“ಅನ್ನದಾತರ ಬಾಳು ಹಸನಾಗಲು ಸಮಗ್ರ ಕೃಷಿ ಅಭಿಯಾನ ಸಹಕಾರಿ”…..
ಇಂದು ನಿಪ್ಪಾಣಿಯಲ್ಲಿ, ಕೃಷಿ ಇಲಾಖೆ ವತಿಯಿಂದ ಸಮಗ್ರ ಕೃಷಿ ಅಭಿಯಾನ ಹಾಗೂ ‘ನನ್ನ ಬೆಳೆ ನನ್ನ ಹಕ್ಕು’ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಗೆ ಮುಜರಾಯಿ, ಹಜ ಮತ್ತು ವಕ್ಫ್ ಇಲಾಖೆಯ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಚಾಲನೆ ನೀಡಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಸಮಗ್ರ ಕೃಷಿ ಅಭಿಯಾನದ ವಾಹನವು, ಗ್ರಾಮ-ಗ್ರಾಮಗಳಲ್ಲಿ ರೈತರ ಮನೆ ಬಾಗಿಲಿಗೆ ತೆರಳಿ ಕೃಷಿ ಇಲಾಖೆಯ ಯೋಜನೆಗಳ ಬಗ್ಗೆ ಅರಿವು ಮೂಡಿಸುತ್ತದೆ. ಗೊಬ್ಬರ, ಬೀಜಗಳ, ಕ್ರಿಮಿನಾಶಕಗಳ, ಕೃಷಿ ಯಂತ್ರೋಪಕರಣಗಳ ಹಾಗೂ ರೈತರ ಜಮೀನುಗಳ ವಿಮೆಯ ಬಗ್ಗೆ ಮಾಹಿತಿ ಒದಗಿಸುತ್ತದೆ. ಈ ಸಮಗ್ರ ಕೃಷಿ ಅಭಿಯಾನ ಮೊಬೈಲ್ ಆ್ಯಪ್ ನಲ್ಲಿಯೂ ಲಭ್ಯವಿದ್ದು, ಇದರಲ್ಲಿ ರೈತರಿಗೆ ಕೃಷಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಸುಲಭವಾಗಿ ಸಿಗುತ್ತವೆ. ಇದೊಂದು ವಿನೂತನ ಹಾಗೂ ಉತ್ತಮ ಕಾರ್ಯವಾಗಿದ್ದು, ಬಿಜೆಪಿ ಸರ್ಕಾರದ ಯೋಜನೆಗಳು ರೈತರ ಬಳಿ ತಲುಪಿ ಅವರ ಕೃಷಿಕಾರ್ಯ ಸಮೃದ್ಧಿಯಾಗಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಹಾಯಕ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀ ಮಂಜುನಾಥ ಜನಮಟ್ಟಿ, ಉಪನಿರ್ದೇಶಕರಾದ ಶ್ರೀ ಜೆ.ಎಲ್. ರೂಡಗಿ, ಸಹಾಯಕ ಕೃಷಿ ಅಧಿಕಾರಿ ಶ್ರೀ ಪುರುಷೋತ್ತಮ ಪಿರಾಜೆ, ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.
ವರದಿ – ಮಹೇಶ ಶರ್ಮಾ