ಜಮಖಂಡಿ ತಾಲೂಕಿನ ನಗರದ ಜೈನ ಅನಾಥ ಆಶ್ರಮದಲ್ಲಿ ಗಾಯಕಿ ಅಕ್ಷತಾ ಮುತ್ತುರ ಅವಳ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು….
ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ನಗರದ ಜೈನ ಅನಾಥ ಆಶ್ರಮದಲ್ಲಿ ಕೃಷ್ಣಾ ತೀರದ ಗಾನ ಕೋಗಿಲೆ ಪ್ರಸಿದ್ಧ ಡೊಳ್ಳಿನ ಗಾಯಕಿ ಅಕ್ಷತಾ ಮುತ್ತುರ ಅವಳ ಜನ್ಮದಿನವನ್ನು ವಿಜೃಂಭಣೆಯಿಂದ ಸಾಹಿತ್ಯಗಾರರಾದ ಮಾಳು ದಳವಾಯಿ (ತೊದಲಬಾಗಿ) ಇವರು ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಮಾಜಿ ಜಿಲ್ಲಾ ಪಂಚಾಯತ ಸದ್ಯಸರಾದ ಅರ್ಜುನ ದಳವಾಯಿ ಜ್ಯೋತಿ ಬೆಳಗಿಸಿ ನಮ್ಮ ದೇಶದ ಸಂಸ್ಕಾರ ಸಂಸ್ಕೃತಿ ನಶಿಸಿ ಹೋಗುವ ಜೊತೆಗೆ ಇವತ್ತು ವಿವಿಧ ಕಲೆಗಳು ಮಾಯಾ ವಾಗಿವೆ ಆದರೆ ನಮ್ಮ ಸಿದ್ದರ ಪಾರಂಪರಿಕವಾಗಿ ಬಂದಿರುವ ಡೊಳ್ಳಿನ ಮಹಿಮೆ ಇದೆ ಅದು ಅಕ್ಷತಾ ಮುತ್ತುರ ಅಂತ ಹಾಡಿನ ಕಲಾವಿದರು ಇರುವದರಿಂದ ಉಳಿದಿದೆ ಎಂದು ಮಾತನಾಡಿದರು. ಧಿವ್ಯ ಸಾನಿಧ್ಯವನ್ನು ಅಥಣಿ ತಾಲೂಕಿನ ಸಿದ್ದೇವಾಡಿ – ಕೆಂಪವಾಡ ಮದಗೊಂಡೇಶ್ವರ ಆಶ್ರಮದ ಪದ್ಮಣ್ಣ ಮಹಾರಾಜರು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಕಾಗವಾಡ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡ ಪ್ರವೀಣ ನಾಯಿಕ ,ಕನಕದಾಸ ಶಾಲೆಯ ನಿರ್ದೇಶಕ ಹೂವಪ್ಪಾ ಉಷಾಕರ ,ಸಮಾಜ ಸೇವಕರಾದ ಬಸವರಾಜ ತಟ್ರಿ.ಕಲಾವಿದರಾದ ಸುರೇಶ ಹಳಿಯಾಳ, ಪ್ರದೀಪ ಕುಮಾರ ಹಾಗೂ ಎಲ್ಲಾ ಕಲಾ ಬಳಗದವರು ಉಪಸ್ಥಿತರಿದ್ದರು.
ವರದಿ – ಮಹೇಶ ಶರ್ಮಾ