ಕೈವಾರದಲ್ಲಿ Airier EV ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂ ಉದ್ಘಾಟನೆ …..
ಶ್ರೀ ಸಾಯಿ ಮೋಟಾರ್ ಕೈವಾರ , ಈ ದಿನ electrical scooter na ಒಂದು ಹೊಸ ಮಳಿಗೆ ತೆರೆದಿದ್ದು, Airier ಕಂಪನಿಯ ಡೈರೆಕ್ಟರ್ ಆದ ಶ್ರಿ ರವಿಪ್ರಕಾಶ್ ಭಟ್ ಅವರು ಈ ಕಾರ್ಯಕ್ರಮವನ್ನು , ಟೇಪ್ ಕಟ್ ಮಾಡುವ ಮೂಲಕ ಉದ್ಘಾಟನೆ ಮಾಡಿದರು.
ಸಾಯಿ ಮೋಟಾರ್ ನ ಮಾಲಕರಾದ ಶ್ರೀಯುತ ಸಾಗರ್ ಅವರು ಸ್ಕೂಟರ್ ನ ಮಹತ್ವದ ಬಗ್ಗೆ ವಿವರಣೆ ನೀಡಿದರು. AIRIER Natura Pvt Ltd, ಕಳೆದ ಮೂವತ್ತು ವರ್ಷಗಳಿಂದ ಅಸಂಪ್ರದಾಯಿಕ ಇಂಧನಗಳ ಬಳಕೆ ಹಾಗೂ ಅದಕ್ಕೆ ಸಂಭಂದ ಪಟ್ಟ ಹಲವಾರು ಹೊಸ product ಗಳನ್ನು ದೇಶಕ್ಕೆ ಪರಿಚಯಿಸಿದ್ದು, ಈಗ ತನ್ನ ಎಲೆಕ್ಟ್ರಿಕ್ ವೆಹಿಕಲ್ ಡಿವಿಷನ್ ಮೂಲಕ ಸ್ಕೂಟರ್ ತಯಾರಿಕೆ ಮಾಡುತ್ತಿದೆ. AIRIER ಈಗ ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ಎರಡು ಮೊಡೆಲ್ ತಯಾರಿಸುತ್ತಿದೆ. SOLASTA ಮತ್ತು MERAKI .ಇವುಗಳು ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲು ಇದರಲ್ಲಿ ಲಿಥಿಯಮ್ ion battery ಉಪಯೋಗಿಸಲಾಗುತ್ತಿದೆ. ಇವುಗಳು ಸುಮಾರು ನೂರು ಕಿಲೋಮೀಟರ್ ಓಡುವ ಸಾಮರ್ಥಯವುಳ್ಳ ಹಾಗೂ ಅರುವತ್ತರಿಂದ ಎಪ್ಪತ್ತು ಕಿಲೋಮೀಟರ್ ವೇಗ ಹೊಂದಿರುವ ಸ್ಕೂಟರ್ ಆಗಿದೆ. ಮೂರರಿಂದ ನಾಲ್ಕು ಘಂಟೆ ಸಮಯದಲ್ಲಿ ಚಾರ್ಜ್ ಮಾಡಬಹುದಾಗಿದ್ದು, ಪ್ರತಿ ಕಿಲೋಮೀಟರ್ ಗೆ ಅಂದಾಜು 25 ಪೈಸೆ ವೆಚ್ಚ ತಗುಲುತ್ತದೆ. ಪೆಟ್ರೋಲ್ ಬೆಲೆಯಿಂದ ಕಂಗೆಟ್ಟ ಜನರಿಗೆ ಇದೊಂದು ವರದಾನ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. Airier natura company ಯ ಡೈರೆಕ್ಟರ್ ರವಿ ಪ್ರಕಾಶ್ ಭಟ್,ಮಾಲೀಕರು ಸಾಗರ್,ಸಂತೋಷ,ನಾಗರಾಜ್ ಮತ್ತು ಮಂಜುನಾಥ್,ಮಧುಕುಮಾರ್,ಪ್ರಮೋದ್,ಪ್ರವೀಣ್, ತಿಮ್ಮ ರಾಜು,ನಾಗೇಶ್, ಉಪಸ್ಥೀತರಿದ್ದಾರು….
ವರದಿ – ಸೋಮನಾಥ ಹೆಚ್ ಎಮ್