ಶಾಂತಮ್ಮ ಏಕಾಂಬ್ರಪ್ಪ ಸೇವಾ ಸಂಸ್ಥೆಯಿಂದ ಸಂಗೀತ ಪಾಠಶಾಲೆ ಪ್ರಾರಂಭ….
ಯಲಬುರ್ಗಾ ಪಟ್ಟಣದಲ್ಲಿ ಗುರು ಗಾನ ಲಹರಿ ಸಂಗೀತ ಪಾಠ ಶಾಲೆ ಪ್ರಾರಂಭ ಮಾಡುವುದು ಮತ್ತು ಶತಾಯುಷಿ ಅಜ್ಜಿಯಂದಿರು ಗೆ ಸನ್ಮಾನ ಮಾಡುವುದರ ಮೂಲಕ ಅತಿ ಹೆಚ್ಚು ಅಂಕ ಪಡೆದ ಪಿಯುಸಿ ವಿದ್ಯಾರ್ಥಿಗಳಿಗೆ ಮತ್ತು ಮಾಜಿ ಸೈನಿಕರಿಗೆ ಪೌರಕಾರ್ಮಿಕರಿಗೆ ಇತರೆ ಸಾಧಕರಿಗೆ ಸನ್ಮಾನ ಅಮ್ಮಿಕೊಂಡಿದ್ದರು ಕಲಾವಿದರಾದ ಶ್ರೀಶೈಲಪ್ಪ ಗೊಂಡಬಾಳ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಹಿರಿಯ ಮುಖಂಡರಾದ ಬಸಲಿಂಗಪ್ಪ ಭೂತೆ ಅವರು ಮಾತನಾಡಿದರು. ಪಟ್ಟಣದ 12 ನೇ ವಾರ್ಡಿನಲ್ಲಿ ಶಾಂತಮ್ಮ ಏಕಾಬ್ರಪ್ಪ ಹಳ್ಳಿಕೇರಿ ಗೊಂಡಬಾಳ ಇವರ ಸೇವಾ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಸಂಗೀತ ಪಾಠಶಾಲೆಯ ಪ್ರಾರಂಭ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಸೇರಿ ಹಾಗೂ ಶರಣಬಸವ ಕುಮಾರನ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಎಲ್ಲರೂ ಸಂಗೀತ ಕಲೆಗೆ ಹೆಚ್ಚು ಪ್ರೋತ್ಸಾಹ ಕೊಡಬೇಕು ಈ ಕಾರ್ಯಕ್ರಮ ಪ್ರಾರಂಭಿಸುವ ಸಂಗೀತ ಪಾಠಶಾಲೆಯ ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಶೇಷವಾಗಿ ಶತಾಯುಷಿ ಅಜ್ಜಿಯಂದಿರು ಸೇರಿ ಇತರೆ ಸಾಧಕರ ಸುಮಾರು 150ಕ್ಕೂ ಅಧಿಕ ಸಾಧಕರಿಗೆ ಸನ್ಮಾನ ಮಾಡಿರುವುದು ಕಾರ್ಯಕ್ರಮಕ್ಕೆ ಹೆಚ್ಚು ಶೋಭೆ ತಂದಿದೆ ಎಂದು ಮಾತನಾಡಿದರು. ಹಿರಿಯ ಮುಖಂಡರಾದ ಬಸಲಿಂಗಪ್ಪ ಬುದ್ಧಿ ಅವರನ್ನು ಸಂಸ್ಥೆಯ ಅಧ್ಯಕ್ಷರಾಗಿ ಶ್ರೀಶೈಲಪ್ಪ ಗೊಂಡಬಾಳ ಅವರು ಸನ್ಮಾನಿಸಿದರು ಮುಖಂಡರಾದ ಸಿಎಚ್ ಪೊಲೀಸ್ ಪಾಟೀಲ್ ವೀರಣ್ಣ ಹುಬ್ಬಳ್ಳಿ ಸೇರಿದಂತೆ ಹಾಗೂ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಮತ್ತು ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಶ್ರೀ ಒಪ್ಪತ್ತೇಶ್ವರ ಸ್ವಾಮೀಜಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಅಂಬರೀಶ್ ಹುಬ್ಬಳ್ಳಿ ಸದಸ್ಯರಾದ ಬಸಲಿಂಗಪ್ಪ ಕೊತ್ತಲ ಉಪನ್ಯಾಸಕರಾದ ಮಹಾಂತೇಶ್ ನೆಲ ಗಣಿ ಶಿಕ್ಷಕರಾದ ದೇವಪ್ಪ ವಾಲ್ಮೀಕಿ ಸೇರಿದಂತೆ ಸಂಗೀತ ಬಳಗದವರು ಇನ್ನು ಹಲವಾರು ಉಪಸ್ಥಿತರು ಭಾಗಿಯಾಗಿದ್ದರು.
ವರದಿ – ಹುಸೇನ್ ಮೋತೆಖಾನ್