ಜುಮಲಾಪೂರ ಗ್ರಾಮದ ಸ್ಥಳೀಯ ಆರೋಗ್ಯ ಇಲಾಖೆ ಸಹಯೋಗದಲ್ಲಿ ಜನಪದ ಜಾಗೃತಿ ಕಲಾ ತಂಡದಿಂದ ಎಲ್ಲರಿಗೂ ಲಸಿಕೆ ಉಚಿತ ಅಭಿಯಾನ ಜಾಗೃತಿ ಕಾರ್ಯಕ್ರಮ ….
ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜುಮಲಾಪೂರ ಗ್ರಾಮದಲ್ಲಿ ಇಂದು ಜನಪದ ಜಾಗೃತಿ ಕಲಾ ತಂಡದಿಂದ ಎಲ್ಲರಿಗೂ ಲಸಿಕೆ ಉಚಿತ ಅಭಿಯಾನ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಜುಮಲಾಪೂರ ಗ್ರಾಮದಲ್ಲಿ ಸ್ಥಳೀಯ ಆರೋಗ್ಯ ಇಲಾಖೆ ಸಹಯೋಗದಲ್ಲಿ ಕೆಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಎಲ್ಲರಿಗೂ ಲಸಿಕೆ ಉಚಿತ ವಿಶ್ವದ ಅತಿ ದೊಡ್ಡ ಲಸಿಕೆ ಅಭಿಯಾನ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಜನಪದ ಜಾಗೃತಿ ಕಲಾ ತಂಡದಿಂದವರು ನೃತ್ಯ ಮಾಡುವ ಮೂಲಕ ಹಾಗೂ ಹಾಡು ಹಾಡುವ ಮುಖಾಂತರ ಸಾರ್ವಜನಿಕರಿಗೆ ಮನ ಮುಟ್ಟುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು ಈ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಸ್ಥಳೀಯ ಆರೋಗ್ಯ ನಿರಿಕ್ಷಣಾಧಿಕಾರಿ ಗಳಾದ ಜಗನ್ನಾಥ್ ರವರು ಕೆಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು ಯಾವುದೇ ಕಾರಣಕ್ಕೂ ಯಾರು ಕೂಡ ಲಸಿಕಾ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಹಾಗಾಗಿ ಇದರ ಸದುಪಯೋಗ ಪಡೆದುಕೊಳ್ಳಬೇಕು ನಮ್ಮ ಆರೋಗ್ಯವೆ ನಮ್ಮ ಭಾಗ್ಯ ಎಂದರು ಈ ಸಂದರ್ಭದಲ್ಲಿ ಸ್ಥಳೀಯ ಚುನಾಯಿತ ಪ್ರತಿನಿಧಿಗಳಾದ ಬಾಳಪ್ಪ ಕೊಡಗಲಿ ಹಾಗೂ ಗ್ರಾಮದ ಮುಖಂಡರಾದ ಕನಕಪ್ಪ ಹುಡೇಜಾಲಿ ಶಂಕರಪ್ಪ ಡಿ ಎಸ್ ಎಸ್ ಗ್ರಾಮ ಘಟಕದ ಅಧ್ಯಕ್ಷರು ಹಾಗೂ ಊರಿನ ಪ್ರಮುಖರು ಇದ್ದರು (ವಿಶೇಷವಾಗಿ) ಬೇರೆ ಊರಿಗೆ ಹೋರಟಿದ್ದ ಜನಪದ ಜಾಗೃತಿ ಕಲಾ ತಂಡದಿಂದ ವಾಹನವನ್ನು ತಡೆದು ನಮ್ಮ ಊರಿನ ಸಾರ್ವಜನಿಕರಿಗೆ ಲಸಿಕೆ ಉಚಿತ ಅಭಿಯಾನದ ಬಗ್ಗೆ ನಿಮ್ಮ ತಂಡದಿಂದ ಜಾಗೃತಿ ಮೂಡಿಸಿ ಹೋಗಿ ಎಂದು ಅವರಲ್ಲಿ ಮನವಿಮಾಡಿ ಅವರನ್ನು ಕರೆತಂದು ಊರಿನ ಗ್ರಾಮಸ್ಥರಿಗೆ ಕೋರೋನ ಲಸಿ ಜಾಗೃತಿ ಮೂಡಿಸಿರುವದು ಜಗನ್ನಾಥ್ ರವರ ಕಾರ್ಯ ವೈಖರಿ ಬಗ್ಗೆ ಎಲ್ಲಿಲ್ಲದ ಮೆಚ್ಚುಗೆ ಪ್ರಶಂಸೆ ವ್ಯಕ್ತವಾಗಿದೆ. ಹಾಗೆ ಇವರಿಗೆ ಸ್ಥಳೀಯ ಜನಪ್ರತಿನಿಧಿಗಳು ಕೂಡ ಸಾಥ್ ನೀಡಿದ್ದಾರೆ ಅದರಂತೆ ಗ್ರಾಮದ ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ವತಿಯಿಂದ ಯಾವುದೇ ಯೋಜನೆ ಇರಲಿ ಹಾಗೂ ಜನರ ಆರೋಗ್ಯ ದೃಷ್ಟಿಯಿಂದ ಯಾವುದೇ ಮಾಹಿತಿ ಇರಲಿ ಸಾರ್ವಜನಿಕರಿಗೆ ವಿವರವಾಗಿ ಅವರ ಮನ ಮುಟ್ಟುವಂತೆ ಅವರಿಗೆ ತಿಳಿ ಹೆಳುತ್ತಾ ಅಣ್ಣಾ ಅಕ್ಕ ಅಮ್ಮ ಎನ್ನುವ ಪದ ಬಳಕೆಯಿಂದ ಗ್ರಾಮದ ಜನರ ಮನದಲ್ಲಿ ಮನೆ ಮಾಡಿರುವದು ಸಾರ್ವಜನಿಕ ವಲಯದಲ್ಲಿ ಕೆಳಿಬರ್ತಾಯಿದೆ ಏನೆ ಆಗಲಿ ಮುಂದಿನ ದಿನಗಳಲ್ಲಿ ಇಂತಹ ಪ್ರಾಮಾಣಿಕ ಅಧಿಕಾರಿಗಳಿಗೆ ಆರೋಗ್ಯ ಇಲಾಖೆಯಲ್ಲಿ ಉನ್ನತ ಉದ್ದೆ ಸಿಗಲಿ ಎನ್ನುವುದು ನಮ್ಮ ಪತ್ರಿಕೆಯ ಆಸೆ).
ವರದಿ – ಅಮಾಜಪ್ಪ ಹೆಚ್.ಜುಮಾಲಾಪೂರ