” ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು”  …!!

Spread the love

” ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು”  …!!

(ರೈತರ ಜೀವನ ಚಿತ್ರ )

ಕೋಟಿ ಕೋಟಿ ಜೀವರಾಶಿಗಳ ಒಡಲಿನ

ಹಸಿವನ್ನು ನೀಗಿಸುವ ಜೀವಧಾತ..! ಭೂ ತಾಯಿ ಚೊಚ್ಚಲ ಮಗ  ಅನ್ನಧಾತ…!!

ಕೃಷಿ ಇದ್ದರೆ  ಖುಷಿ … ಕೃಷಿಯಿಂದಲೇ ಜೀವನ ರಸ ಋಷಿ,…!!

ನೋಗಿಲುಯೋಗಿ ಬೇಕು ಈ ಧರೆಗೆ..! ಹಸಿರು ತುಂಬಲು ಭೂತಾಯಿಮಡಿಲಿಗೆ !!

ಬದುಕಿ ಬಾಳಲು.. ಹಸಿರು ಬೇಕು  ಸರ್ವ ಜೀವರಾಶಿಗಳ ಒಡಲಿಗೆ…!

ಅನ್ನಧಾತ ರೈತನ ಕೈ ಕೆಸರಾದರೆ.. ಮೊಸರಾಗವುದು ಸರ್ವಜೀವರಾಶಿಗಳ  ಬಾಯಿ ….!!

ಅದಕ್ಕಲ್ಲವೇ…?? ಮುದ್ದಿನ ಮಗನೆಂದು ಮೆಚ್ಚಿ..ರೈತನನ್ನು

ಅಪ್ಪಿಕೊಂಡಿಹಳು ಭೂಮಿ ತಾಯಿ…!!ರೈತ ಭೂತಾಯಿ ಸಿಂಗಾರ..

ಮಾಡಿ ಬಿತ್ತಿದರೆ ಕಾಳು..!! ನಮ್ಮ ಬದುಕಾಗುವುದು..

ಬಂಗಾರದ ಬಾಳು !! ಒಡ್ಡು ಗಟ್ಟಿ ಇದ್ದರೆ ಹೊಲ….!

ಅನ್ನ,ರೊಟ್ಟಿ ಇದ್ದರೆ ಮೈಯಲ್ಲಿ ಬಲ…!ನೇಗಿಲಯೋಗಿಯು ರಕ್ಷಿಸುತ್ತಿರುವ ದಿನವಿಡೀ..

ಈ ಭೂಮಿಫಲ ಮತ್ತು ಜೀವಜಲ !! “ಹಸಿರೇ ಉಸಿರು”

“ಉಸಿರು ನಿಲ್ಲಲು ಬೇಕು ಹಸಿರು” …! ಉಸಿರಿದ್ದರೆ ಹೇಳುವಿ ನೀ ನಿನ್ನ ಹೆಸರು ..!!

ಭುವಿಯೆಲ್ಲ ಹಸುರಿನಸಿರಿ ಮಾಡಿ ಉಸಿರು.. ನಿಲ್ಲುವಂತೆ ಮಾಡುವವರು ನಮ್ಮ ರೈತರು..!!

ರೈತರನ್ನು ತೃಣವಾಗಿ ಕಾಣದಿರಿ.. ಕಂಡರೆ ಜೀವರಾಶಿಗಳಿಗೆಲ್ಲಾ..!!

ಹಸಿವೆಯಿಂದ ಕೆಂಗೆಟ್ಟು… ವಲಸೆಯ ಅಲೆದಾಟ.. ಹಾಹಾಕಾರದ ಗೋಳು ಜೀವಮಾನವೆಲ್ಲ..!!

ನಮ್ಮ ರೈತರನಿಂದಲೇ ನೋಡಲು.. ಚೆಂದ ಈ ವಸುಂಧರೆಯ ಐಸಿರಿ !!

ಸದಾ ಸುಖ ಸಂತೋಷದಿಂದಿರಲು. ! ಕಾಲಕಾಲಕ್ಕೆ ಮಳೆ ಸರಿಯಾಗಿ ಬರಲು..

ಇಳೆಯಲ್ಲಿ ಬೆಳೆ ಬೆಳೆಯಲು !! ಎಷ್ಟು ಸಾವಿರ ವಿದ್ಯೆಗಳನ್ನು ಕಲಿತರೂ,…???

ಆಕಾಶದಲ್ಲಿ ಹಕ್ಕಿಯಂತೆ ಹಾರಿದರೂ……??? ನೂರು ಸಂಶೋಧನೆ ಮಾಡಿದರೂ…..???

ಒಂದು ಕಾಳನ್ನು ಸೃಷ್ಟಿಸಲು ಸಾಧ್ಯವಿಲ್ಲ,..? ತಿನ್ನುವುದು ಮಾತ್ರ ನೇಗಿಲಯೋಗಿ

ಬೆವರು ಸುರಿಸಿ ಬೆಳೆದ ಅನ್ನವನ್ನು ……!! ಯಾವುದೇಉದ್ಯೋಗದಿಂದ

ಹಣವನ್ನುಸಂಪಾದಿಸಿ,ಲಕ್ಷಾಧಿಪತಿ..ಕೊಟ್ಯಾಧಿಪತಿ,ಎಂದುಅನ್ನಿಸಿಕೊಂಡರುಕೂಡಾ …!!

ಹೊಟ್ಟೆತುಂಬಿಸಿವುದು. ಜೀವದ ಉಸಿರು ನಿಲ್ಲಿಸುವುದು ರೈತನು ನೋಡಾ….!!

ಜೀವದ ಜೀವ..ಆನಂದದಿಂದ.. ಚಲನವಲನವಾಗುವುದು ಅನ್ನದಿಂದ, …..!

ಈ ಅನ್ನಧಾತರಾದ ರೈತರಿಂದ, ….!! ಈ ಕೋಟಿ,ಕೋಟಿ ಗಳಿಸಿದ ಕಾಗದದ ಹಣದಿಂದಲ್ಲ ,….??

ಒಕ್ಕಲುತನ ಮಾಡಿ ಕೋಟಿಕೋಟಿ, ಜೀವಿಗಳ ಜೀವಧಾತನಾದ ರೈತನೆಂದರೆ ….?

ಒಕ್ರದೃಷ್ಟಿ,ತಾಚಾರದ ವಿಚಾರ ಮಾಡಬೇಡರಿ…! ನೌಕರಿ, ವಿದ್ಯಾವಂತ, ಅಧಿಕಾರಿ…!!

ಬೇರೆಲ್ಲಾ .. ಕ್ಷೇತ್ರಗಳ ಶೋಕಿ ಜೀವನ ಹೆಚ್ಚಾಗಿ, .! ಕೃಷಿ ಕುಟುಂಬಗಳು ನುಚ್ಚು ನೂರಾಗಿ……!

ಪಟ್ಟಣದತ್ತ ವಲಸೆ ಸಾಗಿ,…!! ರೈತನ ಜೀವನ ವಲಸೆಯ

ಯಾತನೆಯ ಪಾಡಾಗಿದೆ,….!! ಕೋಟಿ,ಕೋಟಿ,ಜನರಿಗೆ ಮೇಟಿ ಹಿಡಿದು

ಅನ್ನಹಾಕಿ ಸಲಹುತ್ತಿದ್ದ ರೈತರು,….!! ತುತ್ತು ಅನ್ನಕ್ಕಾಗಿ ಪಟ್ಟಣ ಸೇರಿ …

ಮತ್ತೊಬ್ಬರ ಮುಂದೆ ಕೈಚಾಚುವಂತಾಗಿದೆ..!! ಕಾರಣ….??

ನಿಮಗೆಗೊತ್ತಿದೆಯಲ್ಲವೇ …? ಅದಕ್ಕಾಗಿ  ಹಿರಿಯರು ಹೇಳಿದ್ದು ಈ ಮಾತನ್ನು…ಅಲ್ಲವೇ..??

“ಕೋಟಿವಿದ್ಯೆಗಿಂತ……

ಮೇಟಿ ವಿದ್ಯೆಯೇ ಮೇಲು” …!!

✍️ ಹನುಮಂತಪ್ಪ..ಕಿಡದೂರು @ ನಾರಿನಾಳ..

Leave a Reply

Your email address will not be published. Required fields are marked *