ಚಿಟಗುಪ್ಪಾ ನಗರದ ದಯಾನಂದ ಕಾಂಬಳೆ ಯವರ ಹೊಲದಲ್ಲಿ ಜರುಗಿದ ತಾಲೂಕು ಮಟ್ಟದ ಸಸಿಗಳು ನೆಡುವ ಕಾರ್ಯಕ್ರಮ..
(ವಿಕಾಸ್ ಅಕಾಡೆಮಿ ಚಿಟಗುಪ್ಪಾ ತಾಲೂಕಿನ ವತಿಯಿಂದ ಹಮ್ಮಿಕೊಂಡ ತಾಲೂಕು ಮಟ್ಟದ ಕಾರ್ಯಕ್ರಮ) ಚಿಟಗುಪ್ಪಾ : ಪರಿಸರ ಹಾಗೂ ಸಾವಯವ ಕೃಷಿ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚಿಸುತ್ತದೆ. ಸಸಿಗಳನ್ನು ನೆಡುವ ಮೂಲಕ ಆಕ್ಸಿಜನ್ ಸಮಸ್ಯೆ ನೀಗಿಸಬಹುದು. ಅಲ್ಲದೆ ಸಂಪತ್ಬರಿತ ನಾಡಾಗಿ ಪರಿವರ್ತನೆ ಮಾಡಬಹುದು. ಇದಕ್ಕೆ ತಾವೆಲ್ಲರೂ ಕೈಜೋಡಿಸುವ ಕೆಲಸ ಆಗಬೇಕು. ಹಾಗೆ ಸಹಕಾರ ನೀಡುವ ಮೂಲಕ ತಾವುಗಳು ಮನೆಗೊಂದು, ಮಗುವಿಗೊಂದು ಅನ್ನುವಂತೆ ಗಿಡಗಳನ್ನು ಹಚ್ಚುವ ಕಾರ್ಯ ಆಗಬೇಕೆಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಬೀದರ ಜಿಲ್ಲೆಯ ನಿರ್ದೇಶಕರಾದ ರೇವಣ್ಣಸಿದ್ದಪ್ಪ ಜಲಾದೆಯವರು ಹೇಳಿದರು. ಪಟ್ಟಣದ ದಯಾನಂದ ಕಾಂಬಳೆ ಯವರ ಹೊಲದಲ್ಲಿ ಶುಕ್ರವಾರ ತಾಲೂಕು ವಿಕಾಸ್ ಅಕಾಡೆಮಿ ಚಿಟಗುಪ್ಪಾ ವತಿಯಿಂದ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ವಿಕಾಸ್ ಅಕಾಡೆಮಿಯ ವಿವಿಧ ಯೋಜನೆಗಳ ಕುರಿತು ವಿವರಿಸಿ ಕೃಷಿ ಹಾಗೂ ವಿವಿಧ ಸೇವೆಗಳ ಜೊತೆಗೆ ಪರಿಸರ ಸಂರಕ್ಷಣೆ ಸಹ ಇಂದಿನ ದಿನಗಳಲ್ಲಿ ಮಹತ್ವದಾಗಿದೆ. ಪರಿಸರ ರಕ್ಷಣೆ ಮಾಡುವುದು ನಮ್ಮೆಲ್ಲರ ಪಾತ್ರ ಅತಿ ಮುಖ್ಯವಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಚಿಟಗುಪ್ಪಾ ವೃತ್ತ ನಿರೀಕ್ಷರಾದ ಅಮೂಲ ಕಾಳೆಯವರು ಮಾತನಾಡಿ, ವಿಕಾಸ್ ಅಕಾಡೆಮಿಯ ನಿಸ್ವಾರ್ಥ ಸೇವೆ ಹಾಗೂ ಬಸವರಾಜ ಪಾಟೀಲ ಸೇಡಂ ರವರ ಸಮಾಜಿಕ ಸೇವೆಗಳನ್ನು ಮಾಡುತ್ತಿರುವುದು ಹೆಮ್ಮೆ ಎದೆ ಎಂದು ಕೊಂಡಾಡಿ,ಇದೆ ರೀತಿ ಚಿಟಗುಪ್ಪಾ ತಾಲೂಕಿನಲ್ಲಿ ಅವರ ಆಶಯದಂತೆ ಕೆಲಸಗಳನ್ನು ಮಾಡಿಕೊಂಡು ಹೋಗುವ ಮೂಲಕ ನಾಡಿಗೆ ಮಾದರಿ ತಾಲೂಕಾವಾಗಿ ಮಾಡಬೇಕೆಂದು ತಿಳಿಸಿದರು. ಅತಿಥಿಗಳಾಗಿ ಆಗಮಿಸಿದ ತಾಲೂಕು ವಿಕಾಸ್ ಅಕಾಡೆಮಿಯ ಪ್ರಮುಖರಾದ ಸೂರ್ಯಕಾಂತ ಮಠಪತಿ ಯವರು ವಿಕಾಸ್ ಅಕಾಡೆಮಿಯ ಉದ್ದೇಶ ಹಾಗೂ ಕಾರ್ಯ ಯೋಜನೆಗಳ ಬಗ್ಗೆ ವಿವರಿಸಿದರು. ಮತ್ತೊಬ್ಬ ಮುಖ್ಯಅತಿಥಿ ಅತಿಥಿಗಳಾಗ ಆಗಮಿಸಿದ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಅಮೃತ್ ಗೌರೆಯವರು ಮಾತನಾಡಿ ಸಸ್ಯ ಸಂಪತ್ತು ನಾವೆಲ್ಲರೂ ಕಾಪಾಡುವುದು ಅವಶ್ಯಕವಾಗಿದೆ.ಈ ದಿಸೆಯಲ್ಲಿ ಸರಕಾರವೇ ಕೆಲಸ ಮಾಡಬೇಕೆಂಬ ಭಾವನೆ ಬೇಡ, ಇದು ಜನಸಾಮಾನ್ಯರ ಕರ್ತವ್ಯವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಿಕಾಸ್ ಅಕಾಡೆಮಿಯ ಸಂಚಾಲಕರಾದ ಶಿವಶಂಕರ ತರನ್ನಳ್ಳಿಯವರು ಮಾತನಾಡಿ, ವಿಕಾಸ್ ಅಕಾಡೆಮಿ ನಡೆದು ಬಂದ ದಾರಿ, ಮುಂದೆ ಮಾಡಬೇಕಾದ ಕೆಲಸ ಹಾಗೂ ಯೋಜನಗಳ ಬಗ್ಗೆ ಸುದೀರ್ಘವಾಗಿ ವಿವರಿಸಿದರು. ಅದೇ ರೀತಿ ಚಿಟಗುಪ್ಪಾ ತಾಲೂಕಿನ ವಿಕಾಸ್ ಅಕಾಡೆಮಿಯ ಕೆಲಸಗಳು ಚುರುಕಾಗಿ ನಡೆಯುತ್ತಿವೆ. ಹೀಗೆ ಸಾಗಲೆಂದು ತಿಳಿಸಿದರು. ಕಾರ್ಯಕ್ರಮದ ಸಾನಿಧ್ಯ ವಹಿಸಿದ ಶ್ರೀನಿವಾಸ್ ಸರಡಗಿ ಮಠದ ಪೂಜ್ಯರಾದ ಶ್ರೀ ರೇವಣ್ಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ,ಪರಿಸರ ರಕ್ಷಣೆ ಕೇವಲ ಒಂದು ದಿನ ಮಾಡುವ ಕೆಲಸವಲ್ಲ.ಪ್ರತಿನಿತ್ಯ, ಪ್ರತಿದಿನ ಸಂರಕ್ಷಣೆ ಮಾಡುವ ಕಾರ್ಯವಾಗಬೇಕಾಗಿದೆ. ಈ ದಿಸೆಯಲ್ಲಿ ವಿಕಾಸ್ ಅಕಾಡೆಮಿ ಮಾಡುತ್ತಿರುವ ಸೇವೆ ಅಮೂಲ್ಯ ಹಾಗೆ ಬಸವರಾಜ ಪಾಟೀಲ ಸೇಡಂ ರವರ ಸೇವೆ ಅಪಾರವಾಗಿದೆ. ಹಾಗಾಗಿ ನಾವೆಲ್ಲರೂ ವಿಕಾಸ್ ಅಕಾಡೆಮಿಯ ಕೆಲಸಗಳಿಗೆ ಪ್ರೋತ್ಸಾಹ, ಬೆಂಬಲ ನೀಡುವ ಮೂಲಕ ಅವರಿಗೆ ಉತ್ತೇಜನ ನೀಡುವ ಕೆಲಸ ಮಾಡೋಣ, ಪರಿಸರ ಹಾಗೂ ಅರಣ್ಯ ಸಂಪತ್ತು ಸಂರಕ್ಷಣೆ ಮಾಡಿ, ಮುಂದಿನ ಪೀಳಿಗೆಗೆ ಕೊಡುವ ನಿಟ್ಟಿನಲ್ಲಿ ಶ್ರಮಿಸೋಣವೆಂದರು. ತಾಲೂಕು ವಿಕಾಸ್ ಅಕಾಡೆಮಿಯ ಸಂಚಾಲಕರು ಹಾಗೂ ಕಾರ್ಯಕ್ರಮದ ಸಂಯೋಜಕರಾದ ಸಂಗಮೇಶ ಎನ್ ಜವಾದಿಯವರು ಪ್ರಸ್ತಾಪಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಆಯೋಜಕರು ಹಾಗೂ ಸಮಾಜಿಕ ಸೇವಕರಾದ ದಯಾನಂದ ಕಾಂಬಳೆ ಯವರು ಸ್ವಾಗತಿಸಿದರು. ಬೀಮಶೇಟ್ಟಿ ವಡ್ಡನಕೇರಾ ರವರು ನಿರೂಪಿಸಿದರು. ತುಕರಾಮ ಅಂಬೆಗಾರವರು ವಂದಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಾದ ಗುರುಲಿಂಗಪ್ಪಾ ಮೆಲದೊಡ್ಡಿ,ದಯಾನಂದ ಕಾಂಬಳೆ, ಸಾವಿತ್ರಿ ಮುತ್ತಲಗೇರಾ,ಅಸದ್ ಪಟೇಲರವನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಸಹ ಪ್ರಮುಖರಾದ ರಾಘವೇಂದ್ರ ಕುಲಕರ್ಣಿ, ಗಣ್ಯರಾದ ಮಾಹಾರುದ್ರ ಅಣದೂರೆ, ಎನ್ ಎಸ್ ಮಲ್ಲಶೆಟ್ಟಿ, ಆನಂದ ಚೌಧರಿ, ತಿಪ್ಪಣ್ಣಾ ಶರ್ಮಾ, ವಿಠಲರಾವ ಪಟ್ಟಣ್ಣಕರ,ಮಲ್ಲಪ್ಪಾ ಗಡಮಿ,ತುಕರಾಮ ವರ್ಮಾ, ರೇವಣ್ಣಸಿದ್ದ ಜಾಡರ್, ಬಸವರಾಜ ಅಷ್ಟಗಿ, ಸಂಜು ಪಟ್ಟಣ್ಣಕರ, ಈರಣ್ಣಾ ಚೀತಕೋಟಿ, ಬಸವರಾಜ ಪಾಟೀಲ, ಬಸವರಾಜ ಮಂಕಲ್, ಸಿದಾರ್ಥ ಶಾಖಾ, ಮಹಮ್ಮದ್ ಇಕ್ಬಾಲ್, ಮಹಮ್ಮದ್ ಅಲ್ಲಾವೂದ್ದಿನ್, ಭಗವಾನ್ ಡಾಂಗೆ,ಶಾಂತು ಪಾರ್,ಪ್ರಭು ಜಾಬಾ, ಮನೋಜಕುಮಾರ ಶರ್ಮಾ,ಭರತಕುಮಾರ ಮಾಳವಾಡ್, ರಜನಿಕಾಂತ್ ಪೂಲೆ ಸೇರಿದಂತೆ ಅಪಾರ ಪ್ರಮಾಣದಲ್ಲಿ ರೈತ ಬಂಧುಗಳು, ವಿಕಾಸ್ ಅಕಾಡೆಮಿಯ ಪದಾಧಿಕಾರಿಗಳು ಹಾಗೂ ನಗರ ಸಲಹಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ವರದಿ – ಸಂಗಮೇಶ ಎನ್ ಜವಾದಿ