ಎಮ್.ಬಿ.ಅಯ್ಯನಹಳ್ಳಿ:ಹಸುವಿನ ಮೇಲೆ ಚಿರತೆ ದಾಳಿ,ಪ್ರಾಣದ ಹಂಗು ತೊರೆದು ಹಸು ಕಾಪಾಡಿದ ಮಾಲಿಕ-…..
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಎಂ.ಬಿ.ಅಯ್ಯನಹಳ್ಳಿಯ ಹೃದಯ ಭಾಗದಲ್ಲಿರುವ,ವೃಷಭೇಂದ್ರಾಚಾರಿಯವರ ಕಣದಲ್ಲಿ ಕಟ್ಟಿದ್ದ ಅವರ ಹಸುವಿನ ಮೇಲೆ.ಅಗಸ್ಟ್15ರಂದು ತಡರಾತ್ರಿ ಚಿರತೆ ಮಾರಣಾಂತಿಕ ದಾಳಿ ಮಾಡಿದ್ದು.ಹಸುವಿನ ಚೀರಾಟ ಕೇಳಿದ ಕೂಡಲೇ ವೃಷಭೇಂದ್ರಾಚಾರಿಯವರ ಸಂಬಂಧಿ ಮಾನಾಚಾರಿ,ಕೂಡಲೇ ಉದ್ದನೆಯ ಕೋಲೊಂದನ್ನ ಕೈಯಲ್ಲಿಡಿದು ಬೆಧರಿಸುವ ಮೂಲಕ ಚಿರತೆಯನ್ನ ಹಿಮ್ಮೆಟ್ಟಸಿದ್ದಾರೆ.ಈ ಮೂಲಕ ತಮ್ಮ ಪ್ರಾಣದ ಅಂಗು ತೊರೆದು, ಚಿರತೆಯನ್ನ ಓಡಿಸೋ ಮೂಲಕ ಸಂಬಂದಿಗಳ ಆಕಳು ಮತ್ತು ಆಕಳಿನ ಕರುವನ್ನು ಕಾಪಾಡಿದ್ದಾರೆ ಮಾನಪ್ಪಾಚಾರಿ.. ಚಿರತೆಗಳನ್ನು ವರ್ಗಾಹಿಸುವಂತೆ ಆಗ್ರಹ-ಭಾಗದಲ್ಲಿರುವ ತಾಲೂಕಿನ ಹಲೆವೆಡೆಗಳಲ್ಲಿ ಕೆಲ ತಿಂಗಳುಗಳಿಂದ,ನಿರಂತರವಾಗಿ ಚಿರತೆ ದಾಳಿ ಪ್ರಕರಣಗಳು ಜರುಗುತ್ತಿದ್ದು ಚಿರತೆಗಳನ್ನು ಸ್ಥಳಾಂತರಿಸುವಂತೆ ತಾಲೂಕಿನಾಧ್ಯಂತ ಆಗ್ರಹ ವ್ಯಕ್ತವಾಗಿದೆ.ಆದರೆ ಜನಪ್ರತಿನಿಧಿಗಳು ಹಾಗೂ ಸಂಬಂದಿಸಿದ ಇಲಾಖಾಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ,ಹಸುಗಳು, ಕುರಿಗಳು,ಸಾಕು ಪ್ರಾಣಿಗಳು ಚಿರತೆ ದಾಳಿಗೆ ತುತ್ತಾಗಿದ್ದು ತಾಲೂಕಿನಾಧ್ಯಂತ ವ್ಯಕ್ತವಾಗಿದೆ.ರೈತರು ಕೃಷಿ ಚಟುವಟಿಕೆಗಳಿಗಾಗಿ ಹೊಲಗಳಿಗೆ ತೆರಳುವುದು ಸಾಮನ್ಯ,ಈ ಸಂದರ್ಭದಲ್ಲಿ ಜರುಗಬಹುದಾದ ಜೀವ ಹಾನಿಗೆ ಇಲಾಖಾಧಿಕಾರಿಯೇ ನೇರಹೊಣೆ ಎಂದು ಮುಖಂಡರು ಗ್ರಾಮಗಳ ಗ್ರಾಮಸ್ಥರು ಎಚ್ಚರಿಸಿದ್ದಾರೆ.ಕಾರಣ ಅಂತಹ ಅನಾವುತ ಜರುಗುವ ಮುನ್ನವೇ ಜಿಲ್ಲಾಡಳಿತ ಶೀಘ್ರವೇ ಚಿರತೆಗಳನ್ನು ಸೆರೆಹಿಡಿದು,ಸೂಕ್ತ ಅರಣ್ಯ ಪ್ರದೇಶಕ್ಕೆ ವರ್ಗಾವಣೆ ಮಾಡಬೇಕೆಂದು ತಾಲೂಕಿನ ಬಹುತೇಕ ಗ್ರಾಮೀಣ ರೈತರು ಮತ್ತು ವಂದೇ ಮಾತರಂ ಜಾಗೃತಿ ವೇದಿಕೆ ಸೇರಿದಂತೆ ವಿವಿದ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಈ ಮೂಲಕ ಒತ್ತಾಯಿಸಿದ್ದಾರೆ. ✍️ ವಂದೇ ಮಾತರಂ..
ವರದಿ – ವಿ.ಜಿ.ವೃಷಭೇಂದ್ರ ಕೂಡ್ಲಿಗಿ