ಪಲಾನುಭವಿಗಳ ಹತ್ರ ದುಡ್ಡು ಪಡಿಬಾರದು-ಶಾಸಕ ಎನ್.ವೈ.ಜಿ ತಾಕೀತು-

Spread the love

ಪಲಾನುಭವಿಗಳ ಹತ್ರ ದುಡ್ಡು ಪಡಿಬಾರದುಶಾಸಕ ಎನ್.ವೈ.ಜಿ ತಾಕೀತು

ವಿಜಯನಗರ ಜಿಲ್ಲೆ ಕೂಡ್ಲಿಗಿ,ಸರ್ಕಾರದಿಂದ ಅರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆ ಯಾಗಿದ್ದು.ಪಲಾನುಭವಿಗಳಿಂದ ಮನೆಯೊಂದಕ್ಕೆ ಇಂತಿಷ್ಟು ಹಣ ನೀಡಬೇಕೆಂದು,ಕೆಲ ಪಪಂ ಸದಸ್ಯರು ಕೆಲ ಫಲಾನುಭವಿಗಳಲ್ಲಿ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪವನ್ನು. ವಾಲ್ಮೀಕಿ ಯುವ ಮುಖಂಡ ಹುಲಿಕುಂಟೆಪ್ಪ ಶಾಸಕರೆದುರು ದೂರಿದರು,ಅವರು ಆಗಷ್ಟ್ 15ರಂದು ಪ್ರವಾಸಿಮಂದಿರದಲ್ಲಿ ಶಾಸಕರು ಪತ್ರಕರ್ತರೊಂದಿಗೆ ಇದ್ದಾಗ ಶಾಸಕರಾದ ಎನ್.ವೈ.ಗೋಪಾಲಕೃಷ್ಣ ರಲ್ಲಿ ಹುಲಿಕುಂಟೆಪ್ಪ ದೂರಿದರು. ಹುಲಿಕುಂಟೆಪ್ಪ ಮೊದಲು ಕೆಲ ಸದಸ್ಯರು ಎಂದು ಉಚ್ಚರಿದ್ದರು ನಂತರ ಎಲ್ಲ ಸದಸ್ಯರು ಎಂದು ಆರೋಪಸಿದರು, ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪಪಂ ಸದಸ್ಯರು ಆರೋಪವನ್ನು ಖಂಡಾ ತುಂಡವಾಗಿ ಖಂಡಿಸಿದರು.ಇದು ನಿರಾಧಾರ ಆರೋಪವಾಗಿದ್ದು ಸಾಬೀತಾದರೆ ತಾವು ರಾಜೀನಾಮೆಗೂ ಸಿದ್ಧ ಎಂದು ಸದಸ್ಯರು ಗುಡುಗಿದರು.ಮಧ್ಯ ಪ್ರವೇಶಿಸಿದ ಶಾಸಕರು  ವಾತಾವರಣ ತಿಳಿಗೊಳಿಸಿದರು, ಪಪಂ ಸದಸ್ಯರ ಮೇಲೆನ ಆರೋಪ ನಿರಾಧಾರವಾಗಿದ್ದು ಸೂಕ್ತ ಸಾಕ್ಷ್ಯಾಧಾರ ಇಲ್ಲದೇ ಇನ್ನೊಮ್ಮೆ ಆರೋಪಿಸಬಾರದು ಎಂದು ಹುಲಿಕುಂಟೆಪ್ಪಗೆ ಶಾಸಕರು ಎಚ್ಚರಿಸಿದರು. ಸಾರ್ವಜನಿಕ ಕ್ಷೇತ್ರದಲ್ಲಿರುವ ಜನಪ್ರತಿನಿಧಿಗಳ ಮೇಲೆ ಸಾಕ್ಷ್ಯಾಧಾರವಿಲ್ಲದೇ ಆರೋಪಿಸುವ ಮೂಲಕ,ಅವರಲ್ಲಿ ಗೂಬೆ ಕೂಡಿಸುವ ಪ್ರಯತ್ನ ಯಾರು ಮಾಡಬಾರದು ಎಂದು ಶಾಸಕರು  ಸೂಚಿಸಿದರು.ಯಾವುದೇ ಕಾರಣಕ್ಕೆ ಫಲಾನುಭವಿಗಳಿಂದ ಹಣ ವಸೂಲಿ ನಾನು ಎಂದಿಗೂ ಸಹಿಸುವುದಿಲ್ಲ, ದೂರಿನೊಂದಿಗೆ ಸೂಕ್ತ ಸಾಕ್ಷ್ಯಾಧಾರ ಆಗತ್ಯ ಎಂದರು.ಈ ಸಂದರ್ಭದಲ್ಲಿ ಕೆಲ ಪಪಂ ಸದಸ್ಯರು ಹಾಗೂ ಕೆಲ ಜನಪ್ರತಿನಿಧಿಗಳಿದ್ದರು. ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.

Leave a Reply

Your email address will not be published. Required fields are marked *