“ರೈತರೇ ದೇಶದ ಬೆನ್ನೆಲುಬು”..
ಎನ್ನುವುದು ಬರಿ ಬಡಾಯಿಕೊಚ್ಚಿಕೊಳ್ಳುವವರ ರಂಗುರಂಗಿನ ಬಣ್ಣತುಂಬುವ ಮಾತಾಗಬಾರದು..❓
ಎಸಿ ಗಾಳಿಯಲ್ಲಿ….
ಕಾಂಕ್ರೀಟನ ರೂಮಿನಲ್ಲಿ….!
ಮೆತ್ತನೆಯ ಕುರ್ಚಿಯಲ್ಲಿ…. !
ಅಡ್ಡ ಮಲಗಿ ನಿದ್ರಿಸುವರು…
ಸಭೆಸಮಾರಂಭಗಳಲ್ಲಿ..!!
ಕುಳಿತಲ್ಲೇ ಮಣ್ಣಿನ ಮಕ್ಕಳು /ನೇಗಿಲ ಯೋಗಿ ಎಂದು ಹೋಗಳುವರು ಬರಿ ಬಣ್ಣದ ಬಡಾಯಿ ತುಂಬಿದ ಬಾಯಿ ಮಾತಿನಲ್ಲಿ…. !
ಹೊಲದಲ್ಲಿರುವ ರೈತರ ಮಣ್ಣಿನ ಕಷ್ಟ ಪಡುಪಾಟಲಿನ ಯಾತನೆ ನೋಡಬೇಕೆಲ್ಲಿ..❓
ನಮ್ಮನ್ನೆಲ್ಲಾಳುವ
ಈ ನಮ್ಮ ……… ನಾಯಕರು………..!
ಮಣ್ಣಿನಲ್ಲಿ …. ಮಣ್ಣಾಗುವ….!ಮಣ್ಣಿನಲ್ಲಿಯೇ ಜೀವ ತೇಯುವ…..!
ರೈತನೇ ದೇಶದ ಬೆನ್ನೆಲುಬು ಎಂದು ಜಂಭ ಕೊಚ್ಚಿಕೊಳ್ಳುವ…..!
ಈ ನಮ್ಮ ನಾಯಕರು….
ಬರಿ ತಮ್ಮ ಸ್ವಾರ್ಥಪರ ಪದವಿಗಾಗಿ…..!
ತಾವೆಂದು ಬಿಟ್ಟು ಕೊಡದ….
ತಮ್ಮ ಸ್ಥಾನಕ್ಕಾಗಿ……! ಸದಾಕಾಲ ಅಧಿಕಾರದಲ್ಲಿ ತೇಲುವ……
ಮಂತ್ರಿಗಿರಿಗಾಗಿ….. !!
ಜನರ ಹೆಸರಿನ ಮೇಲೆ..
ಜನ ಸೇವಕನೆಂಬ ಹಣೆಪಟ್ಟಿ ಹಿಡಿದುಕೊಂಡು….. ರೈತರ ಕೋಟಿ ಕೋಟಿ ಹಣದ ಲೂಟಿಗಾಗಿ….!!
ರೈತರ ಆತ್ಮಹತ್ಯೆ ಗೆ….ಕಾರಣ ನಮ್ಮ ಈ ಅಸ್ತವ್ಯಸ್ತವಾದ ವ್ಯವಸ್ಥೆಗಳು……!!
ಹಣದಮೊಹ ಹೆಚ್ಚಾಗಿ…
ವಿಫಲವಾಗಿ ಹೋಗುವ ಪ್ರತಿಯೊಂದು ಯೋಜನೆಗಳು….!
ನೀರಾವರಿ…
ಕೃಷಿ ಅಭಿವೃದ್ಧಿ. ಮಾರುಕಟ್ಟೆ… ವ್ಯವಸ್ಥೆಗಳು… !!
ರೈತರಿಗೆ ಸಿಗಬೇಕಾದ ಲಾಭವು ದಲ್ಲಾಳಿಗಳು ಪಡೆದು ಕೋಟ್ಯಾಂತರ ರೂಪಾಯಿಗಳ ಮಾಲೀಕರಾಗಿ ಕೋಟ್ಯಾಧಿಪತಿಯಾಗುವಾಗ…..!!
‘ರೈತರ ಬೆನ್ನೆಲುಬು’ ಬಾಗಿ….”ಎಲುಬಿನ ಗೂಡಾಗಿ”….. !
ಸೊರಗಿದ ದೇಹ ಹೊತ್ತು ಆತ್ಮಹತ್ಯೆಗೆ ಶರಣಾಗಿ….!!
ಸಾಯುವ ರೈತರನ್ನು ಕಂಡು ಮರುಗುವವರು ಯಾರು…❓
ರೈತರ ಮಕ್ಕಳೆಂದು….
ಮಣ್ಣಿನ ಮಕ್ಕಳೆಂದು…
ತಮ್ಮ ಓಟು ಬ್ಯಾಂಕ್ ಗಾಗಿ ….!
ಬಡಾಯಿ ಕೊಚ್ಚಿ ಕೊಂಡು ಆಶ್ವಾಸನೆ ಗಳಿಂದ ಭಾಷಣದಲ್ಲಿ.. ರೈತರನ್ನು ಉರಿದುಂಬಿಸಿ……!
ತಮ್ಮ ಡೊಳ್ಳು ಹೊಟ್ಟೆ ತುಂಬಿಸಿ ಕೊಳ್ಳುವ ನಾಯಕರುಗಳಾ…❓
ಅಥವಾ……
ರೈತರು ಬೆಳೆದ ಬೆಳೆಯನ್ನು ಅರ್ಧ ಬೆಲೆಗೆ ಖರೀದಿಸುವ..!ಅದಕ್ಕೆ ಪೂರ್ತಿ ಬೆಲೆಯ ಲಾಭ ಪಡೆದುಕೊಂಡು.. ಶ್ರೀಮಂತರಾಗುವ ದಲ್ಲಾಳಿಗಳಾ……❓
ನಿಮಗೆ..ಗೊತ್ತೇ.❓
ನಿಜವಾದ ಮಣ್ಣಿನ ಮಗನ ಸುಖ ದುಃಖದ ನೋವು ಯಾತನೆಯ ಸ್ಥಿತಿಗತಿ……!
ರೈತರು ನಿಜವಾಗಿಯೂ ದೇಶದ ಬೆನ್ನೆಲುಬು ಎನ್ನುವುದಾದರೆ….
ಸಕಲ ಸೌಕರ್ಯಗಳನ್ನು ನೀಡಿ ತೋರಿಸಿ ಸನಮತಿ…..!!
✍ಹನುಮಂತಪ್ಪ, ಕಿಡದೂರು @ನಾರಿನಾಳ….