ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಪ್ರತಿ ವಾರದಂತೆ ಅಂದರೆ ಗುರುವಾರ ಹಾಗೂ ಶನಿವಾರದಂತೆ ನಡೆಯುವ ಬೀಟ್ ವ್ಯವಹಾರವು ಶ್ರೀ ಶ್ಯಾಮೀದಲ್ಲಿ ಸಂತೆ ಮಾರುಕಟ್ಟೆಯಲ್ಲಿ ಈ ವಾರವು ನಡೆಯುತ್ತಿದ್ದು, ಇಲ್ಲಿ ರೈತರು ತಾವರಗೇರಾ ಹೋಬಳಿಯ ಸುತ್ತ/ಮುತ್ತಲ್ಲಿರುವ ಗ್ರಾಮಗಳಿಂದ ತಾವು ಬೆಳೆದ ತರಕಾರಿಯನ್ನು ಮಾರುಕಟ್ಟೆಗೆ ತಂದು ಮಾರುಕಟ್ಟೆಯ ಬೆಲೆಗೆ ನಿಗದಿತವಾಗಿ ತರಕಾರಿಯನ್ನು ನೀಡಿ ಹೋಗುತ್ತಿದ್ದರು, ಆದರೆ ಈ ವಾರದ ಬೀಟ್ ನಲ್ಲಿ ರೈತರಿಗೆ ತಾವು ಬೇಳೆದ ತರಕಾರಿಗೆ ಸರಿಯಾಗಿ ಬೆಲೆ ಸಿಗಾದ ಕಾರಣ ರೈತರು ಇಂದು ರೊಚಿಗೆದ್ದು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ತರಕಾರಿಯನ್ನು (ಟೊಮೊಟೊ) ವನ್ನು ಶ್ರೀ ಶ್ಯಾಮೀದಲ್ಲಿ ಸರ್ಕಲ್ ನಲ್ಲಿ ಹಾಗು ಹೋಗುವ ಹೆದ್ದಾರಿ (ರೋಡ್)ಗೆ ಎಸೇದು ತಮ್ಮ ನೋವಿನ ಅಳಲನ್ನ ಯಾವ ಸರ್ಕಾರಕ್ಕೆ ಹೇಳಬೇಕು? ಇಲ್ಲಿ ಬೀಟ್ ವ್ಯವಹಾರದಲ್ಲಿ ರೈತರಿಗೆ ದಿನೇ ನಿತ್ಯ ಮೋಸವಾಗುತ್ತಿದೆ. ದಲ್ಲಾಳಿಗಳು ಬಾಯಿಗೆ ಬಂದಾಗೆ ತರಕಾರಿಗಳಿಗೆ ಇಂತಿಷ್ಟು ಬೆಲೆ ನಿಗದಿ ಪಡಿಸುತ್ತಾರೆ. ಒಂದು ಟಮೋಟೊ ಬಾಕ್ಷಿಗೆ ಅಂದರೆ 25 ಕೆ.ಜಿ. ಇರುವ ಬಾಕ್ಷಗೆ ರೈತರಿಂದ 40 ರೂ/ ಅಬ್ಬಾಬ್ಬ ಅಂದರೆ 50 ರೂ/ಗೆ ತಗೆದುಕೊಂಡು ತಮ್ಮದೆ ತರಕಾರಿ ಅಂಗಡಿಯಲ್ಲಿ 15 /ರೂ ಕೆ.ಜಿ ಟಮೋಟೊ ನೀಡುತ್ತಿದ್ದಾರೆ. ಇದರಿಂದ ರೈತರು ಸಂಪೂರ್ಣ ದಲ್ಲಾಳಿಗಳಿಂದ ಮೋಸವಾಗುತ್ತಿದ್ದಾರೆ ಎನ್ನುವುದು ಇಲ್ಲಿ ಸಾರ್ವಜನಿಕರ ಅಭಿಪ್ರಾಯವಾಗಿದ್ದು, ಇಲ್ಲಿ ರೈತರಿಂದ ತಗೆದುಕೊಳ್ಳುವ ಪ್ರತಿ ತರಕಾರಿ ಬೆಲೆಗೂ ತಮ್ಮದೇಯಾದ ತರಕಾರಿ ಅಂಗಡಿಯಿಂದ ಸಾರ್ವಜನಿಕರು ತೆಗೆದುಕೊಳ್ಳುವ ತರಕಾರಿ ಬೆಲೆಗೂ ಅಜಗಜಾಂತರ ವ್ಯತ್ಯಾಸ ಇರುತ್ತೆ. ಸ್ಪಷ್ಟವಾಗಿ ಕಾಣುವುದು ಇಲ್ಲಿ ರೈತ ಬೆಳೆದ ಬೆಳೆಗೆ ಬೆಲೆ ಸಿಗದೆ ಕಾರಣ ದಿನ ನಿತ್ಯ ರೈತನ ಕುಟುಂಬ ಬಿದಿಗೆ ಬರುವುದು ತಪ್ಪಿದ್ದಲ್ಲಾ. ದೇಶದ ಬೆನ್ನಲುಬು ಎನ್ನುವ ರೈತರ ಗೋಳು ಕೇಳುವವರು ಯಾರು ಎಂಬ ಮುಖ ರೋಧನೆಯಾಗಿದೆ. ನಮ್ಮ ರೈತರು ತಾವು ಬೆಳೆದ ಬೆಳೆಯನ್ನ ತಾವೆ ಮಾರುಕಟ್ಟೆಗೆ ತಂದು ಕುದ್ದು ಮಾರುಕಟ್ಟೆಯಲ್ಲಿ ವ್ಯವಹಾರ ಮಾಡಿಕೊಂಡು ಹೋದರೆ ಮಾತ್ರ ರೈತನು ಬೆಳೆದ ಬೆಳೆಗೆ ಬೆಲೆ ಸಿಗುತ್ತೆ. ಇಲ್ಲದಿದ್ದರೆ ಈ ದಲ್ಲಾಳಿಗಳ ಹೋಡೆತಕ್ಕೆ ರೈತ ದಿನನಿತ್ಯ ಬಲಿಯಾಗಬೇಕಾಗುತ್ತದೆ ಎನ್ನುವುದು ತಿಳಿದಂತವರ ಯಕ್ಷ ಪ್ರಶ್ನೆ ಯಾಗಿದೆ.
ವರದಿ :- ಅಮಾಜಪ್ಪ ಹೆಚ್.ಜಿ.