ನೊಂದವರ ಕಣ್ಣೀರೊರೆಸುತ್ತಿರುವ ಕಾಂಗ್ರೇಸ್ ಯುವ ನಾಯಕಿ ನೇತ್ರಾವತಿ-
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಕಾಂಗ್ರೇಸ್ ಯುವ ನಾಯಕಿ ನೇತ್ರಾವತಿ,ಪಟ್ಟಣ ಮಾತ್ತವಲ್ಲ ತಾಲೂಕಿನ ಹಲವೆಡೆಗಳಲ್ಲಿ ಕೋವಿಡ್ ನಿಂದ ಬಾಧಿತರ ಮನೆಗೆ ತೆರಳಿ ಸಾಂತ್ವಾನ ಹೇಳುತ್ತಿದ್ದಾರೆ.ನೊಂದವರ ಮನೆ ಅಂಗಳದಲ್ಲಿಯೇ ಕುಳಿತು ಕೋವಿಡ್ ಜಾಗೃತಿ ಮೂಡಿಸುತ್ತಿದ್ದಾರೆ, ಹೆದರದಿರಿ ಜಾಗೃತಿ ಯಿಂದಿರಿ ಎಂದು ನೆರೆಹೊರೆಯವರನ್ನು ಕರೆಸಿ ಧೈರ್ಯತುಂಬುತ್ತಿದ್ದಾರೆ.ಈ ಮೂಲಕ ಕೋವಿಡ್ ಸೈನಿಕರಂತೆ ಪ್ರತಿ ನಿತ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ, ಕೂಡ್ಲಿಗಿ ಬ್ಲಾಕ್ ಕಾಂಗ್ರೇಸ್ ಯುವ ನಾಯಕಿ ನೇತ್ರಾವತಿ ಸಾರ್ವಜನಿಕರಲ್ಲಿ ಕೋವಿಡ್ ಜಾಗೃತಿ ಮೂಡಿಸಿದ್ದಾರೆ.ತನ್ನೊಂದಿಗೆ ರತ್ನಾಬಾಯಿ, ವಸಂತಮ್ಮ ಹಾಗೂ ಕೆಲ ಮಹಿಳೆಯರು ನೇತ್ರಾವತಿ ಯವರೊಂದಿಗಿದ್ದು, ಅವರೂ ಕೂಡ ಕೋವಿಡ್ ವಾರಿಯಾರ್ಸ್ ಆಗಿ ನೇತ್ರಾರೊಂದಿಗೆ ಕೈಜೋಡಿಸಿ ಸೇವೆ ಸಲ್ಲಿಸುತ್ತಿದ್ದಾರೆ. ಕೋವಿಡ್ ಸೋಂಕಿತರ ಮನೆಗೆ ತೆರಳಿ ಸೋಂಕಿತರಿಗೆ ಹಾಗೂ ಕುಟುಂಬ ಸದಸ್ಯರಿಗೆ, ಜಾಗೃತಿ ಮೂಡಿಸಿ ಆತ್ಮ ಸ್ಥೈರ್ಯ ತುಂಬಿ ಭರವಸೆಯ ಬೆಳಕು ಹರಿಸುತ್ತಿದ್ಧಾರೆ ನೇತ್ರಾ. ಕೆಲ ಕೌಟುಂಬಿಕ ವ್ಯಾಜ್ಯಗಳಿಗೆ ಪರಿಣಿತ ವಕೀಲರ ಸಹಕಾರದೊಂದಿಗೆ ಬಗೆಹರಿಸುತ್ತಿದ್ದಾರೆ.ಮತ್ತು ಹಲವು ಬಗೆಯ ಕಲಹ ನ್ಯಾಯ ತೀರ್ಮಾನಗಳನ್ನು ಕಾನೂನು ತಜ್ಞರೊಂದಿಗೆ ಬಗೆಹರಿಸುತ್ತಿದ್ದಾರೆ. ಕಳೆದ ಎತೆಡು ವರ್ಷಗಳಿಂದ ನಿರಂತರವಾಗಿ ಕೋವಿಡ್ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದು,ಈ ತಮ್ಮ ಸಮಾಜ ಸೇವೆಗೆ ಕಾಂಗ್ರೇಸ್ ಪಕ್ಷದ ಹಿರಿಯರ ಹಾಗೂ ಎಲ್ಲಾ ಕಾರ್ಯಕರ್ತರ ಸಹಕಾರ ಕಾರಣ ಎನ್ನುತ್ತಾರೆ ನೇತ್ರಾವತಿ.ತಮ್ಮ ಈ ಕಾರ್ಯಕ್ಕೆ ಹೋರಾಟಗಾರ ಹಾಗೂ ಸಹೋದರ ಹೆಚ್.ವೀರಣ್ಣನವರು ಪ್ರೇರಣೆಯಾಗಿದ್ದು ಮತ್ತು ತಮ್ಮ ಪತಿ ಉಮೇಶರ ಸಹಕಾರ ಇದೆ. ಸ್ನೇಹಿತರು ಕಾಂಗ್ರೇಸ್ ಮಹಿಳಾ ಎಲ್ಲಾ ಕಾರ್ಯಕರ್ತರ ನೆರವೇ ಕಾರಣ ಎನ್ನುತ್ತಾರೆ ನೇತ್ರಾವತಿ.ನೇತ್ರಾವತಿಯರ ಸಮಾಜ ಸೇವೆ ಸಮಾಜಕ್ಕೆ ನೇತ್ರವಾಗಿದ್ದು,ನೂರಾರು ಕುಟುಂಬಗಳಿಗೆ ಭರವಸೆಯ ಬೆಳಕು ಮೂಡಿಸಿದ್ದಾರೆ ನೇತ್ರಾರವರು.ಅವರ ಈ ಸಮಾಜ ಸೇವೆ ಹೀಗೆ ಮುಂದುವರಿಯಲಿ ಎಂದು ಆಶಿಸೋಣ..
ವಂದೇ ಮಾತರಂ ವಿ.ಜಿವೃಷಭೇಂದ್ರ ಕೂಡ್ಲಿಗಿ