ಜನಪದ ಸಮ್ಮೇಳನ ಕೃತಿಗಳ ಲೋಕಾರ್ಪಣೆ ಅದ್ದೂರಿ ಕಾರ್ಯಕ್ರಮ

Spread the love

ಜನಪದ ಸಮ್ಮೇಳನ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ

ಲಿಂಗಸೂಗೂರು  ; ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು ಜಿಲ್ಲಾ ಘಟಕ ರಾಯಚೂರು, ತಾಲ್ಲೂಕು ಘಟಕ ಲಿಂಗಸುಗೂರು ಹಾಗೂ ಮಹಿಳಾ ಘಟಕಗಳಿಂದ ಲಿಂಗಸುಗೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ವೈದಾನದಲ್ಲಿ  2021 ರಂದು ಜಾನಪದ ಸಮ್ಮೇಳನ, ಕೃತಿಗಳ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಮಹಿಳಾ ಘಟಕದ ಪದಗ್ರಹಣ ಕಾರ್ಯಕ್ರಮ ಜರುತ್ತಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಿಂಗಸುಗೂರಿನ ಜನಪ್ರಿಯ ಶಾಸನಕ ಡಿ.ಎಸ್.ಹೂಲಗೇರಿ ಅವರು ವಹಿಸುವರು. ಸಜ್ಜಲಶ್ರೀ ವೇದಕೆಯಲ್ಲಿ ಜಾನಪದ ವಿಶ್ವವಿದ್ಯಾಲಯ ಕುಲಪತಿ ಡಿ.ಬಿ. ನಾಯಕ ಅವರಿಂದ ಕಾರ್ಯಕ್ರಮ ಉದ್ಘಾಟನೆ ಮಾಡಿದರು, ಜಿನ್ನದ ಜಾನಪದ ಎಂಬ ಸ್ಮರಣ ಸಂಚಿಕೆಯನ್ನು ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರು ಬಿಡುಗಡೆ ಮಾಡಲಿದ್ದಾರೆ. ಇವು ಅಲ್ಲದೆ ಡಾ. ಮಹಾಂತಗೌಡ ಪಾಟೀಲ ಅವರ ಮೊದಲ ಹೆಜ್ಜೆ ಹಾಗೂ ಸಾಹಿತ್ಯ ಮತ್ತು ಚಳುವಳಿ, ಡಾ. ಜಯದೇವಿ ಗಾಯಕವಾಡ ಅವರ ವೈಶಾಖ ಪೂರ್ಣಿಮೆ ಗಜಲಗಳು, ಡಾ. ಶರಣಪ್ಪ ಆನೆಹೊಸೂರು ಅವರ ಪತ್ರಿಕಾ ತಲೆ ಬರಹ, ಸೈಯದ್ ಹುಚ್ ಪೀರ ತಾತ ಅವರ ನವರಸ ಕಥೆಗಳ ಕೃತಿಗಳು ಲೋಕಾರ್ಪಣೆ ಮಾಡಿದರು,  ಜಿಲ್ಲೆಯ ಸಾಧಕರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನ ಮಾಡಿದರು, ಇದೆ ಸಂದರ್ಭದಲ್ಲಿ  ಜಿಲ್ಲಾಧ್ಯಕ್ಷ ಶರಣಪ್ಪ ಆನೆಹೊಸೂರು, ಅರುಣಾ ಹಿರೇಮಠ, ಸಮ್ಮೇಳನದ ಅಧ್ಯಕ್ಷ ಡಾ: ಲಿಂಗಣ್ಣ ಗಾಣಧಾಳ,  ಚಿತ್ರನಟ ಹಾಗೂ ಜಾನಪದ ಕಲಾವಿದ ಗುರುರಾಜ ಹೊಸಕೋಟೆ  ಜಾನಪದ ಪರಿಷತ್ತು ರಾಜ್ಯಾಧ್ಯಕ್ಷ ಟಿ. ತಿಮ್ಮೇಗೌಡ, ಹಟ್ಟಿ ಕಂಪನಿ ಅಧ್ಯಕ್ಷ ಮಾನಪ್ಪ ವಜ್ಜಲ, ರಾಯಚೂರು ವಿಶ್ವವಿದ್ಯಾಲಯ ಕುಲಪತಿ ಹರೀಶ ರಾಮಸವಾಮಿ, ರಾಜ್ಯ ಗ್ರಂಥಾಲಯ ನಿರ್ದೇಶಕ ಡಾ. ಸತೀಶ ಹೊಸಮನಿ ಗುಂಡಪ್ಪ ನಾಯಕ, ತಾಲೂಕ ಅಧ್ಯಕ್ಷ ಮಹೇಂದ್ರ ಕುರ್ಡಿ, ಲಕ್ಷ್ಮೀದೇವಿ ನಡುವಿನಮನಿ  ಇದ್ದರು,

ವರದಿ :- ಬಸಲಿಂಗಪ್ಪ ಹೈದ್ನಾಳ

Leave a Reply

Your email address will not be published. Required fields are marked *