾಗೇರಿ ಗ್ರಾಮಪಂಚಾಯ್ತಿ ಪಿಡಿಒ, ಹಾಗೂ ಬಿಲ್ ಕಲೆಕ್ಟರ್ ರುದ್ರೇಶ ಲಂಚಾವತಾರ ಹಾಗೂ ಭ್ರಷ್ಟಾಚಾರ ಕೇಳೋರಿಲ್ಲವೇ ಯಾರು..? ಶಾಸಕರೆ ನ್ಯಾಯ ಕೊಡಿಸಿ……
ಯಲಬುರ್ಗಾ: ಚಿಕ್ಕ ಮ್ಯಾಗೇರಿ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳ ಅವ್ಯವಹಾರ ಮತ್ತು ನಿರ್ಲಕ್ಷದ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ, ಹಾಗೂ ಸ್ಥಳೀಯ ಶಾಸಕರಾದ ಹಾಲಪ್ಪ ಆಚಾರ್, ಹಾಗೂ ಯಲಬುರ್ಗಾ ಪೊಲೀಸ್ ಇಲಾಖೆಗೆ ನ್ಯಾಯಕ್ಕಾಗಿ ಹಲವುಬಾರಿ ಅಲೆದಾಡಿದರು ಯಾರು ಕ್ರಮಕ್ಕೆ ಮುಂದಾಗಿಲ್ಲ.ಮಾನ್ಯ ಜಿಲ್ಲಾಧಿಕಾರಿಗಳನ್ನು ಹಲವು ಬಾರಿ ಕೇಳಿದರು ಇದರಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಶಶಿಕಲಾ ಗಂಡ ಈಶಪ್ಪ ಮಾಡ್ಲಗಟ್ಟಿ ಸಾ. ಮಲಕ ಸಮುದ್ರ ತಾ. ಯಲಬುರ್ಗಾ ಜಿ. ಕೊಪ್ಪಳ ಇವರು ಆರೋಪಿಸಿದ್ದಾರೆ. ತಮ್ಮ ಅಜ್ಜನ ಮೂಲ ಆಸ್ತಿಯ ಹಕ್ಕುಪತ್ರದ ವಿವರಗಳ ಕೊಡುವಂತೆ ಹಲವುಬಾರಿ ಪಿ. ಡಿ. ಓ ಚನ್ನಬಸನಗೌಡ ಹಾಗೂ ಬಿಲ್ ಕಲೆಕ್ಟರ್ ಆದ ರುದ್ರೇಶ ಹರಿಜನ ಅವರನ್ನು ಕೇಳಲು ಹೋದರೆ ಬಾಯಿಗೆ ಬಂದಂತೆ ಬಯ್ಯುವದು, ಹಾಗೂ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ, ಹಾಗೂ ಮಾನಸಿಕವಾಗಿ ನಮಗೆ ಹಿಂಸೆಯನ್ನು ನೀಡುತ್ತಿದ್ದಾರೆ. ನಮ್ಮದೇ ಆಸ್ತಿಯ ದಾಖಲಾತಿಗಳನ್ನು ಮೊಟೇಶನ್,ಉತಾರ, ತೆರಿಗೆ ಪ್ರತೀ ಮೂಲ ಹಾಗೂ ಪ್ರಸ್ತುತ ಚಕ್ ಬಂದಿಯ ದೃಡೀಕೃತ ನಕಲು ನಮಗೆ ಕೊಡುತ್ತಿಲ್ಲ ಎಂದು ಶಶಿಕಲಾ ಗಂಡ ಈಶಪ್ಪ ಆರೋಪಿಸಿದ್ದಾರೆ.
ವರದಿ – ಹುಸೇನಭಾಷ ಮೊತೇಖಾನ