ಅಗಾಧ ಸ್ಮರಣ ಶಕ್ತಿಯ ಶ್ರೀಶಾ!

Spread the love

ಅಗಾಧ ಸ್ಮರಣ ಶಕ್ತಿಯ ಶ್ರೀಶಾ!

ಇವಳು ಕೇವಲ 7 ವರ್ಷದ ಪುಟ್ಟ ಬಾಲಕಿ.ಶ್ರೀಶಾ ಆಗಾಧವಾದ ಜ್ಞಾನ ಹಾಗೂ ನೆನಪಿನ ಶಕ್ತಿ ಹೊಂದುವುದರೊಂದಿಗೆ ಎಲ್ಲರ ಗಮನ ಸೆಳೆದಿದ್ದಾಳೆ.ಇವಳು ಭಾರತದ ರಾಷ್ಟ್ರಪತಿಗಳ ಪಟ್ಟಿ,ಭಾರತದ ಪ್ರಧಾನ ಮಂತ್ರಿಗಳು,ಭಾರತ ರತ್ನ ಪ್ರಶಸ್ತಿ ವೀಜೇತರು,ನೋಬೆಲ್ ಪ್ರಶಸ್ತಿ ವಿಶ್ವ ಸದಸ್ಯತ್ವ ಹೊಂದಿರುವ ದೇಶಗಳು,ಕರ್ನಾಟಕದ ವಿಶ್ವವಿದ್ಯಾಲಯಗಳ ಪಟ್ಟಿ, ಹಾಗೂ ಕರ್ನಾಟಕವನ್ನಾಳಿದ ರಾಜ ಮನೆತಗಳು ಇನ್ನು ಹಲವಾಲು  ವಿಷಯಗಳ ಸಂಬಂಧಪಟ್ಟಂತೆ ಅಪಾರ ಜ್ಞಾನ ಹೊಂದಿರುವ ಈ ಬಾಲಕಿಯು ಯಾವುದೇ ಪ್ರಶ್ನೇ ಕೇಳಿದರೂ ಪಟಪಟನೆ ಉತ್ತರ ನೀಡುತ್ತಾಳೆ.ಹಾಗೆಯೇ ವರ್ಷದ ಹಿಂದ ನೆಡೆದ ಘಟನಾವಳಿಯಗಳ ಬಗ್ಗೆಯು ಹೇಳುತ್ತಾಳೆ. ಬಾಲಕಿಯು ಕೇಳುವ ಪ್ರಶ್ನೆಗೆ ತಟ್ ಅಂತ ಉತ್ತರಿಸುತ್ತಾಳೆ. ಮೂಲತಃ ಶ್ರೀಶಾ ಧಾರವಾಡ ಜಿಲ್ಲೆ,ಕುಂದಗೋಳ ತಾಲೂಕಿನವರು. ತಾಯಿ ಕೀರ್ತಿ ಮುದಗೊಣ್ಣವರ ಗೃಹಿಣಿ, ತಂದೆ ಈಶ್ವರ ಮುದಗೊಣ್ಣವರ್ ಸ್ವಂತ ಉದ್ಯೋಗದಲ್ಲಿ  ತೊಡಗಿದ್ದು, ತಮ್ಮ ಮಗಳ ಈ ಬುದ್ದಿ ಚಾತುರ್ಯತೆಗೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ.  ಶ್ರೀಶಾ  ಚಿಕ್ಕ ವಯಸ್ಸಿನಲ್ಲಿರುವಾಗಲೇ ಎಲ್ಲವನ್ನು ನೆನಪಿಟ್ಟುಕೊಳ್ಳುತ್ತಿದ್ದಳು. ಈ ವಿಶಿಷ್ಟ ಪ್ರತಿಭೆಯನ್ನು ಗುರುತಿಸಿದ ಪಾಲಕರು ಅವಳಿಗೆ ಪ್ರಸಕ್ತ ವಿದ್ಯಮಾನಗಳ ಬಗ್ಗೆ ತಿಳಿಸಿದರು. ಈಗ ಅವಳು ಕನ್ನಡದ ಜ್ಞಾನಪೀಠ ಪ್ರಶಸ್ತಿ ವಿಜೇತರ ಪಟ್ಟಿ, ಕರ್ನಾಟಕದ ಮುಖ್ಯಮಂತ್ರಿಗಳು ಹೆಸರು, ಕರ್ನಾಟಕದ ಜಿಲ್ಲೆ ತಾಲೂಕಿಗಳು  ಹೀಗೆ ಎಲ್ಲ ಪ್ರಶ್ನೆಗಳಿಗೆ ುಸಿರು ಬಿಡದೇ ಉತ್ತರಿಸುತ್ತಾಳೆ.   ಶ್ರೀಶಾಳ ಅಗಾಧ ಬುದ್ದಿ ಚಾತುರ್ಯತೆಯನ್ನು ನೋಡಿ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿವೆ.ಇವಳ ಈ ವಿಶೇಷ ಪ್ರತಿಭೆಯನ್ನು ನೋಡಿ ಹೈಬ್ರೀಡ್ ನ್ಯೂಸ್ ಸುದ್ದಿ ವಾಹಿನಿ ಇಂದ ನಮ್ಮ ಸ್ಟಾರ್ ಅವಾರ್ಡ ನೀಡಿ ಗೌರವಿಸಿದೆ.ಇಂಡಿಯನ್ ಬುಕ್ ಆಫ್ ರೆಕಾರ್ಡ್,ಕರ್ನಾಟಕ ಎಕ್ಸಕ್ಯುಸಿವ್ ರೆಕಾರ್ಡ್, ಹಾಗೆ ಕರ್ನಾಟಕ ಅಚೀವರ್ಸ ಬುಕ್ ಆಫ್ ರೆಕಾರ್ಡ್ ಅಲ್ಲಿಯೂ ರೆಕಾರ್ಡ್ ಆಗಿವೆ.  ಶ್ರೀಶಾ ಮುದಗೊಣ್ಣವರ್ ಇನ್ನು ಚನ್ನಾಗಿ ಬೆಳೆದು ಊರಿಗೆ ಕೀರ್ತಿ ತರಬೇಕು ಎಂಬುದುವು ಜನತೆಯ ಹಾಗೂ ನಮ್ಮೆಲ್ಲರ ಆಶಯ..ಕುಂದಗೋಳ ಜನತೆಯ ಆಶೀರ್ವಾದ ಶ್ರೀಶಾಳ ಮೇಲಿರಲಿ ಎನ್ನುತ್ತಾರೆ ಪೋಷಕರು. ಪೂಜಾ ಬಿ.ಜೋಳದ.

ವರದಿ – ಪ್ರವೀಣ ನಂದಿ

Leave a Reply

Your email address will not be published. Required fields are marked *