ಶಾಶ್ವತ ಪರಿಹಾರ ನೀಡುವಂತೆ ವತಾಯಿಸಿ ಅಥಣಿ ಉಪ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ ರೈತರು…
ಆ: ಪ್ರವಾಹ ಭೀತಿ ಎದುರಿಸುತ್ತಿರುವ ಕೃಷ್ಣಾ ನದಿ ತೀರದ ಜನರು ಪರಿಸ್ಥಿತಿ ಹೇಳತೀರದಾಗಿದೆ. ಹೌದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ನದಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಸಿಡಿದೆದ್ದ ರೈತ ಮುಖಂಡರು ಅಥಣಿ ತಾಲೂಕಿನ ಗ್ರಾಮಗಳಾದ ನದಿ ಇಂಗಳಗಾವ್, ದರೂರ್, ತೀರ್ಥ, ಸಪ್ತಸಾಗರ, ಕವಟಗೊಪ್ಪ, ಶೇಗುಣಸಿ ಸೇರಿದಂತೆ ಹಲವು ಹಳ್ಳಿಗಳು ಸಂಪೂರ್ಣ ಜಲಾವೃತವಾಗಿದ್ದು ವಾಸಿಸಲು ಸೂರು ಇಲ್ಲದೆ ಮನೆ-ಮಠ ಕಳೆದುಕೊಂಡು ಕಾಳಜಿ ಕೇಂದ್ರದಲ್ಲಿ ಜೀವನ ಸಾಕಾಗಿ ಹೋಗಿದೆ ನಮಗೆ ಶಾಶ್ವತ ಪರಿಹಾರ ನೀಡಿ ಎಂದು ರೈತರು ಅಥಣಿ ತಹಸಿಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ರೈತ ಮುಖಂಡ ಮಹದೇವ್ ಮಡಿವಾಳ ನಮ್ಮ ತಾಲ್ಲೂಕಿನಲ್ಲಿ ಒಂದೆಡೆ ಬರಗಾಲ ಇನ್ನೊಂದೆಡೆ ಪ್ರವಾಹ ಭೀತಿ ಇರುವಂತ ಸಂದರ್ಭದಲ್ಲಿ ನಮಗೆ ಬರಬೇಕಾದ ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಬಿಲ್ ಬರದೇ ಇರುದು ಉಪಜೀವನಕ್ಕೆ ನಡೆಸುವುದೇ ಕಷ್ಟ ಇಂತಹ ಸಮಯದಲ್ಲಿ ಖಾಸಗಿ ಫೈನಾನ್ಸಿಯಲ್ ಅಧಿಕಾರಿಗಳು ಬಾಕಿ ಇರುವ ಕಂತುಗಳನ್ನು ತುಂಬಿ ಎಂದು ನೋಟಿಸ್ ಮೇಲೆ ನೋಟಿಸ್ ಕಳಿಸುತ್ತಿದ್ದಾರೆ. ಕಂತುಗಳನ್ನು ಹೇಗೆ ತುಂಬುವುದು ಎಂದು ಉಪ ತಶಿಲ್ದಾರ ಅವರನ್ನು ತರಾಟೆಗೆ ತೆಗೆದುಕೊಂಡರು. ಇನ್ನು 15 ದಿನಗಳಲ್ಲಿ ಪರಿಹಾರ ನೀಡದಿದ್ದರೆ ತಹಶೀಲ್ದಾರ್ ಕಚೇರಿ ಮುಂದೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ಇನ್ನುಳಿದ ರೈತ ಮುಖಂಡರು ರೈತ ಮಹಿಳೆಯರು ಉಪಸ್ಥಿತ ಇದ್ದರು. ಬೈಟ್. ಮಹಾದೇವ್ ಮಡಿವಾಳ.
ವರದಿ – ಮಹೇಶ ಶರ್ಮಾ