ಜಿಲ್ಲಾ ಜನಪದ ಸಮ್ಮೇಳನ ಬಾಯಿಂದ ಬಾಯಿಗೆ ಹರಿದು ಬಂದ ಸಂಸ್ಕೃತಿ .ಸಮ್ಮೇಳನ ಆದ್ಯೆಕ್ಷ ಲಿಂಗಣ್ಣ ಗಾಣದಾಳ ಲಿಂಗಸೂಗೂರು ; ಬಾಯಿಂದ ಬಾಯಿಗೆ ಹರಿದು ಬಂದು ನಮ್ಮ ಸಂಸ್ಕೃತಿಯ ನ್ನು ಉಳಿಸಿ ಬೆಳೆಸುವ ವಾಹಕವಾಗಿದೆ ಎಂದು ಜನಪದ ಸಮ್ಮೇಳನ ದ ಅಧ್ಯಕ್ಷ ಲಿಂಗಣ್ಣ ಗಾಣದಾಳ ಹೇಳಿದರು ಅವರು ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲಿ ನಡೆದ ರಾಯಚೂರು ಜಿಲ್ಲಾ ಪ್ರಥಮ ಜಾನಪದ ಸಮ್ಮೇಳನ ದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ಜನಪದದಲ್ಲಿ ನಾಡಿನ ಅಂತಸತ್ವ ಅಡಗಿರುವುದು ಗ್ರಾಮೀಣ ಬದುಕಿನ ಎಲ್ಲಾ ಹಸಿರು ಉಸಿರುಗಳನ್ನು ತುಂಬಿ ಜನಪದ ಬೆಳೆದಿದೆ ಮನುಕುಲದ ಮೂಲ ಮಾತೃಕೆ ಜನಪದವಾಗಿದೆ ನಮ್ಮ ಸಂಸ್ಕೃತಿಯ ನಿರ್ಮಾತೃ ಜನಪದರು ಹಿಂದಿನಿಂದ ಬಳುವಳಿಯಾಗಿ ಬಂದುದರ ಜೊತೆಗೆ ಹೊಸಹಾಡನ್ನು ಕಟ್ಡಬಲ್ಲರು ಬಿತ್ತುವಾಗ ಉತ್ತುವಾಗ ರಾಶಿಮಾಡುವಾಗ ಹಬ್ಬ ದಿಬ್ಬಣದಲಿ ಸುಖ ದುಃಖ ದ ಸಂದರ್ಭದಲ್ಲಿ ಜನಪದ ಓತಪ್ರೋತವಾಗಿ ಹರಿದುಬಂದಿದೆ ಎಂದರು ರಾಯಚೂರು ಜಿಲ್ಲೆಯ ಲ್ಕಿ ಹಲವಾರು ರಂಗಗಳಲಿ ಜನಪದ ಹಾಸುಹೊಕ್ಕಾಗಿದೆ ಮೊಹರಂ ಹಾಡು ಡೊಳ್ಳಿನಹಾಡು ದೊಡ್ಡಾಟ ತೊಗಲುಬೊಂಬೆ ಮದುವೆಹಾಡು ಹೀಗೆ ಹಲವುಕಡೆ ಜನಪದ ಬೆಳೆದುಬಂದಿದೆ ಹಲವಾರು ಜನಪದ ಕಲೆಗಳು ಇಂದು ನಮ್ಮಿಂದ ಕಣ್ಮರೆಯಾಗುತಿರುವುದು ದುರಂತ ವೆಂದರು ಈ ಸಂದರ್ಭದಲ್ಲಿ ಜನಪದ ವಿವಿಯ ಕುಲಪತಿಗಳಾದ ಡಿ,ಬಿ ನಾಯಕ,ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಶಾಸಕ ಡಿ ಎಸ್ ಹೂಲಿಗೇರಿ ಬಸವರಾಜಸ್ವಾಮಿ ರಾಯಚೂರು ಗುರುರಾಜ ಹೊಸಕೋಟೆ ಭೂಪನಗೌಡ ಕರಡಕಲ್ ಗುಂಡಪ್ಪನಾಯಕ ಡಿ ಜಿ ಗುರಿಕಾರ ಶರಣಪ್ಪ ಆನೆಹೊಸೂರು ಶಿವಮ್ಮ ಪಟ್ಟದಕಲ್ ಲಕ್ಷ್ಮೀ ದೇವಿ ನಡುವಿನಮನಿ ಅರುಣ ಹಿರೇಮಠ ಸೇರಿದಂತೆ ಇದ್ದರು
ಬಸಲಿಂಗಪ್ಪ ಬಜಂತ್ರಿ ಐದನಾಳ