75ನೇ ಸ್ವಾತಂತ್ರ್ಯ ದಿನದ ಅಂಗವಾಗಿ ರಾಷ್ಟ್ರ ಧ್ವಜ ಹಿಡಿದುಕೊಂಡು 10 ಕಿಮೀ ಓಡಿದ ಮೋಹನ್ ಕುಮಾರ್ ದಾನಪ್ಪ….
ಬೆಂಗಳೂರು: ಆಗಸ್ಟ್ 15 ರಂದು, ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯ ಮತ್ತು ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕರ್ನಾಟಕ ಹೈ ಕೋರ್ಟಿನ ಕೇಂದ್ರ ಸರ್ಕಾರಿ ವಕೀಲರು ಹಾಗೂ ಹವ್ಯಾಸಿ ಮ್ಯಾರಥಾನರ್ ಮೋಹನ್ ಕುಮಾರ್ ದಾನಪ್ಪನವರು ರಾಷ್ಟ್ರ ಧ್ವಜ ಹಿಡಿದುಕೊಂಡು 10 ಕಿಲೋ ಮೀಟರ್ ರನ್ ಮಾಡಿದರು, ನಂತರ ಮಾತನಾಡಿದ ಮೋಹನ್ ಕುಮಾರ್ ದಾನಪ್ಪನವರು ” ಇಂದು ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದು ಅಮೃತ ಮಹೋತ್ಸವವನ್ನ ಆಚರಿಸುತ್ತಿರುವ ಸಂಧರ್ಭದಲ್ಲಿ ಸಂತೋಷದ ಜೊತೆ ಖೇದಕರವಾಗಿರುತ್ತದೆ ಕಾರಣ ಪ್ರಪಂಚದಲ್ಲಿ ಕರೋನ ಮಹಾಮಾರಿಯ ಹಾವಳಿಯಿಂದ ಸಂಭ್ರಮದಿಂದ ಆಚರಿಸಬೇಕಾದ ಅಮೃತ ಮಹೋತ್ಸವವನ್ನ ಸರಳವಾಗಿ ಆಚರಿಸುತ್ತಿರುವುದು ನಮ್ಮ ದೌರ್ಭಾಗ್ಯವಾಗಿದ್ದು, ಇಂದಿನ 5ಜಿ ಇಂಟರ್ನೆಟ್ ಯುಗದಲ್ಲಿ ಮನುಷ್ಯ ಒತ್ತಡದ ಜೀವನದಲ್ಲಿ ಸಿಲುಕಿದ್ದು ಸಮಯದ ಅಭಾವದಿಂದ ಹಾಗೂ ಸೋಮಾರಿತನದಿಂದ ಆರೋಗ್ಯದ ಹಿತಾ ಮತ್ತು ರಕ್ಷಣೆ ಮಾಡಿಕೊಳ್ಳುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದು ಇತರೆ ಅನೇಕ ರೋಗಗಳಿಗೆ ಮತ್ತು ಮಹಾಮಾರಿ ಕರೋನಾದಂತ ರೋಗಕ್ಕೆ ತುತ್ತಾಗುತ್ತಿರುವುದು ಬೇಸರದ ಸಂಗತಿಯಾಗಿದೆ, ಆದ್ದರಿಂದ ಆರೋಗ್ಯದ ಬಗ್ಗೆ ಒಂದು ಸಣ್ಣ ಜಾಗೃತೆ ಮೂಡಿಸಲು ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರಧ್ವಜವನ್ನ ಹಿಡಿದುಕೊಂಡು 10 ಕಿಲೋ ಮೀಟರ್ ಓಟವನ್ನ 55 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದು ತುಂಬಾ ಖುಷಿಯಾಗಿದೆ, ಮುಂದಿನ ವಿಶೇಷ ದಿನಗಳಲ್ಲಿ ಆರೋಗ್ಯದ ಜಾಗ್ರತೆ ಮೂಡಿಸಲು 21 ಕಿಲೋ ಮೀಟರ್ ಓಟವನ್ನ ಪ್ರಮುಖ ರಸ್ತೆಗಳಲ್ಲಿ ಓಡುವದಾಗಿ” ತಿಳಿಸಿದರು.
ವರದಿ – ಮಹೇಶ ಶರ್ಮಾ