ಕೊರೋನದ 2ನೇ ಅಲೇಗೆ ವಿಶ್ವವೇ ಬಿಚ್ಚಿ ಬಿದ್ದಿದೆ, ಆದರೂ ಜನರು ಯಾವುದನ್ನು ಲೆಕ್ಕಿಸದೆ ಜೀವನ ನಡೆಸುತ್ತಿದ್ದಾರೆ. ಸರಕಾರವು ಒಂದು ಕಡೆ ದಿನೆ ದಿನೆ ಆರೋಗ್ಯದ ಕಡೆ ಗಮನ ಹರಿಸಿ ಎಂದು ಹೇಳುತ್ತೆ, ಆದರೆ ಅದೆ ಸರಕಾರ ಮತ್ತೊಂದಡೆ ಈ ಚುನವಾಣೆಗೆ ಸಂಬಂಧಿಸಿದಾಗೆ ತಮ್ಮ ಪಕ್ಷದ ಪ್ರಚಾರಕ್ಕಾಗಿ ಸಭೆ ಸಮಾರಂಭಗಳನ್ನ ಏರ್ಪಡಿಸಲಾಗುತ್ತಿದೆ. ಸಾರ್ವಜನಿಕರಲ್ಲಿ ಮುಖ್ಯವಾಗಿ ಕಾಡುವ ಪ್ರಶ್ನೆ ಈ ಸಭೆ ಸಮಾರಂಭಗಳಿಗೆ ಬರುವು ವ್ಯಕ್ತಿಗಳಿಗೆ/ ರಾಜಕಾರಣಿಗಳಿಗೆ ಕೊರೋನ ಲೆಕ್ಕಕ್ಕಿಲ್ವಾ? ಇರಲಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಅನ್ನುವ ಹಾಗೇ ನಾವುಗಳು ಯಾವುದೇ ಕಾಯಿಲೆಗಳಿಂದ ಮುನ್ನಚ್ಚರಿಕೆ ನಮಗೆ ಅವಶ್ಯವಿದೆ. ಈಗಾಗಲಿ ಕೊರೊನದ 2ನೇಯ ಅಲೆ ರಾಜ್ಯದ್ಯಾಂತ ಸುರುವಾಗಿದ್ದು, ಸದ್ಯ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಮುದೇನೂರ ಗ್ರಾಮದಲ್ಲಿ ಮತ್ತೊಂದು ಕೋರೊನ ಪ್ರಕರಣ ಕಂಡು ಬಂದಿದ್ದು, ಗ್ರಾಮ ಜನರಲ್ಲಿ ಆತಂಕ ಮನೆ ಮಾಡಿದೆ ಮಹಿಳೆಯ ಗಂಡ ಉಡುಪಿ ಯಿಂದ ಮುದೆನೂರ ಜಾತ್ರೆಗೆ ಬಂದು ಒಂದು ವಾರಗಳ ಕಾಲ ಊರಲ್ಲಿ ಉಳಿದು ತದನಂತರ ಮತ್ತೆ ಮರಳಿ ತನ್ನ ದುಡಿಮೆಗಾಗಿ ಉಡುಪಿಗೆ ಹೊಗಿದ್ದಾರೆ, ಗಂಡ ಹೋದ ಎರಡೆ ದಿನಗಳಲ್ಲಿ ಮಹಿಳೆಯು ಆರೋಗ್ಯದಲ್ಲಿ ಕುನ್ನತೆ ಹೊಂದಿದ್ದು, ಆ ಮಹಿಳೆ ಗ್ರಾಮದಲ್ಲಿರುವ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋದಾಗ ಅಲ್ಲಿನ ವೈದ್ಯರು ಆ ಮಹಿಳೆಯನ್ನು ಚಿಕಿತ್ಸೆಗೆ ಒಳಪಡಿಸಿದಾಗ ಮತ್ತು ಮಹಿಳೆಯ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಮಹಿಳೆಗೆ ಕೋರೊನ ಪಾಸಿಟಿವ್ ಬಂದಿರುವದು ಗೊತ್ತಾಗಿದೆ, ಹಾಗಾಗಿ ಮಹಿಳೆಯನ್ನು ಹೋಂ ಕ್ವಾರಂಟನ್ ಮಾಡಲಾಗಿದೆ ಎಂದು ಮುದೆನೂರಿನ ವೈದ್ಯಾದಿಕಾರಿಗಳಾದ ಡಾ// ನಿಲಪ್ಪ ನಮ್ಮ ಪತ್ರಿಕೆಗೆ ಪ್ರತಿಕ್ರಿಯಿಸಿ. ಮಹಿಳೆಯ ಗಂಡ ಉಡುಪಿ ಯಿಂದ ಬಂದಿರುವುದರಿಂದ ಗಂಡನಿಂದ ಹೆಂಡತಿಗೆ ಸೊಂಕು ಹರಡಿರಬಹುದು, ಸದ್ಯ ಮಹಿಳೆಯನ್ನು ಹೋಂ ಕ್ವಾರಂಟನ್ ಲ್ಲಿ ಇರಿಸಿದ್ದೆವೆ ಎಂದು ತಿಳಿಸಿದರು. ಮಹಿಳೆಯ ಗಂಡ ಜಾತ್ರೆ ಗೆ ಬಂದಿದ್ದರಿಂದ ಜಾತ್ರೆಗೆ ಬಂದು ಹೋಗಿರುವ ಜನರಲ್ಲಿ ಆತಂಕ ಮನೆ ಮಾಡಿದೆ.
ವರದಿ :-ಅಮಾಜಪ್ಪ ಹೆಚ್ ಜುಮಾಲಪೂರ