ಅನ್ನದಾತರ ಅನ್ನ ಕದಿಯೋ ಖದೀಮರನ್ನು ಹಿಡಿದ ಆನ್ನದಾತರು–
ಅನ್ನಭಾಗ್ಯ ಪಡಿತರ ಕಾಳ ಸಂತೆ ಕೊರರಿಂದ ಸಾಗಾಣಿಕೆ ಅಕ್ರಮಕ್ಕೆ ಬೀಳುತ್ತಿಲ್ಲ ಬ್ರೇಕ್, ಹೊಸಹಳ್ಳಿ ಭಾಗದಲ್ಲಿ ಅಕ್ರಮಕೋರರದ್ದೇ ಕಾರು ಬಾರೆಂದು ಹೋರಾಟಗಾರರ ದೂರು, ನ್ಯಾಯಬೆಲೆ ಅಂಗಡಿಯಿಂದ ಟಾಟಾ ಎಸ್ ಮೂಲಕ ನಿರಂತರವಾಗಿ ಪಡಿತರ ಸಾಗಾಟ ಮಾಡುತ್ತಿದ್ದಾರೆಂದು ಗ್ರಾಮಸ್ಥರಿಂದ ದೂರು. ಅಕ್ರಮವಾಗಿ ಪಡಿತರ ಸಾಗಾಟ ಮಾಡುತ್ತಿದ್ದ ಖದೀಮರು ..! ಎಂ.ಬಿ ಅಯ್ಯನಹಳ್ಳಿಯಲ್ಲಿ ಗ್ರಾಮಸ್ಥರಿಗೆ ತಗ್ಲಾಕೊಂಡಿದ್ದಾರೆ ಅಕ್ರಮಕೋರರು ರಾಗಿ ಮೂಟೆಗಳ ಸಮೇತಾ ಖಧೀಮರನ್ನ ಹಿಡಿದ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದರೂ ಪ್ರಯೋಜನವಾಗಿಲ್ಲ, ಕೂಡ್ಲಿಗಿಯ ಪ್ರಭಾವಿ ವ್ಯಕ್ತಿಗಳಿಂದ ಪಡಿತರ ಸಾಮಾಗ್ರಿಗಳ ಸಾಗಾಟ ಜಾಲಕ್ಕೆ ಕುಮ್ಮಕ್ಕು..!? ಅಕ್ರಮಕೋರರ ಬೆನ್ನಿಗೆ ನಿಂತಿರುವ ಅಧಿಕಾರಿಗಳು ಹಾಗೂ ಭ್ರಷ್ಠ ಜನಪ್ರತಿ ನಿಧಿಗಳು ಪ್ರಭಾವಿವರ್ಗ..!? ಅಕ್ರಮ ಧಂಧೆಕೋರರಿಂದ ರಾಜರೋಷವಾಗಿ ಅಕ್ರಮ ಸಾಗಾಟ..! ಈ ಬಗ್ಗೆ ಆಕ್ರೋಶ ಹೊರಹಾಕ್ತಿರುವ ಗ್ರಾಮಸ್ಥರು ಹೊಸಹಳ್ಳಿ ಭಾಗದಲ್ಲಿ ಅಕ್ರಮ ಮರಳುಗಾರಿಕೆ ನ್ಯಾಯ ಬೆಲೆ ಅಂಗಡಿಗಳಿಂದ ಪಡಿತರ ಕಾಳಸಂತೆಯಲ್ಲಿ ನಿರಾಯಾಸವಾಗಿ ಸಾಗಿಸಲಾಗುತ್ತಿದೆ ಎಂದು ಹಲವು ಸಂಘಟನೆಗಳ ಪದಾಧಿಕಾರಿಗಳು ದೂರಿದ್ದಾರೆ. ಹೊಸಹಳ್ಳಿ ಭಾಗದಲ್ಲಿ ಬಡವರ ಅಕ್ಕಿ ಸಾಗಾಟ ದಂಧೆ ಎಗ್ಗಿಲ್ಲದೇ ಜರುಗುತ್ತಿದೆ ಎಂಬ ಆರೋಪವಿದೆ, ಈ ಬಗ್ಗೆ ಜಿಲ್ಲಾಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರಾ ಎಂಬ ಯಕ್ಷ ಪ್ರೆಶ್ನೆ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಪೊಲೀಸ್ ಇಲಾಖೆಯ ಶಿಸ್ತು ಕ್ರಮವಿಲ್ಲದೆ ದಂಧೆ ಕೋರರು ರಾಜ ರೋಷ ಓಡಾಟ ಮಾಡುತ್ತಿದ್ದಾರೆಂದು ಗ್ರಾಮಸ್ಥರು ದೂರಿದ್ದಾರೆ. ಪ್ರಕರಣ ಮುಚ್ಚಿಹಾಕುವತ್ತ ಹೆಗ್ಗಣಗಳ ಹೆಣಗಾಟ-ಪಡಿತರ ಕಾಳಸಂತೆಯಲ್ಲಿ ಸಾಗಿಸುತ್ತಿರುವಾಗ ಮಾಲು ಸಮೇತ ಹಿಡಿದ ಅನ್ನದಾತರು,ಕಾನೂನು ಕೈಗೆi ತೆಗೆದುಕೊಳ್ಳದೇ ಪೊಲೀಸರಿಗೆ ಒಪ್ಪಿಸಿದ್ದಾರೆ.ಹತ್ತು ಹದಿನೈದು ವರ್ಷಗಳಿಂದ ಬಡವರ ಅನ್ನ ಕದ್ದು ತಿಂದು ತೇಗುತ್ತಿರುವ ಭ್ರಷ್ಠರು ಹೆಗ್ಗಣದಂತಹ ಅಧಿಕಾರಿಗಳು, ಪ್ರಕರಣವನ್ನು ಮುಚ್ಚಿಹಾಕುವಲ್ಲಿ ಪ್ರಯತ್ನ ಮಾಡಿದ್ದಾರೆ ಈ ಮೂಲಕ ತಾವು ಪ್ರಭಾವಿಗಳ ಗೊಂಬೆಗಳೆಂದು ಸಾಬೀತು ಪಡಿಸಿ ಸಮಾಜದೆದರು ನೈತಿಕವಾಗಿ ಬೆತ್ತಲಾಗಿದ್ದಾರೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಹಾರ ಇಲಾಖಾಧಿಕಾರಿಗಳು ಮತ್ತು ಪೊಲೀಸರು ಪ್ರಕರಣವನ್ನು ಮುಚ್ಚಿಹಾಕುತ್ತಿದ್ದಾರೆಂದು ಗಂಭೀರವಾಗಿ ದೂರಿದ್ದಾರೆ.ಈ ಮೂಲಕ ಭ್ರಷ್ಠ ಅಧಿಕಾರಿಗಳು ಹಾಗೂ ಸ್ಥಳೀಯ ಭ್ರಷ್ಠ ಜನಪ್ರತಿನಿಧಿಗಳು,ಸಮಾಜ ಘಾತುಕ ಪ್ರಭಾವಿಗಳ ಗೊಂಬೆಯಾಗಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.ನ್ಯಾಯ ಬೆಲೆ ಅಂಗಡಿ ಮಾಲೀಕ ಕರಿಯಪ್ಪ ಕಾಳಸಂತೆಯಲ್ಲಿ ರಾಗಿ ಸಾಗಿಸುತ್ತಿದ್ದಾಗ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು,ಸಾಕ್ಷಿ ತಿರುಚಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನದಲ್ಲಿ ಭ್ರಷ್ಠ ಅಧಿಕಾರಿಗಳು ಯತ್ನಸುತ್ತಿದ್ದಾರೆ ಇದರಲ್ಲಿ ಭಾಗಿಯಾಗಿರುವ ಎಲ್ಲಾ ಇಲಾಖೆಗಳ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ, ಭ್ರಷ್ಠಾಚಾರ ಹಾಗೂ ಅಕ್ರಮಗಳ ವರದಿಯನ್ನು ಹಾಗೂ ಸಾಕ್ಷಿಗಳ ಸಮೇತ ರಾಜ್ಯ ಪಾಲರಿಗೆ,ಎಸಿಬಿ, ಲೋಕಾಯುಕ್ತ ರಿಗೆ ದೂರು ನೀಡಲಾಗುವುದೆಂದು ಹೋರಾಟಗಾರರು ಈ ಮೂಲಕ ಎಚ್ಚರಿಸಿದ್ದಾರೆ.ಜಿಲ್ಲಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸತ್ಯಾ ಸತ್ಯೆತೆ ಅರಿತು,ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಈ ಮೂಲಕ ಕೋರಿದ್ದಾರೆ.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ