ತಾವರಗೇರಾ ಪಟ್ಟಣದಲ್ಲಿಂದು ಡಿ.ದೇವರಾಜ ಅರಸು ರವರ ಜನ್ಮದಿನದ ಜಯಂತಿ ಆಚರಿಸಲಾಯಿತು.

Spread the love

ತಾವರಗೇರಾ ಪಟ್ಟಣದಲ್ಲಿಂದು ಡಿ.ದೇವರಾಜ ಅರಸು ರವರ ಜನ್ಮದಿನದ ಜಯಂತಿ ಆಚರಿಸಲಾಯಿತು.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿಂದು ನಾಡ ಕಾರ್ಯಲಯದಲ್ಲಿಂದು ಹಿಂದುಳಿದ ವರ್ಗಗಳ ಹರಿಕಾರಡಿ. ದೇವರಾಜ್ ಅರಸು ಅವರ ಜನ್ಮದಿನ  ಜಯಂತಿಯನ್ನು ಆಚರಿಸಲಾಯಿತು. ಡಿ. ದೇವರಾಜ್ ಅರಸ್ ಅವರು ರಾಜ್ಯ ನೋಡಿದ ಶ್ರೇಷ್ಠ ಸಾಮಾಜಿಕ ಸುಧಾರಕರು. ಜನನಾಯಕ, ಬಡವರ ಧ್ವನಿ, ‘ಹಿಂದುಳಿದ ವರ್ಗಗಳ ಹರಿಕಾರಎಂದೇ ಖ್ಯಾತರಾಗಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ್ ಅರಸ್ ಅವರ ಜನ್ಮದಿನವನ್ನು ನಾವಿಂದು ಆಚರಿಸುತ್ತಿದ್ದೇವೆ. ಉಳುವವನಿಗೆ ಭೂಮಿ, ಹಾವನೂರು ಆಯೋಗದಂತಹ ಅವರ ಪ್ರಮುಖ ನಿರ್ಧಾರಗಳ ಪ್ರತಿಫಲ ಇಂದಿನ ಪೀಳಿಗೆಗೆ ಸಿಗುತ್ತಿದೆ. ಗೇಣಿ ಹೋರಾಟದ ಅನುಷ್ಠಾನ ಆಗದಿದ್ದರೆ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಾವನೂರು ಆಯೋಗ ರಚಿಸದಿದ್ದರೆ ಈವರೆವಿಗೂ ಬಹುಸಂಖ್ಯಾತರಿಗೆ ನ್ಯಾಯ ಸಿಗುತ್ತಿರಲಿಲ್ಲಈ ಕಾರ್ಯಕ್ರಮದಲ್ಲಿ ತಾವರಗೇರಾ ಗ್ರಾಮದ ಲೆಕ್ಕಾಧಿಕಾರಿಗಳಾದ ಸೂರ್ಯಕಾಂತ ಮತ್ತು ವಿಷಯ ನಿರ್ವಹಕ ಶ್ರೀಶೈಲ ಮಲ್ಲಿಕಾರ್ಜುನ ಹಾಗೂ ಗ್ರಾಮ ಸಹಾಯಕರು ಹಾಜರಿದ್ದರು.

ವರದಿ – ಅಮಾಜಪ್ಪ ಹೆಚ್.ಜುಮಾಲಾಪೂರ  

Leave a Reply

Your email address will not be published. Required fields are marked *