ಇತ್ತೀಚೆಗೆ ಅನೇಕ ಲೇಖಕರು ಪುಸ್ತಕಗಳನ್ನು ಓದಿ ಮುಗಿಸಿದೆ. ಎಲ್ಲವನ್ನೂ ಒಂದಾದ ಮೇಲೆ ಒಂದನ್ನು ಹಂಚಿಕೊಳ್ಳಲು ಮನಸ್ಸು ಮಾಡಿರುವೆ ಶೋಭೆ ತರುವ ಪುಸ್ತಕ….
ಈ ಪುಸ್ತಕದ ಬಗ್ಗೆ ಹೇಳಲೂ ಮಾತುಗಳೇ ಮೌನ.. ಒಬ್ಬ ವ್ಯಕ್ತಿಯ ಮೇಲೆ ಅದ್ಭುತ ಪರಿಣಾಮ ಬಿರುವ ಪುಸ್ತಕ ಓದಿ ಮುಗಿಸಿದ ನಂತರ ಈ ಬಗ್ಗೆ ಕೆಲವು ಮಾತುಗಳು ನಿಮ್ಮೊಡನೆ ಹಂಚಿಕೊಳ್ಳಲು ಸಿದ್ದಳಾದೆ. ತಾಯಿಯ ಬಗ್ಗೆ ಯಾವುದೇ ರೀತಿಯಲ್ಲಿ ಹೊಗಳಲು ಪದಗಳೇ ಸಾಲಾದು.ಅಂಥದ್ದರಲ್ಲಿ ಈ ಸಂದರ್ಭದಲ್ಲಿ ಈ ಪುಸ್ತಕ ಬರೆದವರು ‘ಮಹಾತಾಯಿ‘ಹೆಸರು ಇಟ್ಟಿದ್ದು ಸಾರ್ಥಕ ಎನಿಸುವಷ್ಟು ಈ ಪುಸ್ತಕ ಇದೆ ಎಂಬುದು ಓದುದವ್ರುಗೆ ಗೊತ್ತಾಗುತ್ತೆ. ಸಾಮಾಜದಲ್ಲಿ ‘ತಾಯಿ‘ಗೆ ಇರುವಷ್ಟು ಸ್ಥಾನ ‘ಮಲತಾಯಿ‘ ಗೆ ಇಲ್ಲಎಂಬುವದು ಎಲ್ಲರಿಗೂ ಗೊತ್ತಿರುವ ಸಂಗತಿ.ಕಾರಣಂತರ ಲೇಖಕರು ಮೊದಲ ಹೆಂಡತಿಯ ಸಾವಿನ ನಂತರ ಮನೆಯಿಂದ ಒತ್ತಡ ಹೇರಲು ಈ ಶೋಭಾವತಿ ಅವರ ವಿವಾಹ ಆಗುವರು.ಪುಟ್ಟ ಪುಟ್ಟ ಏನೊಂದು ಅರಿಯದ 4 ಮಕ್ಕಳ ಜೊತೆ ಜೊತೆಗೆ ವಾಲದೊಡ್ಡಿ ಅವರ ಜೊತೆ ಜೊತೆಗೆ ಸಂತೋಷದಿಂದ ಜೀವನ ಪರ್ಯಂತ ಇದ್ದರು. ಯಾವುದೇ ಕಾರಣಕ್ಕೂ ಮಾಲತಾಯಿ ಎಂದೂ ಅನ್ನಿಸದೆ ಇರುವುದು ಶೋಭಾ ಅವರ ಶೋಭೆ. ಸಂದರ್ಭಹೇಗೆ ಇದ್ದರೂ ಸಹ ಸಹನೆ ಶಾಂತಿ ನೆಮ್ಮದಿಯ ಜೀವನ ನಡೆಸಲು ಸದಾಕಾಲ ಒಂದಿಳೊಂದು ರೀತಿಯಲ್ಲಿ ನೋಡಿದವರಿಗೆ ಅಚ್ಚರಿಯ ಸಂಗತಿ ಎನ್ನುವಂತೆ,ಶೋಭಾ ಅವರ ವ್ಯಕ್ತಿತ್ವ ತೆರೆದುಕೊಳ್ಳುತ್ತದೆ.ಬದುಕಿನ ಪಾಠವೇನು ಅನುಭವದ ಮಾತು ಕೇಳಿ ಪುಸ್ತಕ ರೂಪದಲ್ಲಿ ಓದಿ ಮುಗಿಸಿದ ನಂತರ ಕೊನೆ ಪಕ್ಷ 2ರಿಂದ 3 ದಿನ ಇದೆ ಗುಂಗಿನಲ್ಲಿ ಓದುಗ ಮಿತ್ರರು ಇರುವರು. ಮಹಿಳೆಯರು ಮುಖ್ಯವಾಗಿ ಈ ಪುಸ್ತಕ ಓದಿ ಮುಗಿಸಿದ ನಂತರ ಬದಲಾಗದೆ ಇರಲಾರರು. ಶಾಂತಿ ಸಹನೆ ಅನುಕಂಪದ ಕಡಲು ತಾಯಿ ಅಂದರೆ ತಪ್ಪಾಗಲ್ಲ. ಈ ಸಂದರ್ಭದಲ್ಲಿ ಒಂದು ಮಾತು ಹೇಳಲೇ ಬೇಕು. “ಮಹಾತಾಯಿ” ಪುಸ್ತಕ ರೂಪದಲ್ಲಿ ತಂದಿದ್ದು ಸ್ವತಃ ಶ್ರೀ ಶಂಭುಲಿಂಗ ವಾಲದೊಡ್ಡಿ. ಭಾರತೀಯ ಸಂಸ್ಕೃತಿಯ ಪುರುಷ ಪ್ರಧಾನ ವ್ಯವಸ್ಥ ಇರುವ ಸಂದರ್ಭದಲ್ಲಿ ಈ ರೀತಿಯ ಪುಸ್ತಕ ಅಂದರೆ ಹೆಂಡತಿಯ ವೈಶಿಷ್ಟ್ಯತೆ ಬಗ್ಗೆ ಮನಸಾರೆ ಹಂಚಿಕೊಳ್ಳಲು ಸಿದ್ದ ಆಗುವುದು ಸಾಮಾನ್ಯ ಜನರಿಗೆ ಅಗದು. ಅದಕ್ಕೂ ಮಿಗಿಲಾಗಿ ಮಾತಿಲ್ಲ. ಪ್ರತಿಯೊಂದು ಹಂತದಲ್ಲೂ ಹೃದಯ ತುಂಬಿ ಹರಿಯುವ ಭಾವನೆ ಮೂಡುತ್ತದೆ. ಎರಡನೇ ಮದುವೆ ಆದ ಮೇಲೆ ಹೇಗೆ ಸಾಧ್ಯ ಬದುಕು ಕಟ್ಟಿಕೊಳ್ಳಲು ಎಂಬುವದು ಇಲ್ಲಿ ನಾವು ಗಮನಿಸಬೇಕು. ಅದು ನಾಲ್ಕು ಮಕ್ಕಳ ಜೊತೆ ಜೊತೆಗೆ ಎನ್ನವದು ಇನ್ನೂ ಹೆಚ್ಚು ವಿಶೇಷತೆ. ತಾನು ಮಗುವ ಪಡೆದ್ರೆ ನಾಲ್ಕು ಮಕ್ಕ್ಳಿಗೆ ಪ್ರೀತಿಯ ಕೊರತೆ ಅಗಬಹುದೇ ಎಂದೆಲ್ಲಾ ಯೋಚಿಸುವ ವಿಶೇಷ ಹೃದಯವಂತೆ ಶೋಭಾ. ತನ್ನ ಮಗುವಿಗೆ ಜನ್ಮ ನೀಡಿದ ಬಳಿಕ ಮಗುವಿನ ತಂದೆಯಕೈ ವಶ ಕೊಟ್ಟಂತ ಈ ರೀತಿಯ ಹೃದಯ ಮಿಡಿಯುವ ಭಾವನೆ ಇಲಿ ಕಣ್ಣಲ್ಲಿ ನೀರು ಜಾರುವ ಹಾಗೆ ಮಾಡುತ್ತದೆ ಎಂಬುದು ಸತ್ಯ. ಕಷ್ಟನೋವು ನಲಿವು ಒಲವು ಗೆಲವು ಎಲ್ಲವೂ ಇದೆ ಎಂಬುದು ಗಮನಾರ್ಹ ಸಂಗತಿ. ಮೊದಲೇ ಹೇಳಿದಂತೆ ಗಂಡನೇ ತನ್ನ ಹೆಂಡತಿಯ ಬಗ್ಗೆ ಇಷ್ಟೆಲ್ಲಾ ಹೇಳಿದ್ದಾರೆ ಎಂದರೆ ಈ ಪುಸ್ತಕದ ಬಗ್ಗೆ ಇನೆನ್ನು ಹೇಳ್ಬೇಕು. ಸಾಮಾನ್ಯವಾಗಿ ತನಗಿಂತ ಒಂದಿಷ್ಟು ಹೆಜ್ಜೆ ಮುಂದೆ ಇದ್ರೂ ಸಹಿಸದ ಪುರುಷರ ಸ್ವಭಾವ. ಆದ್ರೆ ಅದಕ್ಕೆ ವಿರುದ್ಧ ಎಂಬಂತೇ ಮಾತೃಹೃದಯಿ ಲೇಖಕರು. ಒಟ್ಟಾರೆ ಹೇಳುವುದಾದರೆ ಒಂದು ಕುಟುಂಬದ ಸದಸ್ಯರು ತಮ್ಮ ತಮ್ಮ ಬದುಕು ಸಾಗಿಸಲು ಸರಳ ಜೀವನ ನಡೆಸಲು ಹಾಗೂ ಅವರೊಂದಿಗೆ ಮಾತುಕತೆ ಮಧುರಬಂಧನ ಎಲ್ಲವನ್ನೂ ಕುಂಚದ ಮೂಲಕ ಈ ಬಗ್ಗೆ ಎಳೆ ಎಳೆಬಿಡಿಸಿ ಹೇಳಿದ ಮಾತುಗಳು ನನ್ನನ್ನು ಸದಾ ಒಂದಿಲ್ಲೊಂದು ರೀತಿಯಲ್ಲಿ ಅಚ್ಚರಿ ಮುಡಿಸುತ್ತದೆ.ಕಷ್ಟ ಸುಖ ಸಹನೆ ಬಾಳಿನ ಜೊತೆಗೆ ಸಂಗೀತದ ನಿನಾದ ಪ್ರಶಸ್ತಿಗಳಗರಿ ಎಲ್ಲಾ ರೀತಿಯ ಅನುಭವಪಡೆದ ನಂತರ ವ್ಯವಸ್ಥೆ ಮತ್ತು ನಮ್ಮ ಜೀವನ ಎರೆಡು ಹೊಂದಾಣಿಕೆ ಮಾಡಿಕೊಂಡು ಹೋಗುವ ದಾರಿಯಲ್ಲಿ ಈ ರೀತಿಯ ಪುಸ್ತಕ ಡಿಕ್ಸೂಚಿ ಆಗುತ್ತದೆ ಎಂಬ ಕಾರಣಕ್ಕೆ ಇದೊಂದು ಉತ್ತಮ ಗುಣಮಟ್ಟದ ಅಮೂಲ್ಯವಾದ ಪುಸ್ತಕಎಂಬುವುದು ಅಕ್ಷರಶಃ ಸತ್ಯ ಸಂಗತಿ ,ಜೀವನದ ಹತ್ತಾರು ಅರ್ಥಗಳನ್ನು ಬಿಂಬಿಸುವ ಪ್ರಯತ್ನ ಈ ಪುಸ್ತಕದ ಹೂರಣ. ಸ್ವಾಭಾತ ಸ್ನೇಹಜೀವಿ, ಸರಳವಾದ ವಿಧಾನ ಅಳವಡಿಸಿಕೊಂಡ ಅದ್ಬುತ ಗಾಯಕರು ಅದ್ಭುತ ಇರುವರು. ನಾ ಕೇವಲ ಎರೆಡು ತಿಂಗಳ ಹಿಂದೆ ಗುರುಗಳಿಗೆ ಪರಿಚಯ ಆದ್ರೂ ಸಹ ಸಲಹೆಗಳನ್ನು ಸೂಚನೆಗಳನ್ನು ಪಡೆಯಲು ಆಗಾಗ ಮುಂದಾಗುವೆ. ಎಂದಿಗೂ ಯಾರೊಬ್ಬರ ಮನಸು ನೋಯಿಸದೆ ತನ್ನಷ್ಟಕ್ಕೆ ತಾನೇ ತಾನಾಗಿ ಇರುವ ಕಾರಣ ಶಾಂತಿಪ್ರಿಯವ್ಯಕ್ತಿ ಎನ್ನಬಹುದು. ಇಂಥ ಒಂದು ದೊಡ್ಡ ಪ್ರಮಾಣದ ಸಾಧನೆ ಮಾಡಲು ಕುಟುಂಬ ಸಮೇತ ಸಹಕಾರ ಅಷ್ಟೇ ಅಲ್ಲದೇ ಮುಖ್ಯವಾಗಿ ಸತಿಯ ಪಾತ್ರ ಮುಖ್ಯವಾಗುತ್ತದೆ. ಎಂಬುವುದು ಸತ್ಯ ಸಂಗತಿ.ಈ ಸಂದರ್ಭದಲ್ಲಿ ಗೊತ್ತಾಗುತ್ತದೆ. 💐 ಅಧ್ಯಕ್ಷೆ… ಕವಿತ ಮಳಗಿ ಕವಿಧ್ವನಿ ಸಾಹಿತಿಕ ಹಾಗೂ ಸಾಂಸ್ಕೃತಿಕ ಪ್ರತಿಷ್ಟಾನ.
ವರದಿ – ಮಹೇಶ ಶರ್ಮಾ