ತಾಯಿನಾಡಿನ ರಕ್ಷಣೆಗಾಗಿ ಜೀವದ ಹಂಗನ್ನು ತೊರೆದು ಪ್ರಾಣವನ್ನು ತ್ಯಾಗ ಮಾಡಿದ ತಂದೆರವರ ಸಾವು ದೊಡ್ಡ ಗಾಸಿ ಮಾಡಿತ್ತು…..
ಈ ಸೋಲು ಲಾಹೂಜಿ ಸಲ್ವೆಯವರ ಮನಸ್ಸಿನಲ್ಲಿ ಸ್ವತಂತ್ರದ ಕಿಚ್ಚು, ಜ್ವಾಲಾಮುಖಿಯಾಗಿ ಹೊರಹೊಮ್ಮಿತ್ತು. ಕ್ರಾಂತಿವೀರ ಲಹೂಜಿ ಸಾಲ್ವೆ (ಉಸ್ತಾದ ಲಾಹುಜಿ ಸಾಲ್ವೆ) ಅವರ ಜನನ ನವಂಬರ್ 14,1794ರಲ್ಲಿ ಮಹಾರಾಷ್ಟ್ರದ ಪುರಂದರ ಕೋಟೆಯ ಫೇಥ್ ಗ್ರಾಮದಲ್ಲಿ ಜನಿಸಿದರು ತಂದೆ ಹೆಸರು ರಘೋಜಿ ಸಲ್ವೆ ತಾಯಿ ಹೆಸರು ವಿಥಾಬಾಯಿ. ಅಸ್ಪೃಶ್ಯ ಜನಾಂಗದಲ್ಲಿ ಜನಿಸಿದ ಇವರು ಮಾತಂಗ ಅಥವಾ ಮಾಂಗ್ ಎಂದು ಕರೆಯಲ್ಪಡುತ್ತಿದ್ದರು. ಸಹಜವಾಗಿ ಅಸ್ಪೃಶ್ಯರಾದ ಕಾರಣ ಇವರಿಗೆ ಶಿಕ್ಷಣ ಇರಲಿಲ್ಲ. ತಂದೆಯವರು ಕುಸ್ತಿಯನ್ನು ಕಲಿಸಿಕೊಟ್ಟಿದ್ದರು ಇದನ್ನು ಕಟ್ಟುನಿಟ್ಟಾಗಿ ಶಿಸ್ತುಬದ್ಧವಾಗಿ ಕಲಿತ ಅವರು ಪರಿಣಿತ ಕುಸ್ತಿಪಟು ಆಗಿದ್ದರು.ಅದು ಅಂತಿಮವಾಗಿ ಅವರಿಗೆ ಉಸ್ತಾದ್ ಎಂಬ ಬಿರುದನ್ನು ನೀಡಿತ್ತು. ಇವರ ಪೂರ್ವಜರು ಛತ್ರಪತಿ ಶಿವಾಜಿ ಮಹಾರಾಜರ ಆಡಳಿತದ ಕಾಲದಿಂದಲೂ ಪ್ರಮುಖ ಜವಾಬ್ದಾರಿಯನ್ನು ವಹಿಸಿ ಕೊಟ್ಟಿದ್ದರು. ಲಹೂಜಿ ಸಾಲ್ವೆ ಕುಟುಂಬದ ಯೋಗ್ಯತೆಯನ್ನು ಗುರುತಿಸಿ ಪುರಂದರ ಕೋಟೆಯ ರಕ್ಷಣೆಯ ಜವಾಬ್ದಾರಿಯನ್ನು ಸಾಲ್ವೆ ಅವರ ತಾತನವರಿಗೆ ವಹಿಸಿಕೊಟ್ಟಿದ್ದರು. ಸಾಲ್ವೆ ಅವರ ಕುಟುಂಬ ಧೈರ್ಯಶಾಲಿ ಹಾಗೂ ನಂಬಿಕೆ ಅರ್ಹರಾಗಿದ್ದು ಮತ್ತು ಅವರ ಪೂರ್ವಜರ ಅತ್ಯುತ್ತಮ ಸಾಧನೆಗಾಗಿ ಶಿವಾಜಿ ಮಹಾರಾಜರವರು ರೌತ್ ಎಂಬ ಬಿರುದನ್ನು ನೀಡಿ ಗೌರವಿಸಿದ್ದರು. ಲಾಹೂಜಿ ಸಾಲ್ವೆ ಎಲ್ಲ ಸಮರ ಕಲೆಗಳಲ್ಲಿ ಪ್ರಾವೀಣ್ಯತೆ ಹೊಂದಿದ್ದರು.( ಬೇಲಿ ಹಾಕುವುದು ಕುದುರೆ ಸವಾರ ಮಾಡುವುದು, ಬಂಧೂಕಿನಿಂದ ಗುಂಡು ಹಾರಿಸುವುದು, ಬಿಲ್ಲು ಬಾಳ ಹೊಡೆಯುವುದು, ಖಡ್ಗ ಸಮರ, ಕುಸ್ತಿ ಹಾಡುವುದು E.t.c.,) ಬ್ರಿಟಿಷರನ್ನು ಸೋಲಿಸಲು, ತಾಯಿನಾಡಿನ ಸ್ವಾತಂತ್ರ್ಯಕ್ಕಾಗಿ ಯುವಪಡೆಯನ್ನು ಸಜ್ಜು ಮಾಡಲು ಒಂದು ಸುಸಜ್ಜಿತ ವ್ಯಾಯಾಮ ಶಾಲೆಯನ್ನು 1822ರಲ್ಲಿ ಸ್ಥಾಪನೆ ಮಾಡಿದರು, ಇದನ್ನು ನೋಡಿ ಯುವಪೀಳಿಗೆ ಸಮರ ಕಲೆಯನ್ನು ಕಲಿಯಲು ಮುಗಿಬೀಳುತ್ತಿದ್ದರು.ಇಲ್ಲಿ ತರಬೇತಿ ಹಾಗೂ ಮಾರ್ಗದರ್ಶನ ಪಡೆದ ಪ್ರಮುಖರು ಎಂದರೆ ಬಾಲಗಂಗಾಧರ್ ತಿಲಕ್, ವಾಸುದೇವ ಬಲವಂತ ಪಡಕೆ ಜ್ಯೋತಿ ಬಾ ಪುಲೆ, ರಾವ್ ಬಹದ್ದೂರ್ ಸದಾಶಿವರಾವ್ ಗೋವಂದೆ, ನಾನಾ ಮುರೂರ್ಜಿ ಮುಂತಾದವರು. ಮುಂದೆ ಇದೆ ತಂಡ ಸ್ವತಂತ್ರ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಭಾರತಮಾತೆಯನ್ನು ಬ್ರಿಟಿಷರಿಂದ ಸ್ವತಂತ್ರಗೊಳಿಸಲು ಯಶಸ್ವಿಯಾಗಿರುವುದು ನಮ್ಮ ಕಣ್ಣ ಮುಂದೆ ಇದೆ. ಲಾಹೂಜಿ ಸಾಲ್ವೆಯವರು ಭಾರತದ ಕೆಲವು ಪ್ರಮುಖ ಸ್ವತಂತ್ರ ಹೋರಾಟಗಾರರಿಗೆ ಮಾರ್ಗದರ್ಶನಕ್ಕಾಗಿ ಕಾರ್ಯನಿರ್ವಹಿಸಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಕೊಡಿಸಲು ಪ್ರಮುಖ ಪಾತ್ರವನ್ನು ವಹಿಸಿದ ಶಿಷ್ಯರ ಬಳಗದ ಹೆಸರುಗಳು ಅಜರಾಮರವಾಗಿವೆ. ಅಸ್ಪಶ್ಯರು,ತುಳಿತಕ್ಕೊಳಗಾದ ವರ್ಗಗಳಿಗೆ ಶಿಕ್ಷಣ ನೀಡುವ ಮೂಲಕ ವಿಮೋಚನೆಗಾಗಿ ಜ್ಯೋತಿ ಬಾ ಪುಲೆ ಅವರ ಕೆಲಸವನ್ನು ಪರಿಚಯಿಸಿದರು, ಶಿಕ್ಷಣದ ಉದ್ದೇಶವನ್ನು ಸುತ್ತಮುತ್ತಲಿನ ಪ್ರದೇಶಗಳಿಗೆ ಹರಡಿಸಲು ಕಾರಣೀಭೂತರಾದರು. 1848 ರಲ್ಲಿ ಜ್ಯೋತಿಬಾಪುಲೆ, ಸಾವಿತ್ರಿ ಬಾಪುಲೆ ಶಾಲೆ ಪ್ರಾರಂಭಿಸಲು ಅಡೆತಡೆಗಳು ಬಂದಾಗ ಲಾಹುಜಿ ಸಾಲ್ವೆಯವರು ಸಂಪೂರ್ಣ ಬೆಂಬಲವನ್ನು ಸೂಚಿಸಿ ಅವರಿಗೆ ರಕ್ಷಣೆ ಹಾಗೂ ಶಾಲೆಯನ್ನು ನಡೆಸಲು ತಮ್ಮ ವ್ಯಾಯಾಮದ ಗರಡಿಮನೆಯಲ್ಲಿ ಕೊಟ್ಟಿದ್ದರು ಎಂದು ಕೆಲವೊಂದು ಸ್ಥಳೀಯ ಜಾನಪದ ಹಾಡುಗಳಿಂದ ತಿಳಿದುಬರುತ್ತದೆ. ಹೆಣ್ಣು ಮಕ್ಕಳನ್ನು ಶಾಲೆಗೆ ಸೇರಿಸಲು ಅಭಿಯಾನವನ್ನು ಪ್ರಾರಂಭಿಸುತ್ತಾರೆ ಅದರ ಪರಿಣಾಮವಾಗಿ ಹೆಣ್ಣುಮಕ್ಕಳು ಶಾಲೆಗೆ ಹೋಗುವಂತಾಗುತ್ತದೆ ವಿಶೇಷವೆಂದರೆ ಮುಕ್ತ ಸಾಲ್ವೆ ಅಸ್ಪಶ್ಯ ಹೆಣ್ಣುಮಗಳು ಒಬ್ಬಳು ಪ್ರಥಮ ವಿದ್ಯಾರ್ಥಿನಿಯಾಗಿ ಶಾಲೆಗೆ ಸೇರುತ್ತಾಳೆ ಎಂದು ಜ್ಯೋತಿ ಬಾ ಪುಲೆ ಅವರು ತಮ್ಮ ಪುಸ್ತಕ ಒಂದರಲ್ಲಿ ದಾಖಲಿಸಿದ್ದಾರೆ. ಹಿಂದೂಸ್ತಾನ್ ಸೋಸಿಯಲಿಸ್ಟ್ ರಿಪಬ್ಲಿಕ್ ಅಸೋಸಿಯೇಷನ್ ಸಂಸ್ಥೆಯನ್ನು ಸ್ಥಾಪನೆ ಮಾಡಿದ ಹೆಗ್ಗಳಿಕೆ ಇವರದು. ಭಾರತದ ಸ್ವಾತಂತ್ರ್ಯಹೋರಾಟಗಾರರು ಸಾಮಾಜಿಕ ಸುಧಾರಕರು,ಅಪ್ಪಟ ರಾಷ್ಟ್ರವಾಗಿ, ದೇಶಪ್ರೇಮಿ ಮತ್ತು ಬ್ರಹ್ಮಚಾರಿಯಾಗಿದ್ದ ಲಾಹುಜಿ ಸಾಲ್ವೆ , ಧರ್ಮವೀರ್ ಲಾಹುಜಿ ಸಾಲ್ವೆ , ಆದಿಕ್ರಾಂತಿ ಲಾಹುಜಿ ಉಸ್ತಾದ್ ಎಂದು ಸಹ ಕರೆಯುತ್ತಿದ್ದರು. ಮಹಾರಾಷ್ಟ್ರ ಶಿಕ್ಷಣ ಮಂಡಳಿಯು 11ನೇ ತರಗತಿಯ ಪಠ್ಯಪುಸ್ತಕದಲ್ಲಿ ಲಾಹುಜಿ ಸಾಲ್ವೆ ಅವರ ಬಗ್ಗೆ ನಾವು ಕಾಣಬಹುದು. ಸರ್ಕಾರಿ ಪ್ರಯೋಜಿತ ವಿವಿಧ ದೈಹಿಕ ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆಗೆ ಸಂಬಂಧಿಸಿದ ಉಪಕ್ರಮಗಳ ರೂಪದಲ್ಲಿ ಜೀವಂತವಾಗಿದೆ. ಕನ್ನಡದ ಹೆಮ್ಮೆಯ ಪುತ್ರ ಸಂಗೊಳ್ಳಿರಾಯಣ್ಣ ಭಾರತ ಹಾಗೂ ಕರ್ನಾಟಕದ ಮೂಲೆಮೂಲೆಯಲ್ಲೂ ಇವರ ಹೆಸರನ್ನು ಪಸರಿಸಿದೆ. ಆದರೆ ಭಾರತದ ಸ್ವತಂತ್ರ ಹೋರಾಟಗಾರ ಲಾಹುಜಿ ಸಾಲ್ವೆ ಯವರ. ಸಾಧನೆಯನ್ನು ಮಹಾರಾಷ್ಟ್ರ ಕರ್ನಾಟಕ ಹಾಗೂ ಭಾರತ ದೇಶದತ್ಯಂತ ಪರಿಚಯಿಸಲು ಯಾಕೆ ವಿಫಲರಾದರು…..? ಅಸ್ಪೃಶ್ಯ ಜನಾಂಗದ ವಿದ್ಯಾವಂತರ, ದಲಿತ ಹೋರಾಟಗಾರರು, ಮಾದಿಗ ಸಮಾಜಕ್ಕೆ ಇವರ ಪರಿಚಯ ಇಲ್ಲ ಎಂಬುವುದು ಒಂದು ದೊಡ್ಡ ದುರಂತ. ಇನ್ನು ಮುಂದೆಯಾದರೂ ಮಾದಿಗ ಸಮುದಾಯದ ಸಾಹಿತಿಗಳು ವಿದ್ಯಾವಂತರು ನೌಕರರು ಲಾಹುಜಿ ಸಾಲ್ವೆ ಅವರ ಇತಿಹಾಸವನ್ನು ಸಮುದಾಯಕ್ಕೆ ಪರಿಚಯ ಮಾಡಿಕೊಡಬೇಕಾಗಿದೆ. 17 ಫೆಬ್ರುವರಿ 1881 ರಂದು ಪುಣೆಯ ಸಂಗಾಪುರ ಗುಡಿಸಿಲಿನಲ್ಲಿ ಲಾಹುಜಿ ಸಾಲ್ವೆ ಅವರ ಸಮಾಧಿ ಮಾಡಲಾಯಿತು. ಮಹಾಕ್ರಾಂತಿ ಪರ್ವವೂ ಕೊನೆಗೊಂಡಿತು. ಲಾಹುಜಿ ಸಾಲ್ವೆ ಅವರ ಸಮಾಧಿ ಸಂಗಮವಾಡಿನಲ್ಲಿದೆ(ಪುಣೆ). ವಿಶೇಷ ವರದಿ ಸಂಗ್ರಹಗಾರರು :- ನಾಗಲಿಂಗ ಮಳೆಕೊಪ್ಪ, ಕೊಪ್ಪಳ
ವರದಿ – ಸಂಪಾದಕೀಯ