ಸಂಗೊಳ್ಳಿ ರಾಯಣ್ಣನ ದೇಶಪ್ರೇಮ, ಹೋರಾಟ ಸದಾ ಅಮರ……
ಇಂದು ವಿಜಯಪುರದಲ್ಲಿ, ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ವಿಜಯಪುರ ಜಿಲ್ಲೆಯ ಉಸ್ತುವಾರಿ ಹಾಗೂ ಮುಜರಾಯಿ, ಹಜ ಮತ್ತು ವಕ್ಫ್ ಇಲಾಖೆಯ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ ಯವರು ಪುಷ್ಪನಮನ ಸಲ್ಲಿಸಿದರು. ಭಾರತಾಂಬೆಯ ರಕ್ಷಣೆಗಾಗಿ ಬ್ರಿಟಿಷ್ ರ ವಿರುದ್ಧ ಸಾವಿನವರೆಗೂ ಹೋರಾಡಿದ ಕರುನಾಡಿನ ವೀರಪುತ್ರ, ಕ್ರಾಂತಿವೀರ ಸಂಗೊಳ್ಳಿ ಅವರ ಹೋರಾಟದ ಹಾದಿ, ಅವರ ಜೀವನ ಎಂದೆಂದಿಗೂ ಚಿರಸ್ಮರಣೀಯ. ರಾಯಣ್ಣನ ನಿಸ್ವಾರ್ಥ ಹೋರಾಟ, ದೇಶಪ್ರೇಮ ಯುವಜನತೆಗೆ ಸ್ಫೂರ್ತಿದಾಯಕ ಎಂದು ಹೇಳಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.
ವರದಿ – ಮಹೇಶ ಶರ್ಮಾ