ಕೊಟ್ಟೂರು:ವ್ಯಾಸಾಂಗ ವಿಷಯಕ್ಕೆ ಮನ ನೊಂದು ವಿದ್ಯಾರ್ಥಿ ನೇಣಿಗೆ ಶರಣು…
ಕೊಟ್ಟೂರು:ವ್ಯಾಸಂಗದ ವಿಚಾರವಾಗಿ ಪೋಷಕರೊಡನೆ ಜಗಳವಾಡಿ (24) ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಉಜ್ಜಿನಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಉಜ್ಜಿನಿ ಗ್ರಾಮದ ನಿವಾಸಿಯಾದ ಪೂಜಾ ಯು.ಎನ್ 24ವರ್ಷ ವಿದ್ಯಾರ್ಥಿನಿ ದಾವಣಗೆರೆ ಜಿಲ್ಲೆಯ ಜಗಳೂರಿನ ಸಿದ್ದಾರ್ಥ್ ಬಿಇಡಿ ಕಾಲೇಜಿನಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದು ಓದುತ್ತಿದ್ದ ಪೂಜಾ ಬಿಇಡಿ ವ್ಯಾಸಂಗ ಬಿಟ್ಟು ಪಿಎಚ್ಡಿ ಮಾಡುತ್ತೇನೆ ಎಂದು ಪೋಷಕರಲ್ಲಿ ಹೇಳಿಕೊಂಡಿದ್ದಾಳೆ. ಪೋಷಕರು ಮೊದಲು ಈ ವ್ಯಾಸಂಗ ಮುಗಿಸಿದ ನಂತರ ಮುಂದಿನ ವ್ಯಾಸಂಗ ಮಾಡು ಎಂದು ತಿಳಿ ಹೇಳಿದ್ದರಿಂದ ಬೇಸರಗೊಂಡ ಯುವತಿ ಪೂಜಾ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಸಂಬಂಧ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ – ಚಲುವಾದಿ ಅಣ್ಣಪ್ಪ