ಆಧುನಿಕ ಜೀವನದಲ್ಲಿ ಸಂತೃಪ್ತಿ ಬದುಕಿಗೆ ಸಾವಯವ ಆಹಾರ ಬಳಸಿ ಆರೋಗ್ಯ ಹೊಂದಿರಿ : ಅದೃಶ್ಯ ಕಾಡಸಿದ್ದೇಶ್ವರರು…….

Spread the love

ಆಧುನಿಕ ಜೀವನದಲ್ಲಿ ಸಂತೃಪ್ತಿ ಬದುಕಿಗೆ ಸಾವಯವ ಆಹಾರ ಬಳಸಿ ಆರೋಗ್ಯ ಹೊಂದಿರಿ : ಅದೃಶ್ಯ ಕಾಡಸಿದ್ದೇಶ್ವರರು …….

ಭೂ ತಾಯಿ ತನ್ನ ಮಡಿಲಲ್ಲಿ ಕೋಟ್ಯಂತರ ಜೀವಾಣುಗಳನ್ನು ರಕ್ಷಿಸುತ್ತಿದ್ದು, ನಾವುಗಳು ವಿಷಯುಕ್ತ ರಾಸಾಯನಿಕ ಗೊಬ್ಬರ ಹಾಕಿ ಅವುಗಳನ್ನು ಕೊಲ್ಲುತ್ತಿದ್ದೇವೆ. ರೈತರು ತಮ್ಮ ಭೂಮಿಗಳಿಗೆ ವಿಷಪೂರಿತ ಗೊಬ್ಬರ ಹಾಕದೇ ಸಾವಯವ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು. ಇಂದು ವಿಷಪೂರಿತ ಆಹಾರ ಸೇವಿಸಿ ಹಲವು ರೋಗಗಳಿಗೆ ಪೀಡಿತರಾಗುತ್ತ ಮನೆಯನ್ನು ಆಸ್ಪತ್ರೆಯನ್ನಾಗಿ ಮಾಡಿದ್ದೇವೆ ಅದಕ್ಕಾಗಿ ಆಧುನಿಕ ಜೀವದಲ್ಲಿ ಮನುಷ್ಯ ಸಂತೃಪ್ತಿಯ ಬದುಕು ಹೊಂದ ಬೇಕಾದರೆ ಸಾವಯವ ಆಹಾರ ಬಳಿಸಿ ಆರೋಗ್ಯ ಹೊಂದಬೇಕಾಗಿದೆ ಎಂದು ಕೋಲ್ಹಾಪುರದ ಸಿದ್ದಗಿರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರರು ಹೇಳಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ  ಶ್ರೀನಿವಾಸ ಟ್ರೇಡರ್ಸ್  ಆರ್. ಜಿ. ಟಿ. ಆರಗ್ಯಾನಿಕ್ಸ್ ಆಯಿಲ್ ಮಿಲ್‍ನ್ನು ಉದ್ಘಾಟಿಸಿ ಮಾತನಾಡುತ್ತಾ, ಆಧುನಿಕ ಜೀವನದಲ್ಲಿ ಜನತೆ ಪಾಶ್ಚಿಮಾತ್ಯ ಜೀವನ ಶೈಲಿಗೆ ಬಲಿಯಾಗುತ್ತಿದೆ. ನಮ್ಮ ದೇಶಿಯ ಸಂಸ್ಕೃತಿಯನ್ನು ಪರಕೀಯರು ಅನುಸರಿಸುತ್ತಿರುವಾಗ ನಾವು ಬೇರೆಯ ಜನರ ಜೀವನ ಶೈಲಿಗೆ ಮಾರುಹೋಗುತ್ತಿದೆ. ನಮ್ಮ ದೇಶದ ರೈತ ಜಗದ ದೈವವಾಗಿದ್ದಾನೆ. ರೈತರು ಇಂದು ರಾಸಾಯನಿಕ ಜೀವ ಹಾನಿಕರ ವಿಷಪೂರಿತ ಗೊಬ್ಬರ ಹಾಕಿ ಭೂತಾಯಿಯನ್ನು ಬರಡು ಮಾಡುತ್ತಿದ್ದಾನಲ್ಲದೆ, ಜನತೆಗೆ ವಿಷಯ ಪೂರಿತ ಆಹಾರ ನೀಡುತ್ತಿದ್ದಾನೆ. ಕೃಷಿ ಪದ್ದತಿಯಲ್ಲಿಯೇ ಸಾವಯವ ಕೃಷಿ ಪದ್ದತಿಯು ಶ್ರೇಷ್ಠವಾಗಿದ್ದು, ಅದನ್ನು ವಿದೇಶಿಗರೇ ಮೆಚ್ಚಿ ಅನುಸರಿಸುತ್ತಿದ್ದಾರೆ. ಸಾವಯವ ಕೃಷಿಯಿಂದ ಉತ್ಪಾದನೆಯಾದ ಬೆಳೆಯುವ ಸಮೃದ್ದಿಯಾಗಿದ್ದು, ಆರೋಗ್ಯಕರವಾಗಿರುತ್ತದೆ. ಇಂಥ ಸಾವಯವ ಬೆಳೆಯಿಂದ ಉತ್ಪಾದನೆಯಾದ ಶೇಂಗಾ, ಕುಸುಬಿ ಮುಂತಾದವುಗಳಿಂದ ಅಡುಗೆ ಎಣ್ಣೆ ತಯಾರಿಸುವ ಘಟಕವನ್ನು ಈ ಭಾಗದಲ್ಲಿ ಪ್ರಾರಂಭಿಸಿರುವುದು ಒಳ್ಳೇಯ ಕಾರ್ಯ. ಮಾರುಕಟ್ಟೆಯಲ್ಲಿ ದೊರೆಯುವ ರಾಸಾಯನಿಕ ಯುಕ್ತ ಅಡುಗೆ ಎಣ್ಣೆಯನ್ನು ತ್ಯಜಿಸಿ, ಆರೋಗ್ಯ ದೃಷ್ಠಿಯಿಂದ ವಿಟಮಿನ್‍ಯುಕ್ತ ಅಡುಗೆ ಎಣ್ಣೆಯನ್ನು ಬಳಸುವುದು ಯೋಗ್ಯ. ಮುಂಬರುವ ದಿನಗಳಲ್ಲಿ ಸಾವಯವ ಕೃಷಿಯನ್ನು ರೈತರನ್ನು ಹೆಚ್ಚಾಗಿ ಅಳವಡಿಸಿಕೊಂಡು ಆರೋಗ್ಯಕ್ಕೆ ಯೋಗ್ಯವಾದ ತರಕಾರಿ, ಹಣ್ಣು ಹಂಪಲಗಳು ದೊರೆಯುವ ಕಾಲ ದೂರವಿಲ್ಲ ಎಂದರು. ಮಾಜಿ ಸಚಿವೆ ಉಮಾಶ್ರೀ ಮಾತನಾಡಿ, ಸಾವಯುವ ಕೃಷಿ ಪದ್ದತಿಯಿಂದ ಬೆಳೆದ ಬೆಳಗಳು ಮನುಷ್ಯನಿಗೆ ಆಹಾರದಲ್ಲಿ ದೊರೆಯ ಬೇಕಾದ ಎಲ್ಲ ಖನಿಜ, ವಿಟಮಿನ್, ಅಗತ್ಯ  ಪೋಷಕಾಂಶಗಳು ದೊರೆಯುತ್ತವೆ. ಮುಂದೊಂದು ದಿನ ದೇಶದ ರೈತರು ಸಾಯಯವ ಕೃಷಿ ಪದ್ದತಿಯಡಿಯಲ್ಲಿ ಬೆಳೆಯನ್ನು ಬೆಳೆದು ರಾಷ್ಟ್ರವನ್ನು ರೋಗಮುಕ್ತ ದೇಶವನ್ನಾಗಿಸಬಹುದು. ರೈತರು ತಮ್ಮ ಜಮೀನುಗಳಲ್ಲಿ ದೇಶಿಯ ಪದ್ದತಿಗಳ ಕೃಷಿ ಸಂಸ್ಕೃತಿಯನ್ನು ಅಳವಡಿಸಿ ಜನತೆ ಆರೋಗ್ಯ ಭಾಗ್ಯ ಕರುಣಿಸಬಹುದು ಎಂದರು. ಇದೇ ಸಂದರ್ಭದಲ್ಲಿ ರಬಕವಿ ಶ್ರೀ ಬ್ರಹ್ಮಾನಂದ ಮಠದ ಶ್ರೀಗುರು ಸಿದ್ದೇಶ್ವರ ಸ್ವಾಮಿಜಿ, ಕೋಲ್ಹಾರದ ಶ್ರೀ ಕಲ್ಲಿನಾಥ ದೇವರು, ರಾಮಣ್ಣ ಹುಲಕುಂದ, ನೀಲಕಂಠ ಮುತ್ತೂರ, ಸಂಗಪ್ಪ ಕುಂದಗೋಳ, ಸತ್ಯಪ್ಪ ಮಗದುಮ್ಮ, ಬುದ್ದಪ್ಪ ಕುಂದಗೋಳ, ಚಿದಾನಂದ ಗಾಳಿ. ರಾಮದುರ್ಗ ಸರ  ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *