‘ಜೈವಿಕ ಇಂಧನ ಭವಿಷ್ಯದ ಇಂಧನವಾಗಲಿ’…
ನಿಪ್ಪಾಣಿ ಮತಕ್ಷೇತ್ರದ ಯರನಾಳ ಗ್ರಾಮದಲ್ಲಿ, ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆಯ ಅಂಗವಾಗಿ, ಸಸಿ ನೆಡುವ ಕಾರ್ಯಕ್ರಮಕ್ಕೆ ಮುಜರಾಯಿ, ಹಜ ಮತ್ತು ವಕ್ಫ್ ಇಲಾಖೆಯ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ ಯವರು ಚಾಲನೆ ನೀಡಿದರು. ಜೈವಿಕ ಇಂಧನ ರಾಷ್ಟ್ರದ ಇಂಧನ ಸಮಸ್ಯೆ ಬಗೆಹರಿಸಬಲ್ಲ ಏಕೈಕ ಆಶಾಕಿರಣವಾಗಿದೆ. ಹೀಗಾಗಿ ಪರಿಸರ ಕಾಪಾಡುವ ಮಹತ್ವದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪ್ರಸ್ತುತ ನಿಪ್ಪಾಣಿ ಯಿಂದ ಯರನಾಳ ರಸ್ತೆಯು 2 ಬದಿಗಳಲ್ಲಿ ಸುಮಾರು 1,000 ಸಸಿಗಳನ್ನು ನೆಡಲಾಗಿದ್ದು, ಒಟ್ಟು 5,000 ಸಸಿಗಳನ್ನು ನೆಡುವ ಗುರಿ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು,ಸ್ಥಳೀಯ ಮುಖಂಡರು,ಹಾಗೂ ಜನಪ್ರತಿನಿಧಿಗಳು, ಪಾಲ್ಗೊಂಡಿದ್ದರು..
ವರದಿ – ಮಹೇಶ ಶರ್ಮಾ