“ಮಿಸ್ ಕರ್ವಿ ಇಂಡಿಯ ವರ್ಲ್ಡ್” 2021 ವಿಜೇತಳು ಎಂಎಸ್ ಅಂಜುಮ್…
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹಿಂದುಳಿದ ಬರಡುಭೂಮಿ ಗಳಿಂದ ಕೂಡಿದ ಕೃಷಿಯನ್ನೇ ಅವಲಂಬಿತರಾಗಿದ್ದಾ ಕೃಷಿಕರ ಹಾಗೂ ಉಣಿಸೆ ನಾಡಿನಲ್ಲಿ ಕೂಡ್ಲಿಗಿ ಪಟ್ಟಣದಲ್ಲಿ ತಂದೆ ಬೈಕ್ ಮೆಕ್ಯಾನಿಕ್ ಟಿಎಂ ರಫಿ ಈಗಲೂ ಕೆಲಸ ಮುಂದುವರಿಸಿ ಜೀವನ ಸಾಗಿಸುತ್ತಿರುವ ತಾಯಿ ರಾಬಿಯಾ ಅಂಗನವಾಡಿ ಕಾರ್ಯಕರ್ತೆಯರ ಕೆಲಸ ನಿರ್ವಹಿಸುತ್ತಿರುವ ಇವರಿಗೆ 4 ಮಕ್ಕಳಿದ್ದು ಎರಡು ಗಂಡು ಮಕ್ಕಳು ಎರಡು ಹೆಣ್ಣುಮಕ್ಕಳ ಆಗಿದ್ದು ನಾಲ್ಕನೇ ಮಗಳಾಗಿ ಹುಟ್ಟಿದ ಎಂಎಸ್ ಅಂಜುಮ ಇವರು ಶಿಕ್ಷಣವನ್ನು ಕೂಡ್ಲಿಗಿ ಜ್ಞಾನಭಾರತಿ ಶಾಲೆಯ ಎಲ್ ಕೆಜಿ ಇಂದ 10ನೇ ತರಗತಿ ವರೆಗೆ ವಿದ್ಯಾಭ್ಯಾಸ ಮುಂದುವರಿಸಿ ಮಧ್ಯದಲ್ಲಿ 6ನೇ ತರಗತಿಯ ಸಂದರ್ಭದಲ್ಲಿ ಮುರಾರ್ಜಿ ಹೊಸಪೇಟೆ ತಾಲೂಕಿನ ತಿಮ್ಲಾಪುರ ಗ್ರಾಮದ ಶಾಲೆಗೆ ಆಯ್ಕೆಯಾಗಿ ಸ್ವಲ್ಪ ದಿನಗಳ ಕಾಲ ಮುರಾರ್ಜಿ ಯಲ್ಲಿ ವಿದ್ಯಾಭ್ಯಾಸ ಮಾಡಿ ಅಲ್ಲಿನ ಪರಿಸರಕ್ಕೆ ಆರೋಗ್ಯ ಹೊಂದಿಕೊಳ್ಳದ ಕಾರಣ ಅರ್ಧಕ್ಕೆ ಮೊಟಕುಗೊಳಿಸಿ ಜ್ಞಾನಭಾರತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ್ದು 10ನೇ ತರಗತಿಯಲ್ಲಿ 74/ ಪರ್ಸೆಂಟೇಜ್ ಉತ್ತೀರ್ಣರಾಗಿ ನಂತರ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವಿದ್ಯಾಭ್ಯಾಸವನ್ನು ಜ್ಞಾನ ಮಂಟಪ ಗುಂಡಿನ ಹೊಳೆ ಕೂಡ್ಲಿಗಿಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿ ಪಿಯುಸಿ ಎರಡನೇ ವರ್ಷ ವಿಜ್ಞಾನ ವಿಭಾಗದಲ್ಲಿ 12 13 ನೇ ಸಾಲಿನಲ್ಲಿ ಪಿಯುಸಿ 61 ಪರ್ಸೆಂಟೇಜ್ ಉತ್ತೀರ್ಣರಾಗಿ ಸಿಇಟಿ ಪರೀಕ್ಷೆ ಬರೆದು ಹೂವಿನಹಡಗಲಿ ಇಂಜಿನಿಯರಿಂಗ್ ಕಾಲೇಜಿಗೆ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಲು ಕಾಲೇಜಿಗೆ ಸೇರಿದರು ಒಂದು ವರ್ಷ ಇಂಜಿನಿಯರಿಂಗ್ ವಿದ್ಯಾಭ್ಯಾಸ ಹೂವಿನ ಹಡಗಲಿಯಲ್ಲಿ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ 2017ರಲ್ಲಿ ಇವರ ವಿವಾಹ ಕೂಡ್ಲಿಗಿ ಪಟ್ಟಣದ ಇಸ್ಮಾಯಿಲ್( ಮುನ್ನ) ಎಂಬುವರ ಜೊತೆ ವಿವಾಹ ನೀತು ನಂತರ ಇಂಜಿನಿಯರಿಂಗ್ ವಿದ್ಯಾಭ್ಯಾಸ ಪೂರ್ಣಗೊಳಿಸಲಾಗದೆ ಅರ್ಧಕ್ಕೆ ಮೊಟಕುಗೊಳಿಸಿ ತನ್ನ ಗಂಡನ ಸಾಕಾರದಿಂದ ಬಿಎಸ್ಸಿ ಪದವಿಯನ್ನು ಕೊಟ್ಟೂರೇಶ್ವರ ಕಾಲೇಜಿನಲ್ಲಿ 2018 ರಿಂದ 2020 ರ ವರೆಗೆ ವಿದ್ಯಾಭ್ಯಾಸ ಮುಂದುವರಿಸಿ ಅಂತಿಮ ವರ್ಷದಲ್ಲಿ 75 ಪರ್ಸೆಂಟೇಜ್ ನಲ್ಲಿ ಉತ್ತೀರ್ಣರಾದರು ಆಗ ಎಂಎಸ್ ಅಂಜುಮ ಇವರು ಮನೆಯಲ್ಲೇ ಇರಬೇಕಾಯಿತು ಹಾಗೂ ಬಳ್ಳಾರಿ ನಗರದ ಹೊರವಲಯದಲ್ಲಿರುವ ಆಲಮ್ ಭವನದಲ್ಲಿ ನಡೆಯುತ್ತಿರುವ ಮಿಸ್ಸಸ್ ಇಂಡಿಯಾ ಕರ್ನಾಟಕ ಸ್ಪರ್ಧೆಯಲ್ಲಿ ಸ್ಪರ್ಧಿಸಿ *ಮಿಸಸ್ ಇಂಡಿಯಾ ಕರ್ನಾಟಕ ವಿಜೇತರಾಗಿ ಆಯ್ಕೆಯಾದರು . ನಂತರ ಅಂತಿಮ ಸುತ್ತಿನ ಸ್ಪರ್ಧೆ ಬೆಂಗಳೂರಲ್ಲಿ ದುಡಿಯಬೇಕಾಗಿದೆ 2020 ಕೋವಿಡ್ 19 ರ ಕಾರಣದಿಂದ ಕಾರ್ಯಕ್ರಮ ಮುಂದೂಡಿದರು ಆಗ ಉನ್ನತ ವಿದ್ಯಾಭ್ಯಾಸವಾದ ಕೆಎಸ್ ತರಬೇತಿ ಪಡೆಯಲು ಧಾರವಾಡಕ್ಕೆ ಐದು ತಿಂಗಳು ವಿದ್ಯಾಭ್ಯಾಸ ಮಾಡಿ ನಂತರ ತಮ್ಮ ಸ್ವಂತ ಗ್ರಾಮವಾದ ಕೂಡ್ಲಿಗಿ ಪಟ್ಟಣಕ್ಕೆ ಬಂದಿಳಿದಾಗ ಮನೆಯಲ್ಲಿಯೇ ಕೆಎಎಸ್ ಪರೀಕ್ಷೆ ಬರೆಯಲು ತಯಾರಿ ನಡೆಸಿಕೊಳ್ಳುತ್ತಿದ್ದರು ನಂತರ ಎಂಎಸ್ ಅಂಜುಮ ಇವರಿಗೆ. ಹದಿನೈದುನೂರು ಸ್ಪರ್ಧಾಳುಗಳ ಮಾಹಿತಿ ಕಲೆ ಹಾಕಿದ್ದು ಅದರಲ್ಲಿ ನೀವು ಒಬ್ಬರು ಎಂದು ಹೇಳಲು ಯಾವುದೋ ಒಂದು ಅನಾಮಧೇಯ ಕಾಲು ಬಂದಾಗ ಕಾಲನ್ನು ಸ್ವೀಕರಿಸಿದೆ ಸುಮ್ಮನೆ ಇರಲಾಗಿ ನಂತರ ಅದೇ ನಂಬರಿನಿಂದ ಒಂದು ಎಸ್ಎಂಎಸ್ ಕಳಿಸಲಾಗಿ. ದೆಹಲಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ಸುಂದರಿಯರ ಸ್ಪರ್ಧೆ ನಡೆಯುತ್ತಿದ್ದು.ಈ ನಂಬರಿಗೆ ಕರೆ ಮಾಡಿ ಮಾಹಿತಿ ಪಡೆದು ಮತ್ತು ನೀಡಿರಿ ಎಂದು ಎಸ್ಎಂಎಸ್ ಮಾಡಲಾಗಿತ್ತು ಆಗ ಆ ನಂಬರಿಗೆ ಕರೆ ಮಾಡಿದಾಗ ಒಬ್ಬ ಮಹಿಳೆ ಮಾತನಾಡಿ ನಾವು ದೆಹಲಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ದೇಶ-ವಿದೇಶಗಳ ಮಿಸ್ ಕರವೇ ಇಂಡಿಯಾ ವರ್ಲ್ಡ್. ಸ್ಪರ್ಧೆ ನಡೆಸುತ್ತಿದ್ದು ಅದಕ್ಕಾಗಿ ನಿಮಗೆ ಕರೆ ಮಾಡಿದ್ದು ನಿಮ್ಮ ಸಂಪೂರ್ಣ ಜೀವನದ ಮಾಹಿತಿ ನಿಮ್ಮ ಫೋಟೋಗಳನ್ನು ನಮ್ಮ ಮೇಲಿಗೆ ಕಳಿಸಿಕೊಡಿ ಎಂದು ಹೇಳಿದರು ಹಾಗ ಎಂಎಸ್ ಅಂಜುಮಾ ಅವರು ತನ್ನ ಮನೆಯಲ್ಲಿ ಗಂಡನ ಜೊತೆ ಹಾಗೂ ತನ್ನೆಲ್ಲ ಕುಟುಂಬದವರ ಜೊತೆ ಚರ್ಚಿಸಿ ನಾಲ್ಕು ದಿನಗಳ ನಂತರ ಫೋಟೋ ಸಂಬಂಧಪಟ್ಟ ದಾಖಲಾತಿಗಳನ್ನು ಕಳಿಸಿಕೊಟ್ಟರು ಆಗ ಇವರಿಗೆ ಮತ್ತೆ ಫೋನ್ ಮಾಡಿ ಹೇಳಲಾಗಿ ಹದಿನೈದುನೂರು ಜನರಲ್ಲಿ 22 ಜನರನ್ನು ಅಂತಿಮ ಸ್ಪರ್ಧೆಗೆ ಆಯ್ಕೆ ಮಾಡಿದ್ದು 22 ಜನರಲ್ಲಿ ನೀವು ಒಬ್ಬರು ನೀವು ಎಲ್ಲಾ ತಯಾರಿ ನಡೆಸಿಕೊಂಡು ನಾವು ನಿಮಗೆ ನಿಗದಿಪಡಿಸಿದ ದಿನಾಂಕವನ್ನು ತಿಳಿಸಿದಾಗ ದೆಹಲಿಗೆ ಬಂದು ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು…. ಇಂಟರ್ನ್ಯಾಷನಲ್ ಬ್ಯೂಟಿ ಪೆಜೆಂಟ್(ಇ&ಇ) ಐಯಾಮ್ ದ ವರ್ಲ್ಡ್ ಇವರಿಂದ ಅಂತಿಮ ಸುತ್ತಿನ ಸ್ಪರ್ಧೆ ದಿನಾಂಕ 26 ಜುಲೈ 2021 ರಿಂದ 29 ಜುಲೈ 2021 ರವರೆಗೆ ದೆಹಲಿ ಸಾರಥ್ ನಗರದ ಸ್ಟೇಟ್ ಹೋಟೆಲ್ ನಲ್ಲಿ ನಾಲ್ಕು ದಿನಗಳ ಕಾಲ ಸ್ಪರ್ಧೆ ನಡೆದಿದ್ದು 22 ಜನ ದೇಶ-ವಿದೇಶ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಾಗಿದ್ದು ಇದರಲ್ಲಿ ಕರ್ನಾಟಕ ರಾಜ್ಯ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕೂಡ್ಲಿಗಿ ಪಟ್ಟಣದ ಎಂಎಸ್ ಅಂಜುಮ್ ಅವರು ಸ್ಪರ್ಧೆಯಲ್ಲಿ1) ಮಿಸ್ ಸೆನ್ ಸೆನ್ 2) ಮಿಸ್ ಆಕ್ಟಿವ್ ಲೈಫ್ ಸ್ಟೈಲ್ 3) ಟಾಲೆಂಟ್ ರೆಕಾರ್ ನೈಸ್ ಅವಾರ್ಡ್ಸ್ ಈ ಮೂರು ಅವರುಗಳ ಜೊತೆ *ಮಿಸ್ ಕರ್ವಿ ಇಂಡಿಯಾ ವರ್ಲ್ಡ್ ತಮ್ಮ ಮುಡಿಗೇರಿಸಿ ಗಿಟ್ಟಿಸಿಕೊಂಡ ಕೂಡ್ಲಿಗಿ ಪಟ್ಟಣದ ಎಂಎಸ್ ಅಂಜುಮ್ ಅವರಿಗೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ತಮ್ಮ ಸಮುದಾಯದ ಬಂಧುಗಳು ಕುಟುಂಬದವರು ತಂದೆ-ತಾಯಿ ಎಲ್ಲ ಸಮುದಾಯದ ಬಂಧುಗಳು ಅನೇಕ ಸಂಘ-ಸಂಸ್ಥೆಗಳು ಜನಪ್ರತಿನಿಧಿಗಳು ಎಂಎಸ್ ಅಂಜುಮ್ ಮಾವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಶುಭಾಶಯಗಳನ್ನು ಕೋರಿದ್ದಾರೆ ……. ( ಬಾಕ್ಸ್ ಐಟಂ ನಾನು ಈ ಸ್ಪರ್ಧೆಯಲ್ಲಿ ಭಾಗವಹಿಸುವ ಆಲೋಚನೆ ನನಗಿರಲಿಲ್ಲ ನನಗೆ ಗೊತ್ತಿಲ್ಲದೆ ದೆಹಲಿಯಿಂದ ಕರೆಮಾಡಿ ಕಾಲ್ ರಿಸೀವ್ ಮಾಡದಿದ್ದಾಗ ಎಸ್ಎಂಎಸ್ ಕಳಿಸಿ ತಿಳಿಸಿದ್ದು ಆಗ ನನ್ನ ಕುಟುಂಬದವರನ್ನು ನನ್ನ ಗಂಡನ ಪರವಾನಿಗೆ ಪಡೆದು ನಾಲ್ಕು ದಿನಗಳ ನಂತರ ಮಾಹಿತಿ ಕಳಿಸಿದೆ ನಂತರ ನೀನು ಅಂತಿಮ ಸುತ್ತಿನಲ್ಲಿ 22 ಜನರಲ್ಲಿ ನೀನು ಒಬ್ಬರಾಗಿ ಆಯ್ಕೆ ಆಗಿದ್ದೀಯ ಎಂದು ತಿಳಿಸಿದಾಗ ಬಹಳ ಸಂತೋಷವಾಯಿತು ದೆಹಲಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಲು ನನ್ನ ಪತಿಯ ಸ್ಪೂರ್ತಿ ಪ್ರೋತ್ಸಾಹ ಅವರು ನನ್ನ ಬೆನ್ನಿಗೆ ನಿಂತು ಜೊತೆಯಲ್ಲಿದ್ದು ಅಂತರಾಷ್ಟ್ರೀಯ ಮಿಸ್ ಕರ್ವೇ ಇಂಡಿಯಾ ವರ್ಲ್ಡ್ ಸ್ಪರ್ಧೆಯಲ್ಲಿ ನಾನು ವಿಜೇತರಾಗಲು ನನ್ನ ಪತಿ ಸಹಕಾರ ಮುಖ್ಯ ವಿಜೇತರಾಗಿ ರುವುದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ. ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದರು ಆಯ್ಕೆ ಮಾಡಿದ ಎಲ್ಲ ತೀರ್ಪುಗಾರರುಗೂ ನನಗೆ ಬೆಂಬಲಿಸಿದ ನಮ್ಮ ಕುಟುಂಬದ ವರ್ಗದವರಿಗೂ ಕರ್ನಾಟಕದಿಂದ ನಾನೊಬ್ಬಳೇ ಸ್ಪರ್ಧಿಸಿ ಆಯ್ಕೆಯಾಗಿ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಮಿಸ್ ಕರವೇ ಇಂಡಿಯಾ ವರ್ಲ್ಡ್ ವಿಜೇತರೆಂದು ಘೋಷಿಸಿ ಕಿರೀಟ ನೀಡಿದ ದೇಶದ ನಾಡಿನ ಜನರಿಗೆ ನಾನು ಆಭಾರಿಯಾಗಿದ್ದೇನೆ ಇದು ನನ್ನ ಗೆಲುವಲ್ಲ ನಮ್ಮ ರಾಜ್ಯದ ಕೂಡ್ಲಿಗಿ ತಾಲೂಕಿನ ಜನತೆಯ ಗೆಲುವುಃ .ಎಂದಿದ್ದಾರೆ ಅಂಜುಂಮ್. ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ