ಕಂಪ್ಲಿ ವಿಜಯನಗರ ಜಿಲ್ಲೆ ಸೇರ್ಪಡೆ ಪ್ರಕರಣಕ್ಕೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಕೊನೆಯ ಅವಕಾಶ, ಅಕ್ಟೋಬರ್ 7 ಕ್ಕೆ ವಿಚಾರಣೆ…..
ಬೆಂಗಳೂರು, ಆಗಸ್ಟ್ 26 : ಕಂಪ್ಲಿ ತಾಲೂಕನ್ನ ವಿಜಯನಗರ ಜಿಲ್ಲೆಗೆ ಸೇರ್ಪಡಿಸುವಂತೆ ಸಲ್ಲಿಸಲಾಗಿದ್ದ ಪಿಐಎಲ್ ನ ಪ್ರಕರಣ ನ್ಯಾಯಾಧೀಶರಾದ ಸತೀಶ್ ಚಂದ್ರ ಶರ್ಮಾ ಮತ್ತು ಸಚಿನ್ ಶಂಕರ್ ಮಗದುಮ್ ರವರನ್ನು ಒಳಗೊಂಡ ದ್ವಿಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿದ್ದು ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಆಕ್ಷೇಪಣೆಯನ್ನ ಸಲ್ಲಿಸದಿರುವ ಬಗ್ಗೆ ರಾಜ್ಯ ಸರ್ಕಾರವನ್ನು ಪ್ರಶ್ನಿಸಲಾಗಿದ್ದು ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ರಾಜ್ಯ ಸರ್ಕಾರಿ ವಕೀಲರು ಆಕ್ಷೇಪಣೆ ಸಲ್ಲಿಸಲು ನಾಲ್ಕು ವಾರಗಳ ಕಾಲ ಮತ್ತೊಮ್ಮೆ ಕಾಲಾವಕಾಶ ಕೋರಿದರು, ರಾಜ್ಯ ಸರ್ಕಾರದ ಮನವಿಯನ್ನ ಪುರಸ್ಕರಿಸಿದ ನ್ಯಾಯಾಲಯ ಕಳೆದ ವಿಚಾರಣೆಯಲ್ಲಿ ಈಗಾಗಲೇ ಕೊನೆಯ ಅವಕಾಶ ನೀಡಿದ್ದು ಮತ್ತೊಮ್ಮೆ ಕೊನೆಯ ಅವಕಾಶ ನೀಡುತ್ತಿದ್ದು ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಆದೇಶಿಸಿ ಅಕ್ಟೋಬರ್ 7 ಕ್ಕೆ ವಿಚಾರಣೆಯನ್ನ ನ್ಯಾಯಾಲಯವು ಮುಂದೂಡಲಾಯಿತು ಎಂದು ಪಿಐಎಲ್ ಅರ್ಜಿ ಸಲ್ಲಿಸಿದ್ದ ಅರ್ಜಿದಾರರಾದ ವಕೀಲ ಮೋಹನ್ ಕುಮಾರ್ ದಾನಪ್ಪ ತಿಳಿಸಿದರು ಕಂಪ್ಲಿ ತಾಲೂಕನ್ನು ವಿಜಯನಗರ ಜಿಲ್ಲೆಗೆ ಸೇರಿಸದೇ ಕೈ ಬಿಟ್ಟಿರುವುದನ್ನು ಪ್ರಶ್ನಿಸಿ ಸರ್ಕಾರದ ಅಧಿಸೂಚನೆಯನ್ನ ರದ್ದು ಪಡಿಸಿ ಕಂಪ್ಲಿ ತಾಲೂಕನ್ನು ವಿಜಯನಗರ ಜಿಲ್ಲೆಗೆ ಸೇರ್ಪಡಿಸುವಂತೆ ರಾಜ್ಯ ಹೈಕೋರ್ಟ್‌ನಲ್ಲಿ 2021 ಮಾರ್ಚ್ 10 ರಂದು ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಬಳ್ಳಾರಿ ಜಿಲ್ಲಾ ಗೌರವಾಧ್ಯಕ್ಷ ವಕೀಲ ಮೋಹನ್ ಕುಮಾರ್ ದಾನಪ್ಪ ಮತ್ತು ಕಂಪ್ಲಿ ತಾಲೂಕು ವಕೀಲರ ಬಳಗದ ಕಾರ್ಯಾಧ್ಯಕ್ಷರಾದ ಹಿರಿಯ ವಕೀಲ ಕೆ. ಪ್ರಭಾಕರ್ ರಾವ್ ಹಾಗೂ ಇತರರು ಸಾರ್ವಜನಿಕ ಹಿತಾಸಕ್ತಿ ಪಿಐಎಲ್ ಅರ್ಜಿಯನ್ನು ಸಲ್ಲಿಸಿದ್ದರು.
ವರದಿ – ಮಹೇಶ ಶರ್ಮಾ