ಎಂಥವರನ್ನೂ ಬೀದಿಗೆ ತಂದು ನಿಲ್ಲಿಸಿದೆ ಹೆಮ್ಮಾರಿ ಕೊರೋನಾ…
ಕೊರೋನಾ ದಿಂದ ಕೆಲಸವಿಲ್ದೆ ಬೀದಿಗೆ ಬಿದ್ದ ಅಂಧ ಕಲಾವಿದೆ.. ಮಧುರವಾದ ಕೋಗಿಲೆ ಕಂಠದಿಂದ ಎಲ್ಲರ ಗಮನ ಸೆಳೆದಿದ್ದ ಅಂಧ ಕಲಾವಿದೆಹೊಟ್ಟೆ ಪಾಡಿಗಾಗಿ ಬೀದಿಯಲ್ಲಿ ನಿಂತು ಹಾಡು ಹಾಡ್ತಿರೋ ಕಲಾವಿದೆ ಬಸ್ ನಿಲ್ದಾಣ, ಮಾರ್ಕೆಟ್ ಸೇರಿದಂತೆ ಜನನಿ ಬೀಡ ಪ್ರದೇಶಗಳಲ್ಲಿ ಸಂಗೀತ ಕಲೆಯ ಅನಾವರಣ.. ಸಂಕಷ್ಟದ ಜೀವನದ ಕುರಿತು ಹಾಡುಗಳ ಮೂಲಕ ಜನ್ರ ಮನಸ್ಸು ಸೇಳೆಯುತ್ತಿರೋ ಬಡಪಾಯಿ ಸದ್ಯ ಅವಳ ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕಳೆದ ಎರೆಡು ದಿನಗಳ ಹಿಂದಷ್ಟೆ ಸಾಮಾಜಿಕ ಜಾಲತಾಣದಲ್ಲಿ ಈಕೆಯ ಹಾಡು ಇವಳ ಸಂಗೀತಕ್ಕೆ ತಲೆಬಾಗಿದ ಲಕ್ಷಾಂತರ ಜನ್ರು ವಿಡಿಯೋ ಶೇರ್ ಮಾಡೋದಲ್ಲದೆ ಸಿಕ್ಕಾಪಟ್ಟೆ ಲೈಕ್ ಇಷ್ಟಕ್ಕೂ ಅವಳು ಇರೋದು ಸಂಗಿತ ಕಾಶಿ ಎಂದೇ ಹೆಸರಾಗಿರೋ ಗದಗನಲ್ಲಿ ಗದಗ ಬೆಟಗೇರಿಯ ಮಂಜುನಾಥ ನಗರದ ನಿವಾಸಿ ರೇಷ್ಮಾ… ಮೂಲತಃ ಬಳ್ಳಾರಿ ಜಿಲ್ಲೆಯವಳಾದ ರೇಷ್ಮಾ, ಕಳೆದ ಎರಡು ವರ್ಷಗಳಿಂದ ಗದಗದಲ್ಲೇ ವಾಸ ಮಾಡುತ್ತಿದ್ದಾಳೆ.. ಗದಗದ ಖಾಸಗಿ ಹೋಟೆಲ್ ನಲ್ಲಿ ಸಿಂಗರ್ ಆಗಿ ಕೆಲಸ ಮಾಡ್ತಿದ್ದ ರೇಷ್ಮಾ… ಹುಟ್ಟಿನಿಂದಲೇ ಅಂಧತ್ವ ಹೊಂದಿರೋ ಇವಳಿಗೆ ಸಂಗೀತ ಅಂದ್ರೆ ಪಂಚಪ್ರಾಣ… ಸುಗಮ ಸಂಗೀತದ ಗಾಯಕಿಯಾಗಿ ಕಳೆದ 10 ವರ್ಷಗಳಿಂದ ಸೇವೆ.. ಪತಿಯಿಂದ ದೂರವಾದ ರೇಷ್ಮಾ ಕಳೆದ 12 ವರ್ಷಗಳಿಂದ ಮಗನ ಜೊತೆಗೆ ಸಂಚಾರಿ ಜೀವನ ಸಾಗಿಸಿದ್ದಾರೆ… ಸದ್ಯ ಕಳೆದ ಎರಡು ವರ್ಷಗಳಿಂದ ಗದಗದಲ್ಲಿ ವಾಸವಿದ್ದು ಖಾಸಗಿ ಹೊಟೇಲ್ ನಲ್ಲಿ ಕೆಲಸ ಮಾಡ್ತಿದ್ರು.. ಕೊರೋನಾ ಎಫೆಕ್ಟನಿಂದಾಗಿ ಹೋಟೆಲ್ ನಲ್ಲಿ ಕೆಲಸವಿಲ್ದೆ ಬೀದಿಗೆ ಬಂದು ಸಂಗೀತದ ಕಾಯಕ ತನ್ನ ಕೋಗಿಲೆ ಕಂಠದಿಂದ ಹಾಡು ಹಾಡುತ್ತಾ ಜನ್ರಿಗೆ ಮನರಂಜಿಸಿ ಉಪಜೀವನಕ್ಕೆ ಸಹಕಾರ ಕಲಾ ಪ್ರೇಮಿಗಳು ನೀಡುವ ಅಲ್ಪ ಸಹಾಯ ದಿಂದ ತನ್ನ ಬಡತನ ಜೀವನದ ಬಂಡಿ ಸಾಗಿಸುತ್ತಿದ್ದಾಳೆ… ಗೇಣು ಹೊಟ್ಟೆ ತುಂಬಿಸಿಕೊಳ್ಳಲು ಬೀದಿ ಬೀದಿ ಸುತ್ತುತ್ತಿದ್ದಾಳೆ.. ನಿಮ್ಮ ನ್ಯೂಸ್ 18 ಕನ್ನಡದ ಮುಂದೆ ಕಲಾವಿದೆ ರೇಷ್ಮಾ ಕಣ್ಣೀರು ಹಾಕುತ್ತಾ ಕೇಳಿದ್ದೇನು.. ಯಾರಾದರೂ ನನಗೆ ಸಹಾಯ ಮಾಡಿ ಅಂತಾ ಗೋಳಾಡುತ್ತಿದ್ದಾಳೆ.. ನನ್ನ ಸಂಗೀತದ ಕಲೆಗೆ ಸೂಕ್ತವಾದ ವೇದಿಕೆ ಕಲ್ಪಿಸುವಂತೆ ಮನವಿ ಮಾಡಿಕೊಂಡಿದ್ದಾಳೆ…ರೇಷ್ಮಾಳ ಸಂಗೀತದ ಜೀವನ ಪಯಣಕ್ಕೆ ಬೇಕಿದೆ ಆಸರೆಯ ನೆರವು. ವರದಿ – ಮುತ್ತಣ್ಣ ಬುರಡಿ ಗದಗ