ಜುಮಲಾಪೂರ ಗ್ರಾಮದಲ್ಲಿ ಸರಳವಾಗಿ 75 ನೇ ಸ್ವಾತಂತ್ರ್ಯ ದಿನಾಚರಣೆ….
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಜುಮಲಾಪೂರ ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ 75 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಈ ಸಂಧರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ನಾಗೇಶ್ ಅಳಿಗನೂರವರು ಸ್ವಾತಂತ್ರ್ಯ ಹೋರಾಟಗಾರರ ಬಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಶಾಲಾಮಕ್ಕಳು ರಾಷ್ಟ್ರ ಗೀತೆ ಹಾಡುವ ಮುಖಾಂತರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಮತಿ ಅಕ್ಕಮ್ಮ ದಂಡಿನ ಧ್ವಜಾರೋಹಣ ಮಾಡಿದರು ಈ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಯಾದ ಮುದೆಗೌಡರವರು ಎಲ್ಲರನ್ನೂ ಈ ಕಾರ್ಯಕ್ರಮಕ್ಕೆ ಸ್ವಾಗತಿಸಿ ಅಚ್ಚುಕಟ್ಟಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಾದ ಶ್ರೀ ಬಾಳಪ್ಪ ಕೊಡಗಲಿ ಶ್ರೀ ನಿಂಗಪ್ಪ ಕುರಿ ಶ್ರೀ ಮತಿ ಲಕ್ಷ್ಮವ್ವ ಹುಡೇಜಾಲಿ ಶ್ರೀ ಮತಿ ತಿಪ್ಪವ್ವ ಚಲುವಾದಿ ಹಾಗೂ ಊರಿನ ಮುಖಂಡರಾದ ಕನಕಪ್ಪ ಹುಡೇಜಾಲಿ. ಶಂಕರಪ್ಪ ಬೋದುರು. ನಿಂಗಪ್ಪ ಹಳ್ಳದಂಡಿ. ಬಡನೆಸಾಬ. ಶಿವುಪುತ್ರ ಬಪ್ಪೂರ. ಪಾಂಡಪ್ಪ ಚಲುವಾದಿ. ಹಾಗೂ ಗ್ರಾಮ ಪಂಚಾಯಿತಿ ಸರ್ವ ಸಿಬ್ಬಂದಿ ಹಾಗೂ ಊರಿನ ಪ್ರಮುಖರು ಇದ್ದರು ಹಾಗೆ ಗ್ರಾಮದ ಅಂಬೇಡ್ಕರ್ ಕಾಲೊನಿಯಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಬಿಮವಾದ ಸಂಘಟನೆ ಊರಿನ ಗ್ರಾಮಸ್ಥರು ಗ್ರಾಮ ಘಟಕದ ಅಧ್ಯಕ್ಷರಾದ ಶಂಕರಪ್ಪ ಚಲುವಾದಿ ಹಾಗೂ ಸಂಘಟನೆಯ ಸರ್ವ ಸದಸ್ಯರು ಸೇರಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖಾಂತರ ದಿನಾಚರಣೆ ಆಚರಿಸಿದರ. ಜೊತೆಗೆ
ವರದಿ – ಅಮಾಜಪ್ಪ ಹೆಚ್.ಜುಮಾಲಾಪೂರ