ಕೊಪ್ಪಳ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮತ್ತು ಗೋರಂಟ್ಲಿ ಬಳಗದವತಿಯಿಂದ ನುಡಿನಮನಗಳು ….
ಶ್ರಮ ಸಂಸ್ಕೃತಿಯೇ ವಿಠಪ್ಪ ಗೋರಂಟ್ಲಿವರ ಬರಹಕ್ಕೆ ಪ್ರೇರಣೆ. ವಿಠಪ್ಪ ಗೋರಂಟ್ಲಿವರ ನುಡಿನಮನ ಕಾರ್ಯಕ್ರಮ ಯಶಸ್ವಿಗೊಂಡಿತು. ಭಾಗ್ಯನಗರ ವಿದ್ಯಾವಿಕಾಸ್ ಸ್ಕೂಲ್ ನಲ್ಲಿ ಅನೇಕ ಬರಹಗಾರರು ಮತ್ತು ಗೋರಂಟ್ಲಿವರ ಅಭಿಮಾನಿಗಳು ಭಾಗವಹಿಸಿದ್ದರು. ವೆಬ್ಬಿನರನಲ್ಲಿ ರಾಜ್ಯದ ನಾನಾ ಭಾಗಗಳಲ್ಲಿನ ಅನೇಕ ಬರಹಗಾರರು ಮಾತನಾಡಿದರು. ಪ್ರಗತಿಪರ ಚಿಂತಕರು ಮತ್ತು ಹಿರಿಯ ಲೇಖಕರಾದ ಶಿವಸುಂದರವರು,”ಬದುಕಿನ ಸೊಬಗು” ಪುಸ್ತಕ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಂದುವರೆದು ಮಾತನಾಡಿ, ದೇಶ ಅಪಾಯಕಾರಿ ಪರಸ್ಥಿತಿಯಲ್ಲಿದೆ. ನಿರುದ್ಯೋಗ ಬಡತನ ಹೆಚ್ಚಾಗುತ್ತ ಸಾಗಿದೆ. ರೈತರ ಆತ್ಮಹತ್ಯೆಗಳು ನಿರಂತರವಾಗಿ ಮುಂದುವರೆದಿವೆ. ಪರ್ಯಾಯ ಚಳುವಳಿಯ ನೇತರಾಗಿದ್ದ ವಿಠಪ್ಪಗೋರಂಟ್ಲಿವರನ್ನು ಕಳೆದುಕೊಂಡಿದ್ದೇವೆ. ಕೊಪ್ಪಳ ಜಿಲ್ಲೆ ಅಷ್ಟೇ ಅಲ್ಲ ರಾಜ್ಯಕ್ಕೆ ದೊಡ್ಡ ನಷವಾಗಿದೆ ಎಂದರು. ಎಸ್ಎಸ್. ದೊರೆ ಸ್ವಾಮಿ ಮತ್ತು ವಿಠಪ್ಪಗೋರಂಟ್ಲಿಯವರು ಚಳುವಳಿಗೆ ದೊಡ್ಡ ಶಕ್ತಿ ತುಂಬುತ್ತಿದ್ದರು. ಹಿರಿಯ ಸಾಹಿತಿ ಎಚ್.ಎಚ್. ಪಾಟೀಲ್,ಸಂತೋಷ್ ದೇಶಪಾಂಡೆ (ಅಧ್ಯಕ್ಷರು ಮೀಡಿಯಾ ಕ್ಲಬ್) ಸುದ್ದಿಮೂಲದ ವೆಂಖಟಸಿಂಗ್ ಮಾತನಾಡಿದರು. ವಿಠಪ್ಪ ಗೋರಂಟ್ಲಿ ಮತ್ತು ಚಳುವಳಿಯ ಕುರಿತು ವೈ.ಜೆ. ರಾಜೇಂದ್ರ, ಬಸವರಾಜ ಸೂಳಿಬಾವಿ, ಡಿ.ಹೆಚ್.ಪೂಜಾರ, ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ, ಬಾರದ್ವಜ್ ಮಾತನಾಡಿದರು. ಸಾಹಿತ್ಯದ ವಿಮರ್ಶಕರಾದ ರಹೀಮ್ ತರಕೇರಿ ಮಾತನಾಡಿ ಭಾರತದಲ್ಲಿ ಅಧ್ಯಾತ್ಮದ ಕುರಿತು ಗೊಂದಲಗಳಿಗೆ. ದೇಶದಲ್ಲಿ ಅಧ್ಯಾತ್ಮದ ವಿಮರ್ಶೆ ನಡೆಯಬೇಕಾಗಿದೆ ಎಂದರು. ಅಧ್ಯಾತ್ಮದ ಹೆಸರಿನಲ್ಲಿ ಕೋಮುವಾದ ಎನ್ನುವ ಗೂಳಿಯನ್ನು ಬೆಳಸಲಾಗುತ್ತದೆ. ಕಾವ್ಯದ ಕುರಿತು ಅಲ್ಲಮಪ್ರಭು ಬೆಟ್ಟದೂರ,
ಸಾಹಿತ್ಯದ ಆಶಯಗಳ ಕುರಿತು ಬಿ. ಪೀರಬಾಷಾ ವರು ವಿಷಯ ಮಂಡನೆ ಮಾಡಿದರು. ಸೂರ್ಯಕಾಂತ ಗುಣಿಕಿಮಠ, ಪ್ರಮೋದ್ ತುರ್ವಿಹಾಳ, ವಿ.ಬಿ.ರಡ್ಡೇರ್, ಈಶ್ವರ ಹತ್ತಿ, ವಾಣಿ ಪೆರಿಯೋಡಿ, ಮಾತನಾಡಿದರು. ರಾಘವೇಂದ್ರ ಪಾನಘಂಟಿ ವಕೀಲರು, ವೀರಣ್ಣ ಹುರಕಡ್ಲೆ, ಜಿ.ಕೆ.ದಾನಪ್ಪ ಭಾಗ್ಯನಗರ ಭಾಗವಹಿಸಿದ್ದರು. ಸಂಜೆ 5 ಗಂಟೆಗೆ ನಡೆದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ.ಎಂ.ಮದರಿ ವಿಸಿದ್ದರು. ಮಹಾಂತೇಶ ಮಲ್ಲನಗೌಡ, ಚಂದ್ರಪ್ಪ ಮಾಸ್ತರ ಕಾತರಕಿ ಮಾತನಾಡಿದರು.ರಮೇಶ ಗಬ್ಬೂರ ಶರಣ ಬಳಗ ಕ್ರಾಂತಿಗೀತೆ ಹಾಡಿದರು. ಲಕ್ಷ್ಮಣ್ ಪೀರಗಾರ- ಪ್ರಸ್ತುತಿ ತಂಡ ಪೃಥ್ವಿಫಿಲ್ಮ್ ತಂಡದಿಂದ ವಿಮೋಚನೆ ನಾಟಕ ಪ್ರದರ್ಶನಗೊಂಡಿತು. ಹೋರಾಟ, ಸಾಹಿತ್ಯ ಪತ್ರಿಕಾ ಮಾಧ್ಯಮ ಮತ್ತು ಅಧ್ಯಾತ್ಮದ ಹಿನ್ನೆಲೆಯ ಕುರಿತು 4 ಗೋಷ್ಠಿಗಳು. ವಿಠಪ್ಪ ಗೋರಂಟ್ಲಿ ಯವರು ದುಡಿಯುವ ವರ್ಗಕ್ಕೆ ಸೇರಿದರಾಗಿದ್ದರಿಂದಲೆ ಕೊನೆಯವರೆಗೆ ಬದ್ದತೆಯಿಂದ ಬದುಕಿದರು. ತಾಯಿಯೊಂದಿಗೆ ಹೊಲಗಳಲ್ಲಿ ಕಳೆ ತಗೆಯುವ ಕೂಲಿ ಕೆಲಸ ಕ್ಕೆ ಹೋಗುತ್ತಿದ್ದರಂತೆ. ಅವರ ಬರಹಕ್ಕೆ ಶ್ರಮ ಸಂಸ್ಕೃತಿಯೇ ಮೂಲ ಪ್ರೇರಣೆ.ಅವರು ನೇಕಾರಿಕೆ ದುಡಿಮಯಲ್ಲಿ ತೊಡಗಿದ್ದರಿಂದಲೆ ಶ್ರಮ ಶೋಷಣೆಯನ್ನು ಸ್ವತಃ ಅನುಭವಿಸಿದರು.ನಂತರ ನೇಕಾರರ ಮತ್ತು ಕೈಮಗ್ಗದ ಕಾರ್ಮಿಕರ ಮುಂಚೂಣಿ ನಾಯಕರಾಗಿ ನಿರಂತರ ಹೋರಾಡಿದರು. ನೇಕಾರರ ಕಷ್ಟಗಳಿಗೆ ಪರಿಹಾರ ಕೊಡಿಸುವ ಹೋರಾಟ, ಶ್ರಮ ಶೋಷಣೆಯ ಮೇಲೆ ಜಗತ್ತಿನ ವ್ಯವಸ್ಥೆ ನಿರ್ಮಾಣವಾಗಿರುವುದನ್ನು ಅರ್ಥ ಮಾಡಿಕೊಳ್ಳಲು ಗೋರಂಟ್ಲಿವರಿಗೆ ಸಹಾಯವಾಯಿತು. ಆಳುವ ವರ್ಗ ಮತ್ತು ದುಡಿಯುವ ವರ್ಗದ ನಡೆವಿನ ಹೋರಾಟ ನಿರಂತರ ಎನ್ನುವ ಅರಿವು ಅವರಿಗಿತ್ತು. ಅವರ ಹಲವು ಬರಹಗಳಲ್ಲಿ ಅವರ ಧೋರಣೆಯನ್ನು ಅರ್ಥ ಮಾಡಿಕೊಳ್ಳಬಹುದು.ಶೋಷಕ ವ್ಯವಸ್ಥೆ ಕುರಿತು ಜನರನ್ನು ಜಾಗೃತಿಗೊಳಿಸುವ ವಿಷಯದಲ್ಲಿ ಅವರಿಗೆ ಸ್ಪಷ್ಟತೆ ಇತ್ತು.ಅವರ ಅನೇಕ ಭಾಷಣಗಳಲ್ಲಿ ನಾನು ಗಮನಿಸಿದ್ದೇನೆ. ಸತ್ಸಂಘದ ವಿಷಯವನ್ನು ನಾವು ಪ್ರಸ್ತಾಪಿಸಿದಾಗ. ಅಲ್ಲಿ ಜನರನ್ನು ಜಾಗೃತಿಗೊಳಿಸುವ ಕಾರ್ಯದ ಒಂದು ಭಾಗ ಎಂದು ಹೇಳುತ್ತಿದ್ದರು. ಆದರೆ ಅವರಿಗೆ ಮಿತಿಗಳಿದ್ದವು. ಅವರ ಸುತ್ತಲಿನ ಪರಸ್ಥಿತಿ ಆ ರೀತಿ ಇತ್ತು. ಭಾಗ್ಯನಗರದ ನೇಕಾರರ ಹೋರಾಟ ಎಡಪಂಥಿಯ ಟ್ರಡ್ ಯೂನಿಯನ್ ನೇತೃತ್ವ ವಹಿಸಿಕೊಂಡಿದ್ದರೆ ಅವರ ಧೋರಣೆ ಕ್ರಾಂತಿಕಾರಿಯಾಗಿರುತ್ತೇನೋ.?ಆದರೆ ಅದು ಸಾಧ್ಯವಾಗಿಲ್ಲ.ರಾಜ್ಯ ಮಟ್ಟದಲ್ಲಿ ನೇಕಾರರ ಚಳುವಳಿ ಎಡಪಂಥಿಯ ಸಂಘಟನೆಗ ನಾಯಕತ್ವ ಕಡೆಗೆ ಹೋಗದಂತೆ ನೋಡಿಕೊಂಡಿರಬಹುದು.ಬೆಳಗಾವಿ, ಗದಗ ರಾಜ್ಯದ ಇತರೆ ಭಾಗದಲ್ಲಿನ ನೇಕಾರರ ಚಳುವಳಿಯ ಹಿನ್ನೆಲೆಯನ್ನು ಗಮನಿಸಿದರೆ, ಪ್ರಜ್ಞಾಪೂರ್ವಕವಾಗಿ ಎಡಪಂಥಿಯ ಕಡೆಗೆ ಹೋಗದಂತೆ ತಡೆದಿರಬಹುದು.ಅಂಬಾನಿ ಅದಾನಿ ಕಂಪನಿಗಳ ಲೂಟಿ ಮತ್ತು ಸಂಪತ್ ಹೆಚ್ಚಳದ ಬಗ್ಗೆ ಯಾವಾಗಲೂ ನಿಷ್ಠುರವಾಗಿ ಮಾತನಾಡುತ್ತಿದ್ದರು. ವಿಜಯ ಮಲ್ಯ ನಿರಾವ್ ಮೋದಿ ಇತರರು ಸಾವಿರಾರು ಕೋಟಿ ವಂಚನೆ ಮಾಡಿದ್ದರ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.ಅವರ “ಕಪ್ಪೊಡಲ ಕರೆ” ಕವನ ದುಡಿಯುವ ಜನರ ಬಗ್ಗೆ ಅವರಿಗಿರುವ ಬದ್ದತೆ ತೋರಿಸುತ್ತದೆ. ಅವರ ಈ ಬದ್ದಯೆ ಹಿನ್ನೆಲೆಯಲ್ಲಿ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ (RCF) ಯ ಮುಖ ಪತ್ರ ರಿವೋಲ್ಟ್ ಎನ್ನುವ ಹಿಂದಿ ಪತ್ರಿಕೆಯ ಸಂಪಾದಕ ಜವಾಬ್ದಾರಿ ವಹಿಸಲಾಗಿತ್ತು. Mspl ಕಂಪನಿ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2000 ಎಕರೆ ಭೂಮಿ ಅತಿಕ್ರಮಿಸಿದ್ದರ ವಿರುದ್ಧ ರಾಜಿರಹಿತವಾಗಿ ಹೋರಾಟ ನಡೆಸಿದರು. ಕಂಪನಿಯ ದಲ್ಲಾಳಿಗಳು ನಮಗೆ ಮೊದಲು ಹಣದ ಆಮಿಶ ಹೊಡ್ಡಿದರು ಅದಕ್ಕೆ ನಾವು ಒಪ್ಪಲಿಲ್ಲ. ಕಂಪನಿಯ ದಲ್ಲಾಳಿಗಳು ನಮ್ಮ ಮೇಲೆ ದೌರ್ಜನ್ಯ ಮಾಡಿದ್ದಲ್ಲದೆ, ಸುಳ್ಳು ಕೇಸ್ ಹಾಕಿ ಕೋರ್ಟಗೆ ಅಲೆದಾಡುವಂತೆ ಮಾಡಲಾಯಿತು. ಸುಪ್ರೀಂ ಕೋರ್ಟ್ವರೆಗೆ ಕಾನೂನಾತ್ಮಕ ಹೋರಾಟ ನಡೆಸಿದ್ದರಿಂದಲೆ, ಬಸಾಪುರ ಕೆರೆ ಉಳಿದುಕೊಂಡಿತು. ಗೋರಂಟ್ಲಿಯವರ ಪರಿಶ್ರಮ ಮತ್ತು ಬದ್ಧತೆಯನ್ನು ನಾವು ಯಾವೊತ್ತು ಮರೆಯಬಾರದು. ವ್ಯವಸ್ಥೆಯನ್ನು ಬದಲಾಯಿಸಲು ರಾಜರಹಿತವಾದ ಹೋರಾಟ ಮಾಡುವ ಮೂಲಕ ಗೋರಂಟ್ಲಿಯವರಿಗೆ ಆಶಯಗಳನ್ನು ಮುಂದಕ್ಕೊಯ್ಯೋಣ. ಈ ಸುದ್ದಿಯನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಬೇಕೆಂದು ಕೋರಲಾಗಿದೆ. ಡಿ.ಹೆಚ್.ಪೂಜಾರ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮತ್ತು ಗೋರಂಟ್ಲಿ ಬಳಗದ ಪರವಾಗಿ.
ವರದಿ – ಸಂಪಾದಕೀಯ