ಹಜರತ ಶಾಮೀದಲಿ ಉರ್ಫ ಶಾಹಮಿದೂದ್ದೀನ್ ದರ್ಗಾ, ವಕ್ಫ ಮಂಡಳಿ ತಾವರಗೇರಾ ಇವರವತಿಯಿಂದ ತಾಹಶೀಲ್ದಾರಗೆ ಮನವಿ..

Spread the love

ಹಜರತ ಶಾಮೀದಲಿ ಉರ್ಫ ಶಾಹಮಿದೂದ್ದೀನ್ ದರ್ಗಾ, ವಕ್ಫ ಮಂಡಳಿ ತಾವರಗೇರಾ ಇವರವತಿಯಿಂದ ತಾಹಶೀಲ್ದಾರಗೆ ಮನವಿ..

ಹಜರತ ಶಾಮೀದಲಿ ಉರ್ಫ ಶಾಹಮಿದೂದ್ದೀನ್ ದರ್ಗಾ, ವಕ್ಫ ಮಂಡಳಿ ತಾವರಗೇರಾದಲ್ಲಿ ಸತತವಾಗಿ ಮೂರು ಭಾರಿ ಕಳ್ಳತನವಾಗಿದ್ದು, ಕಳ್ಳರನ್ನು ಬಂಧಿಸಿದ್ದರು, ಸಹ ಅಂದಿನಿಂದ ಇಲ್ಲಿಯವರೆಗೂ ಯಾವುದೇ ಕಠೀಣ ಕ್ರಮ ತಗೆದುಕೊಳ್ಳದಿರುವ ಕುರಿತು ಮಾನ್ಯ ತಹಶೀಲ್ದಾರ ಗಮನಕ್ಕೆ ಮನವಿ ಪತ್ರ ನೀಡಿದರು. ಹಜರತ ಶಾಮೀದಲಿ ಉರ್ಫ ಶಾಹಮಿದೂದ್ದೀನ್ ದರ್ಗಾವು ಪಟ್ಟಣದ ಹಾಗೂ ಸುತ್ತ-ಮುತ್ತಲಿನ ಹಳ್ಳಿಗಳಲ್ಲದೆ ನಾನಾ ಜಿಲ್ಲೆಗಳಿಂದ ಭಕ್ತಾಧಿಗಳು ಆಗಮಿಸುತ್ತಿದ್ದು, ಭಕ್ತಾಧಿಗಳು ಭಕ್ತಿಯ ರೂಪದಲ್ಲಿ ದರ್ಗಾದ ಅಭಿವೃದ್ದಿ ಕಾರ್ಯಗಳಿಗಾಗಿ ನೀಡಿರುತ್ತಾರೆ. ಅದಕ್ಕಾಗಿ ದರ್ಗಾದಲ್ಲಿ 2 ಕಾಣಿಕೆ ಪೆಟ್ಟಿಗೆಗಳನ್ನು ಇಡಲಾಗಿದೆ. ಈ ದರ್ಗಾದಲ್ಲಿರುವ ಕಾಣಿಕೆ ಪೆಟ್ಟಿಗೆಗಳು ಸತತವಾಗಿ 3 ವರ್ಷಗಳಿಂದ ಕಳ್ಳತನವಾಗುತ್ತಿದ್ದು. ಇದು ಎಲ್ಲರ ಗಮನಕ್ಕೆ ಬಂದಿದ್ದು, ತಾವರಗೇರಾ ಪೊಲೀಸ್ ಠಾಣೆಯಲ್ಲಿ ಈ ಸಂಬಂದಿಸಿದಂತ್ತೆ ದೂರು ದಾಖಲಾಗಿದ್ದರು ಸಹ ಕಳ್ಳರು ಅದನ್ನು ಲೆಕ್ಕಿಸದೆ ಸತತವಾಗಿ ಕಳ್ಳರು ತಮ್ಮ ಕೈ ಚಳಕ ತೋರಿಸುತ್ತಿದ್ದಾರೆ. ಮೊನ್ನೆ ನಡೆದ ಘಟನೆಯ ನಂತರ ಸೆರೆ ಸಿಕ್ಕು ನ್ಯಾಯಾಂಗ ಬಂದನದಲ್ಲಿರುವ ಕಳ್ಳರ ಮೇಲೆ ಕಠೀಣ ಕ್ರಮ ಕೈಗೊಂಡು. ಈ ಹಿಂದೆ ಕಳ್ಳತನವಾಗಿರುವ ಮೊತ್ತವನ್ನು ಕಳ್ಳರಿಂದ ಹಾಗೂ ಕಳ್ಳತನಕ್ಕೆ ಕಳ್ಳರನ್ನು ಕಳ್ಳತನ ಮಾಡಲು ಯಾರಾದರು ಕುಮ್ಮಕ್ಕು ನೀಡಿದರೆ ಅವರಿಂದ ಸಂಪೂರ್ಣ ಮೊತ್ತವನ್ನು ವಶಪಡಿಸಿಕೊಳ್ಳಬೇಕು. ಹಾಗೂ ಭಕ್ತರು ಕಾಣಿಕೆಯನ್ನು ಕಳ್ಳರ ಫಾಲಾಗದಂತೆ ಮುನ್ನಚ್ಚೆರಿಕೆಗಾಗಿ ದರ್ಗಾಕ್ಕೆ ಸಂಬಂಧಿಸಿದ ಸ್ಥಳಕ್ಕೆ ಸೂಕ್ತ ಬಂದಬಸ್ತು ನೀಡಬೇಕೆಂದು ಮಾನ್ಯ ತಹಶೀಲ್ದಾರಗೆ ಮನವಿ ಪತ್ರ ನೀಡಿದರು. ಸ್ಥಳದಲ್ಲಿ ಕರ್ನಾಟಕ ಮುಸ್ಲಿಂ ಜಮಾತ್ ಅಧ್ಯಕ್ಷರಾದ ಫಾರುಕ್ ಚೌದರಿ. ಜೀಲಾನಿಸಾಬ್ ಕಾರ್ಯದರ್ಶಿ, ಮಹ್ಮದ ಜಾಹೀದ್ ಹುಸೇನ್ ಪೇಶಮಾಮ್, ಸೈಯಾದ್ ಖಾಜಾಪಾಷಾ ಜಿಲ್ಲಾ ಉಪದ್ಯಾಕ್ಷ್ಯರು, ಮೂಸೀಬ್ ಹೈಹ್ಮದ್ ಖಾಜಿ ಹಾಗೂ ತಾವರಗೇರಾದ ಮುಸ್ಲೀಂ ಸಮಾಜದವರು ಉಪಸ್ಥೀತರಿದ್ದರು.

ವರದಿ – ಅಮಾಜಪ್ಪ ಹೆಚ್. ಜುಮಾಲಾಪೂರ್.

Leave a Reply

Your email address will not be published. Required fields are marked *