ಹೋರಾಟದ ಜೀವನ
ಜೀವನ ಎನ್ನುವುದು ಶಾಶ್ವತವಲ್ಲ,
ಬಡತನ ಎನ್ನುವುದು ಶಾಪವಲ್ಲ,
ಶ್ರೀಮಂತಿಕೆ ಎನ್ನುವುದು ಕೊನೆಯತನಕವಲ್ಲ,
ಹೋರಾಟದ ಜೀವನ ನಿರಂತರ,
ನಿಸ್ವಾರ್ಥದ ಸೇವೆ, ಆತ್ಮವಿರೂ ತನಕ.
ಕಾಯಕ ಮಾಡುವ ಜೀವಕ್ಕೆ ಯಾವುದು ಅಡ್ಡಿಯಿಲ್ಲ,
ಬಡತನಕ್ಕೆ ಹೆದರದೆ – ಕುಗ್ಗದೆ ಮುಂದೆ ಸಾಗಲಿ ಹೋರಾಟದ ಜೀವನ.
ಬದುಕಿನ ಕಷ್ಟ – ನೋವುಗಳಿಗೆ ಎದೆಗುಂದದೆ,ಧೈರ್ಯದಿಂದ
ಸೋಲಿಗೆ ಗೆಲುವಿನ ರುಚಿ ತೋರಿಸಿ,
ಅಂಜದೆ,ಅಳಕದೆ,ಹಿಗ್ಗದೆ – ಕುಗ್ಗದೆ ಮುಂದಡೆ ಹೆಜ್ಜೆ ಹಾಕಿ,ಸೋಲೇ ಗೆಲುವಿನ ಮೆಟ್ಟಿಲು ಮಾಡಿ, ಹೋರಾಡು ಜೀವನದಲ್ಲಿ ಜೀವ ಇರುವ ತನಕ.
ಕಷ್ಟ ಬಂದಾಗ ಕಣ್ಣೀರ ಧಾರೆ ಬೇಡ,
ಸುಖ ಬಂದಾಗ ಅಹಂಕಾರ ಬೇಡ,
ಕಷ್ಟ – ಸುಖ ನಮ್ಮ ಜೀವನದ ಅವಿಭಾಜ್ಯ ಅಂಗ, ಸಮನಾಗಿ ಸ್ವೀಕರಿಸಿ, ಮುಂದೆ ಸಾಗು, ನಿರ್ಮಲ ಹೃದಯ ನಮ್ಮದಾಗಲಿ.
ಜೀವನದ ಹೋರಾಟ
ಮಾತ್ರ ನಿರಂತರವಾಗಿ ಸಾಗಲಿ.
ಐಶ್ವರ್ಯ – ಅಂತಸ್ತು ಇದ್ದಾಗ ಅಕ್ಕರೆಯ ಸಂಬಂಧ ಬೇಡ,
ಅಧಿಕಾರ ಇದ್ದಾಗ ಸ್ವಾರ್ಥ ಬೇಡ,
ಸರ್ವರನ್ನು ಪ್ರೀತಿಸಿ, ಸಂಕಷ್ಟ ಎದುರಿಸಿ,
ಜೀವನದ ಹೋರಾಟವನ್ನು ಯಶಸ್ವಿಯಾಗಿ ಮುನ್ನಡೆಸೋಣ.
ಸಂಗಮೇಶ ಎನ್ ಜವಾದಿ