ಹಳ್ಳಿ ಮಕ್ಕಳಿಗೆ ಆರಕ್ಷಕನ ಅಕ್ಷರ ಸೇವೆ; ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಗ್ರಾಮೀಣ ಅಭ್ಯರ್ಥಿಗಳಿಗಾಗಿ ಗ್ರಂಥಾಲಯ…..
ಕರೊನಾ ಸೃಷ್ಟಿಸಿದ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಯಾಗಲು ಪರದಾಡುತ್ತಿರುವ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗಾಗಿ ಪೊಲೀಸರೊಬ್ಬರು ಗ್ರಂಥಾಲಯ ತೆರೆದು ಅಕ್ಷರ ಪ್ರೇಮ ಮೆರೆದಿದ್ದಾರೆ. ಹುಬ್ಬಳ್ಳಿಯ ಸಿಇಎನ್ ಅಪರಾಧ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿರುವ ಶಿವಾನಂದ ಹನುಮಂತ ತಿಮ್ಮಾಪುರ, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿರಸಂಗಿಯಲ್ಲಿ ಗ್ರಾಮೀಣ ಮಕ್ಕಳಿಗಾಗಿ ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನ ಕೇಂದ್ರ ಆರಂಭಿಸಿದ್ದಾರೆ. 2020ರ ಸೆಪ್ಟೆಂಬರ್ನಲ್ಲಿ ಕಾರ್ಯಾರಂಭ ಮಾಡಿರುವ ‘ಕನಸು’ ಹೆಸರಿನ ಈ ಅಧ್ಯಯನ ಕೇಂದ್ರ, ಮಕ್ಕಳ ಪಾಲಿಗೆ ‘ಜ್ಞಾನ ದೇಗುಲ’ವಾಗಿ ಮಾರ್ಪಟ್ಟಿದೆ. ಹಲವು ವಿದ್ಯಾರ್ಥಿಗಳು ನಿತ್ಯವೂ ಇಲ್ಲಿಗೆ ಬಂದು ಅಧ್ಯಯನ ಕೈಗೊಳ್ಳುತ್ತಿದ್ದಾರೆ. ಗ್ರಾಮದ ಹೆಣ್ಣು ಮಕ್ಕಳಿಗೆ ಅಧ್ಯಯನಕ್ಕೆ ಅನುಕೂಲ ಕಲ್ಪಿಸಲು ಅವರ ಮನೆಗೇ ಪುಸ್ತಕ ನೀಡಲಾಗುತ್ತಿದೆ. ಶಿಕ್ಷಕನಾಗುವ ಕನಸು ಕಂಡಿದ್ದೆ. ನಾನು ಶಿಕ್ಷಕನಾಗುವ ಕನಸು ಕಂಡವನು. ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯಲು ಧಾರವಾಡದಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ್ದೆ. ಪಾರ್ಟ್ ಟೈಂ ಕೆಲಸ ಮಾಡುತ್ತಲೇ ಡಿ.ಇಡಿ, ಬಿಎ ವ್ಯಾಸಂಗ ಪೂರ್ಣಗೊಳಿಸಿದ್ದೆ. ಆದರೆ, ಪೊಲೀಸ್ ಇಲಾಖೆ ಸೇರಿದೆ. ನನ್ನಂತೆ ಗ್ರಾಮೀಣ ಭಾಗದ ಮಕ್ಕಳು ಸಹ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಪರದಾಡಬಾರದು. ಅವರು ಆರ್ಥಿಕ ಸಂಕಷ್ಟದಿಂದ ಅಧ್ಯಯನದಿಂದ ವಂಚಿತವಾಗಬಾರದು ಎನ್ನುವ ಕಾರಣಕ್ಕೆ 2.5 ಲಕ್ಷ ರೂ. ವೆಚ್ಚ ಮಾಡಿ ಈ ಕೇಂದ್ರ ತೆರೆದಿದ್ದೇನೆ. ಗುರುಗಳಾದ ಎಂ.ಬಿ. ಮೆಳವಂಕಿ, ಸಾಹಿತಿ ಸೋಮು ರೆಡ್ಡಿ ಮಾರ್ಗದರ್ಶನಲ್ಲಿ ಕೇಂದ್ರ ಮುನ್ನಡೆಯುತ್ತಿದ್ದು, ಪೊಲೀಸ್ ಕರ್ತವ್ಯದೊಂದಿಗೆ ಈ ಶೈಕ್ಷಣಿಕ ಸೇವೆಯನ್ನೂ ಕೊಟ್ಟ ಸಂತೃಪ್ತಿ ಸಿಕ್ಕಿದೆ. ಎಲ್ಲ ಸೇವೆಗಳೂ ಉಚಿತವಾಗಿದ್ದು, ಪುಸ್ತಕಗಳನ್ನು ದೇಣಿಗೆಯಾಗಿ ನೀಡಬಯಸುವವರು ಮೊ.ಸಂ. 7353798413 ಸಂಪರ್ಕಿಸಬಹುದು ಎನ್ನುತ್ತಾರೆ ಶಿವಾನಂದ ತಿಮ್ಮಾಪುರ. ಸಾವಿರಕ್ಕೂ ಅಧಿಕ ಪುಸ್ತಕ ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನ ಒದಗಿಸುವ ನಿಟ್ಟಿನಲ್ಲಿ ಬಾಡಿಗೆ ಕಟ್ಟಡದಲ್ಲಿ ಅಧ್ಯಯನ ಕೇಂದ್ರ ಆರಂಭಿಸಿದ್ದಾರೆ. ಅದರ ಬಾಡಿಗೆ, ನಿರ್ವಹಣೆ ವೆಚ್ಚವನ್ನೂ ಭರಿಸುತ್ತಿರುವ ಶಿವಾನಂದ, ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಪೂರಕವಾಗಿರುವ 1 ಸಾವಿರಕ್ಕೂ ಅಧಿಕ ಪುಸ್ತಕ ಒದಗಿಸಿದ್ದಾರೆ. ಆರಕ್ಷಕರೊಬ್ಬರ ಈ ಸೇವೆಯನ್ನು ಮೆಚ್ಚಿ ರಾಜ್ಯದ ವಿವಿಧೆ ಡೆಯಿಂದ ಹಲವು ದಾನಿಗಳೂ ಕೇಂದ್ರಕ್ಕೆ ಅಗತ್ಯ ಪುಸ್ತಕಗಳನ್ನು ನೀಡಿದ್ದಾರೆ. ಪ್ರಚಲಿತ ವಿದ್ಯಮಾನಗಳ ಅರಿವೂ ಮಕ್ಕಳಿಗೆ ಇರಲಿ ಎಂಬ ಕಾರಣಕ್ಕೆ ಅನೇಕ ದಿನಪತ್ರಿಕೆ ತರಿಸುತ್ತಾರೆ. ಜ್ಞಾನ ಹೆಚ್ಚಳಕ್ಕೆ ಸಹಕಾರಿ ಕರೊನಾ ಸಂಕಷ್ಟ ಕಾಲದಲ್ಲಿ ಹೆತ್ತವರು ಕುಟುಂಬ ನಿರ್ವಹಣೆಗೆ ಕಷ್ಟಪಡುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವಿರುವಾಗ ಪೊಲೀಸ್ ಸಿಬ್ಬಂದಿ ಶಿವಾನಂದ ತಿಮ್ಮಾಪುರ ಅವರು ‘ಕನಸು’ ಅಧ್ಯಯನ ಕೇಂದ್ರ ಆರಂಭಿಸಿ ನಮ್ಮ ಜ್ಞಾನ ಹೆಚ್ಚಳಕ್ಕೆ ನೆರವಾಗಿದ್ದಾರೆ. ಇಲ್ಲಿ ನಿತ್ಯವೂ 6ರಿಂದ 8 ಗಂಟೆಗಳ ಕಾಲ ಅಭ್ಯಸಿಸಿ, ಬ್ಯಾಂಕಿಂಗ್ ಸೇರಿ ವಿವಿಧ ಇಲಾಖೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುತ್ತಿದ್ದೇವೆ. ಭವಿಷ್ಯದಲ್ಲಿ ನಾವೂ ಗ್ರಾಮೀಣ ಬಡ ಮಕ್ಕಳ ಕಲಿಕೆಗೆ ನೆರವಾಗುತ್ತೇವೆ ಎನ್ನುತ್ತಾರೆ ವಿದ್ಯಾರ್ಥಿಗಳಾದ ಹನುಮಂತ ಪೋತರಾಜ, ಗದಿಗೆಪ್ಪ ಖನಗಾವಿ, ನೀಲಪ್ಪ ಮೇಟಿ, ನವೀನ ನಾಯ್ಕರ ಮುಂತಾದವರು. ನನ್ನ ತಾಯಿಯ ಊರು ಶಿರಸಂಗಿ. ನಾನು ಶಿಕ್ಷಣ ಪಡೆದಿದ್ದು, ಬೆಳೆದಿದ್ದು ಇಲ್ಲಿಯೇ. ಈ ಊರಿನ ಋಣ ತೀರಿಸಲು ಅಳಿಲು ಸೇವೆ ಮಾಡುತ್ತಿದ್ದೇನೆ. ಈ ಕೇಂದ್ರದಲ್ಲಿ ಅಧ್ಯಯನ ಕೈಗೊಳ್ಳುತ್ತಿರುವ ವಿದ್ಯಾರ್ಥಿಗಳು ಮುಂಬರುವ ದಿನಗಳಲ್ಲಿ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆ ಅಲಂಕರಿಸುತ್ತಾರೆ ಎನ್ನುವ ವಿಶ್ವಾಸವಿದೆ. ಶಿವಾನಂದ ತಿಮ್ಮಾಪುರ ಪೊಲೀಸ್ ಸಿಬ್ಬಂದಿ ಆಟ ಆಡ್ತ ಆಡ್ತ ಸತ್ತು ಹೋದ ಬಾಲಕಿ: ಶಾಲೆ ತೆರೆದಿಲ್ಲ, ಮಕ್ಕಳು ಮನೇಲೇ ಇದ್ದಾರೆ ಅಂತಾದರೆ ಯಾವುದಕ್ಕೂ ಹುಷಾರಾಗಿರಿ..!ಒಂದು ವರ್ಷದ ಆ ಮಗುವನ್ನು ಒಂದು ದಿನ ಭೇಟಿ ಮಾಡುವೆ ಅಂದ್ರು ನಟಿ ರಶ್ಮಿಕಾ; ಅದಕ್ಕೆ ಕಾರಣ ಕೂಡ ‘ರಶ್ಮಿಕಾ’ನೇ..
ವರದಿ – ಅಮಾಜಪ್ಪ ಹೆಚ್ ಜುಮಾಲಾಪೂರ