ಕರೋನಾ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಕಾಲೇಜು ವಿದ್ಯಾರ್ಥಿಗಳು: ಆರೋಗ್ಯವಂತ ಗ್ರಾಮಕ್ಕೆ ಕೈ ಜೋಡಿಸಿದ ವಿದ್ಯಾರ್ಥಿಗಳು…..
ಕುಂದಗೋಳ: ಇದೊಂದು ಚಿಕ್ಕ ಗ್ರಾಮ, ಈ ಗ್ರಾಮದ ಜನಸಂಖ್ಯೆ 1200 ಇದ್ದರು ಸಹ ಎಲ್ಲರೂ ಆರೋಗ್ಯವಂತರು. ಇವರ ಆರೋಗ್ಯದ ಗುಟ್ಟೇನು? ಸದ್ಯ ಇವರ ಆರೋಗ್ಯ ಖಾಳಜಿ ವಹಿಸಲು ಇದೀಗ ಕಾಲೆಜು ವಿದ್ಯಾರ್ಥಿಗಳು ಮುಂದೆ ಬಂದಿದ್ದಾರೆ.ಅಷ್ಟಕ್ಕೂ ಈ ಗ್ರಾಮ ಯಾವುದು ಅಂತೀರಾ ಈ ವರದಿ ನೋಡಿ.. ಇಂದು ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮದಲ್ಲಿ ಹುಬ್ಬಳ್ಳಿಯ ಪಿ ಸಿ ಜಾಬಿನ ವಿಜ್ಞಾನ ಮಹಾವಿದ್ಯಾಲಯದ ಕಾಲೇಜು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಸಾಂಕ್ರಾಮಿಕ ರೋಗಗಳಾದ ಕರೋನಾ, ಕಾಲರಾ ,ಡೆಂಗ್ಯೂ ಮಹಾಮಾರಿ ಸಾಕಷ್ಟು ಜನರ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಹೌದು.ಪ್ರತಿಯೊಬ್ಬರಿಗೆ ಕರೋನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಡೆಂಗ್ಯೂ, ಮಲೇರಿಯಾ, ಕಾಲರಾ, ಇನ್ನೂ ಹಲವಾರು ಸಾಂಕ್ರಾಮಿಕ ರೋಗ ತಡೆಗಟ್ಟಲು ಮನೆಯಲ್ಲಿ ಹಲವಾರು ಕ್ರಮಗಳನ್ನು ಅನುಸರಿಸುವಂತೆ ಜನರಿಗೆ ತಿಳಿ ಹೇಳಿದರು. ಮನೆಯ ಸುತ್ತಮುತ್ತ ಜಾಗವನ್ನು ಸ್ವಚ್ಛತೆ ಇಡಬೇಕು ಬಿಸಿ ನೀರು ಸೇವನೆ ಆರೋಗ್ಯದ ಬಗ್ಗೆ ಕಾಳಜಿ ಮಹಾ ಮಾರಿ ಕರೋನಾ ಮೂರನೇ ಅಲೆ ಮಕ್ಕಳ ಮೇಲೆ ಬಿರುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಮಕ್ಕಳ ಬಗ್ಗೆ ಕಾಳಜಿ ಇರಬೇಕು. ಹೊರಗೆ ಹೋದಾಗ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮನೆ ಸುತ್ತಮುತ್ತ ಕಲುಷಿತ ನೀರು ನಿಲ್ಲದಂತೆ ನೋಡಿಕೊಳ್ಳುವಂತೆ ಸಲಹೆ ನೀಡಿದರು. ಇನ್ನೂ ಹಲವಾರು ವಿಷಯಗಳ ಬಗ್ಗೆ ರೋಗ ತಡೆಗಟ್ಟಲು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮನೆ ಮನೆಗೆ ಭೇಟಿ ನೀಡಿ ಜನರಿಗೆ ಜಾಗೃತಿಯನ್ನು ಮೂಡಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಯಿತು ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳಾದ ರಾಹುಲ್. ಮತ್ತು ವಿನಯ್ ಕುಮಾರ್ ಸೂರಟಿ. ವಿದ್ಯಾರ್ಥಿನಿಗಳಾದ ಹರಿಣಿ ಜೋಶಿ. ಸುಪ್ರಿಯಾ ಹಿರೇಮಠ್ ನಂದಾ ಹರಿವಾಣ ವಿಜಯಲಕ್ಷ್ಮಿ ಪಾಟೀಲ ಮತ್ತು ಗ್ರಾಮ ಪಂಚಾಯತ್ ಸದಸ್ಯರು ಮತ್ತು ಟಾಸ್ಕ್ ಫೋರ್ಸ್ ಕಮಿಟಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ರಡ್ಡೇರ ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ಜಾನಕಿ ಉಪಾಧ್ಯಾಯ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ – ಮಹೇಶ ಶರ್ಮಾ