ಸರ್ಕಾರಕ್ಕೆ ಚೆಲ್ಲಾಟ ಅಸ್ಕಿ ಗ್ರಾಮದ ಜನತೆ ಪೀಕಲಾಟ…..
ಅಸ್ಕಿ ಗ್ರಾಮದ ಜನತೆಗೆ ಪುನರ್ವಸತಿ ಕೇಂದ್ರ ಒದಗಿಸಿ: ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಅಸ್ಕಿ ಗ್ರಾಮವು ಪ್ರತಿವರ್ಷ ಕೃಷ್ಣಾ ನದಿ ಪ್ರವಾಹದಿಂದ ಉಕ್ಕಿ ಹರಿಯುತ್ತದೆ. ಅಸ್ಕಿ ಗ್ರಾಮ ಸಂಪೂರ್ಣ ನೀರಲ್ಲಿ ಮುಳುಗಿ ಸುಮಾರು ಬೆಳೆಗಳು ಹಾಳಾಗಿ ಮತ್ತು ಮನೆಮಠಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ಪ್ರತಿವರ್ಷ ನಮಗೆ ಒದಗಿ ಬಂದಿದೆ. ಇಂಥ ಕಷ್ಟದ ಮಧ್ಯೆ ಜೀವನ ಸಾಗಿಸುವುದು ಮತ್ತಷ್ಟು ಕಷ್ಟವಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಕಣ್ಣು ಬಿಟ್ಟು ಅಸ್ಕಿ ಗ್ರಾಮದ ಜನತೆಗೆ ಸೂಕ್ತ ಪುನರ್ವಸತಿ ಕೇಂದ್ರವನ್ನು ನಿರ್ಮಿಸಿ ಇಲ್ಲದಿದ್ದರೆ ಒಂದಿಷ್ಟು ವಿಷವನ್ನಾದರೂ ಕೊಡಿ ಕುಡಿದು ಪ್ರಾಣವನ್ನೇ ಬಿಡುತ್ತೇವೆ ಎಂದು ಅಸ್ಕಿ ಗ್ರಾಮದ ಜನತೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಅಸ್ಕಿ ಗ್ರಾಮಕ್ಕೆ ಪುನರ್ವಸತಿ ಕೇಂದ್ರ ಒದಗಿಸಿ ಹಾಗೂ ಬೆಳೆ ಪರಿಹಾರ ಕೊಡಬೇಕೆಂದು ತಹಸೀಲ್ದಾರ ಕಚೇರಿ ಮುಂದೆ ಪ್ರತಿಭಟಿಸಿ ನಂತರ ಸಂಜಯ ಇಂಗಳೆ ಅವರಿಗೆ ಮನವಿ ಅನುಸರಿಸಿದರು. ಅಸ್ಕಿ ಗ್ರಾಮ ಕೃಷ್ಣ ನದಿ ಪ್ರವಾಹದಿಂದ ಸಂಪೂರ್ಣ ಮುಳುಗಡೆಯಾಗಿ ಮನೆ ಮತ್ತು ಬೆಳೆಗಳೆಲ್ಲ ನಾಶವಾಗಿದೆ. 2019ರಲ್ಲಿ ಅಸ್ಕಿ ಗ್ರಾಮ ಮುಳುಗಡೆ ಗ್ರಾಮವೆಂದು ಸರ್ಕಾರವು ಹಿಪ್ಪರಗಿ ಆಣೆಕಟ್ಟು ಯೋಜನೆಯಲ್ಲಿ ಘೋಷಣೆ ಮಾಡಿದ್ದಾರೆ. ಆದರೆ ಗ್ರಾಮದವರಿಗೆ ಪುನರ್ವಸತಿ ಕೇಂದ್ರವನ್ನು ಇಲ್ಲಿವರೆಗೂ ಗುರುತಿಸಿಲ್ಲ. ಜಮೀನಿನಲ್ಲಿರುವ ಮನೆಗಳಿಗೆ ಪರಿಹಾರ ಇಲ್ಲಿವರೆಗೂ ನೀಡಿಲ್ಲ ಕೇವಲ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿ ಬಿದ್ದಿದ್ದ ಮನೆಗಳಿಗೆ ಕೇವಲ ನೆಪಕ್ಕಾಗಿ 10. 000 ಪರಿಹಾರವನ್ನು ನೀಡಿ ಕೈತೊಳೆದುಕೊಳ್ಳುವ ಕೆಲಸ ಮಾಡಿದ್ದಾರೆ. 2021ರಲ್ಲಿ ಮತ್ತೆ ಪುನಃ ಕೃಷ್ಣಾ ನದಿ ಪ್ರವಾಹದಿಂದ ಅಸ್ಕಿ ಗ್ರಾಮಕ್ಕೆ ನೀರು ನುಗ್ಗಿ ಮನೆ ಮತ್ತು ಜಮೀನು ಸಂಪೂರ್ಣ ಜಲಾವೃತಗೊಂಡಿದೆ ಇದರಿಂದ ಪ್ರತಿವರ್ಷ ಅಸ್ಕಿ ಗ್ರಾಮದ ಜನತೆ ಒಂದಲ್ಲ ಒಂದು ಸಂಕಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಅಸ್ಕಿ ಗ್ರಾಮದ ಜನತೆಗೆ ಪುನರ್ವಸತಿ ಕೇಂದ್ರ ನೇಮಿಸಿ ಮತ್ತು ಹಾನಿಯಾದ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಿ ಎಂದು ಆಗ್ರಹಿಸಿದರು. ಸರ್ಕಾರ ಯಾವುದೇ ಜಾಗವನ್ನು ತೋರಿಸಿದರು ನಾವು ಅಲ್ಲಿ ವಾಸ ಮಾಡಲು ಸಿದ್ಧರಿದ್ದೇವೆ. ಪ್ರತಿವರ್ಷ ನಮ್ಮ ಗೋಳು ತಪ್ಪಿದ್ದಲ್ಲ ಕಷ್ಟಪಟ್ಟು ಉಳಿಮೆ ಮಾಡಿದ ಭೂಮಿ ನೀರಲ್ಲಿ ಮುಳುಗಿ ನಮ್ಮ ಬಾಯಿಗೆ ಮಣ್ಣೆ ಬೀಳುತ್ತಿದೆ. ದಯವಿಟ್ಟು ಸರ್ಕಾರ ಮತ್ತು ಅಧಿಕಾರಿಗಳು ಎಚ್ಚೆತ್ತುಕೊಂಡು ಕೂಡಲೇ ನಮಗೆ ಪರಿಹಾರ ಮತ್ತು ಪುನರ್ವಸತಿ ಕೇಂದ್ರವನ್ನು ನಿರ್ಮಿಸಿಕೊಡಿ ಎಂದು ಕೈಮುಗಿದು ಮನವಿ ಮಾಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಿಸಾನ್ ಘಟಕದ ರಾಜ್ಯ ಸಂಚಾಲಕರಾದ ಡಾ ಪದ್ಮಜೀತ ನಾಡಗೌಡ ಪಾಟೀಲ. ಮಹಾದೇವ ಜನಗೊಂಡ. ಜಿನ್ನಪ್ಪ ಶಿರಹಟ್ಟಿ. ಬಸವರಾಜ ನಾಯ್ಕ. ರವಿ ನಂದಗಾವ. ಕುಮಾರ ನಾಯ್ಕ. ಭರತೇಶ ಮಲಗುಂಡಿ. ಭೂಪಾಲ ಜನಗೊಂಡ. ಶ್ರೀಮತಿ ಯಲ್ಲವ್ವ ಕೋಳಿ. ಶ್ರೀಮತಿ ಗಂಗವ್ವ ತಳವಾರ. ಶ್ರೀಮತಿ ಮಹಾನಂದ ತಳವಾರ. ಶ್ರೀಮತಿ ಸನ್ಮತಿ ನಂದಗಾವ. ಪಾಂಡು ಕೋಳಿ. ಭೀಮಪ್ಪ ನಂದಗಾವ. ನಾಗಪ್ಪ ಅಂಬಿ. ಬಾಗವ್ವ ತಳವಾರ. ಸಂಜಯ್ ಅಮ್ಮನಿಗಿಮಠ. ರವಿ ಸಾರವಾಡ. ರವಿ. ಮತ್ತು ಅಸ್ಕಿ ಗ್ರಾಮದ ಜನತೆ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ವರದಿ – ಸಂಪಾದಕೀಯ