ರೈತ ಸಂಘಗಳ ಮುಂಖಡರೊಂದಿಗೆ ಸಭೆ ರೈತರ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ಬದ್ಧ : ಡಿಸಿ ಡಾ.ರಾಗಪ್ರಿಯಾ ಆರ್…..
ಯಾದಗಿರಿ ಜಿಲ್ಲೆಯ ರೈತರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್ ಅವರು ಭರವಸೆ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ರೈತ ಸಂಘಗಳ ಜಿಲ್ಲಾ ಮುಂಖಡರೊAದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿನ ರೈತರಿಗೆ ಯಾವುದೇ ರೀತಿಯ ಸಮಸ್ಯೆಗೆ ತಕ್ಷಣ ಸ್ಪಂದಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು ಮತ್ತು ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆಯನ್ನು ನಿಗಿಸಲು ಕ್ರಮ ವಹಿಸುವಂತೆ ಅವರು ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.ರೈತರಿಗೆ ನೀರಾವರಿಗೆ ಸಂಬAಧಿಸಿದAತೆ 7ಗಂಟೆಗಳ ಕಾಲ ನೀಡುತ್ತಿರುವ ವಿದ್ಯುತ್ ಸರಿಯಾಗಿ ನೀಡುತ್ತಿಲ್ಲ ಎಂದು ರೈತ ಮುಖಂಡರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ರೈತರಿಗೆ ವಿದ್ಯುತ್ ಪೂರೈಕೆ ಸಮಯ ಮತ್ತು ಇನ್ನಿತರ ಕುರಿತು ಮಾಹಿತಿ ಪಡೆದುಕೊಂಡು ನಿರಂತರವಾಗಿ ರೈತರಿಗೆ ತೊಂದರೆಯಾಗದAತೆ ವಿದ್ಯುತ್ ಪೂರೈಕೆ ಮಾಡುವಂತೆ ಜೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.ಕಳೆದ ವರ್ಷ ಜಿಲ್ಲೆಯಲ್ಲಿನ ಸಂಭವಿಸಿದ ಪ್ರವಾಹದಿಂದ ಬೆಳ ಹಾನಿಗೊಳಗಾದ ಹಲವು ರೈತರ ಪರಿಹಾರವನ್ನು ಈಗಾಗಲೇ ನೀಡಲಾಗಿದ್ದು, ಉಳಿದವರಿಗೆ ಆಯಾ ವ್ಯಾಪ್ತಿಯ ತಹಸೀಲ್ದಾರ್‌ರಿಗೆ ತಿಳಿಸಿ ಪರಿಹಾರ ದೊರಕಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.ವಡಗೇರಾ ಮತ್ತು ಸುರಪುರ ಭಾಗಗಳಲ್ಲಿ ಸರ್ವೇ ಕಾರ್ಯ ಪರಿಣಾಮಕಾರಿ ನಡೆಯುತ್ತಿಲ್ಲ ಎಂದು ರೈತ ಮುಂಖಡರೊಬ್ಬರು ದೂರಿದಾಗ ಈ ಬಗ್ಗೆ ಗಮನಹರಿಸಿ ಸರ್ವೇ ಕಾರ್ಯವನ್ನು ಪರಿಣಾಮಕಾರಿಯಾಗಿಸುವ ಭರವಸೆ ನೀಡಿದರು.ಮುಂಗಾರು ಬೆಳೆಗಳಿಗೆ ರಸಗೊಬ್ಬರಗಳ ಕೊರತೆಯಾಗುತ್ತಿರುವ ಪ್ರಶ್ನೆ ಎತ್ತಿದ ಕುರಿತು ಉತ್ತರಿಸಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ಕೃಷಿ ಇಲಾಖೆ ಆಯುಕ್ತರೊಂದಿಗೆ ಮಾತನಾಡಿದ್ದು, ಶೀಘ್ರವೇ ಪರಿಹರಿಸಲಾಗುವುದು ಎಂದರು.ಡಿ.ಎ.ಪಿ ಮತ್ತು ಯೂರಿಯಾ ಬದಲಾಗಿ ಬೇರೆ ರಸಗೊಬ್ಬರವನ್ನು ಬಳಸಲು ಸಮುದಾಯ ಬಾನುಲಿ ಕೇಂದ್ರ ಮತ್ತು ಇನ್ನಿತರ ಕಾರ್ಯಕ್ರಮವನ್ನು ಆಯೋಜಿಸಿ ರೈತರಲ್ಲಿ ಅರಿವು ಮೂಡಿಸುವಂತೆ ಅವರು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸಲಹೆ ನೀಡಿದರು.ಜಿಲ್ಲೆಯಲ್ಲಿ ಪರವಾನಿಗೆ ಇಲ್ಲದೇ ರಸಗೊಬ್ಬರ ಮಾರಾಟ ಮಾಡುತ್ತಿರುವ ಮತ್ತು ಬೇರೆ ಜಿಲ್ಲೆಗಳಿಗೆ ರಸಗೊಬ್ಬರ ಮಾರುತ್ತಿರುವ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.ಮತ್ತು ಜಿಲ್ಲೆಗೆ ನಿಗಧಿಯಾಗಿರುವ ಗೊಬ್ಬರವನ್ನು ಬೇರೆ ಜಿಲ್ಲೆಗೆ ಮಾರಾಟ ಮಾಡುವದರಿಂದ ಜಿಲ್ಲೆ ರೈತರಿಗೆ ಅಭಾವ ಉಂಟಾಗುತ್ತಿದೆ ಎಂದರು. ರೈತರಿಗೆ ಕೃಷಿ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡುತ್ತಿಲ್ಲ ಮತ್ತು ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ, ರೈತ ಸಂಪರ್ಕ ಕೇಂದ್ರಗಳಲ್ಲಿ ದರಪಟ್ಟಿ ಹಾಗೂ ಸಂಗ್ರಹಗಳ ಕುರಿತು ನಾಮಫಲಕ ಹಾಕಿರುವುದಿಲ್ಲ ಎಂದು ರೈತರೊಬ್ಬರು ಆರೋಪಿಸಿದಾಗ,ಮಧ್ಯೆ ಪ್ರವೇಶಿಸಿದ ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಮತ್ತು ಇನ್ನಿತರ ರಸಗೊಬ್ಬರ ಮಾರಾಟ ಅಂಗಡಿಗಳಲ್ಲಿ ನಾಮಫಲಕ ಕಡ್ಡಾಯಗೊಳಿಸುವಂತೆ ಅವರು ಸಂಬAಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಜಿಲ್ಲೆಯಲ್ಲಿ ಹೆಸರುಕಾಳು ಖರೀದಿ ಕೇಂದ್ರ, ಹತ್ತಿ ಖರೀದಿ ಕೇಂದ್ರಗಳ ಸ್ಥಾಪಿಸುವುದು, ಎಣ್ಣೆ ಬೀಜ ಸಹಕಾರ ಸಂಘಗಳ ನಿಷ್ಕಿçಯಗೊಂಡಿರುವ ಬಗ್ಗೆ ರೈತ ಮುಂಖಡರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.ಬ್ಯಾಂಕ್‌ಗಳಲ್ಲಿ ಮಧ್ಯವರ್ತಿಗಳ ಹಾವಳಿ ತಡೆಯುವಂತೆ ಮತ್ತು ರೈತರೊಂದಿಗೆ ಬ್ಯಾಂಕ್ ಸಿಬ್ಬಂದಿಗಳು ಸೌಜನ್ಯದಿಂದ ವರ್ತಿಸುವಂತೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್ ಅವರು ತಿಳಿಸಿದರು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಸಂಚಾಲಕ ಶಾಂತರೆಡ್ಡಿ ಬಿಜಾಸಪುರ, ಜಿಲ್ಲಾಧ್ಯಕ್ಷ ಮಹೇಶಗೌಡ ಎಮ್ ಸುಬೇದಾರ, ಜಿಲ್ಲಾ ಕಾರ್ಯಾಧ್ಯಕ್ಷ ಮಹಮ್ಮದ್ ಹನೀಫ್ ಹತ್ತಿಕುಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಶರಣಪ್ಪ ಸಾಹುಕಾರ, ದೇವಿಂದ್ರಪ್ಪ ಪೋ.ಪಾಟೀಲ್ ಸೇರಿದಂತೆ ಇನ್ನಿತರ ಸಂಘದ ಸಂಘಟನೆಯ ಮುಖಂಡರುಗಳು ಉಪಸ್ಥಿತರಿದ್ದರು.
ವರದಿ – ಮಹೇಶ ಶರ್ಮಾ