ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಸೋಮವಾರಪೇಟೆ ತಾಲ್ಲೂಕು ಘಟಕ ಮತ್ತು ಶನಿವಾರಸಂತೆ ಹೋಬಳಿ ಘಟಕ ಮತ್ತು ಗ್ರಾಮ ಘಟಕ ದಿಂದ ಮನವಿ ಮಾನ್ಯ ಜಿಲ್ಲಾಧಿಕಾರಿಯವರಿಗೆ
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಗೆ ಸೇರಿದ ರಾಮನಳ್ಳಿ ಗ್ರಾಮದ ನಿವಾಸಿ ಆರ್ .ಎಚ್ ಪುಟ್ಟಸ್ವಾಮಿ ತಂದೆಯ ಹೆಸರು ಹರವೆಗೌಡ ಎಂಬುವವರು ಹಿಂದೂ ಹೆಗ್ಗಡಿ ಗೌಡ ಜನಾಂಗಕ್ಕೆ ಸೇರಿರುತ್ತಾರೆ .ಆದರೆ ಮೇಲ್ಕಂಡ ವ್ಯಕ್ತಿಯು ಅದನ್ನು ತಿರುಚಿ ಅನುಸೂಚಿತ ಜಾತಿ /ಅನುಸೂಚಿತ ಬುಡಕಟ್ಟು ಪರಿಶಿಷ್ಟ ಪಂಗಡ (ಕುರುಬ ) ಪ್ರಮಾಣಪತ್ರವನ್ನು ದಿನಾಂಕ 10/7/ 2019 ರಂದು (RD0039123035064) ಸೃಷ್ಟಿಸಿ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡಿರುತ್ತಾರೆ .ಈ ವ್ಯಕ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಪಾಲಪುರ ಮತ್ತು ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ಶನಿವಾರಸಂತೆ ವಿಭಾಗದಲ್ಲಿ ವಿದ್ಯಾಭ್ಯಾಸ ಶಾಲಾ ದಾಖಲಾತಿಯ ಪ್ರಕಾರ ಹಿಂದೂ ಹೆಗ್ಗಡಿಗೌಡ ಎಂದು ದಾಖಲೆಯಾಗಿರುತ್ತದೆ .ನಂತರ ಈ ವಿಷಯಕ್ಕೆ ಸಂಬಂಧಿಸಿದಂತೆ ಕರವೇ ಕಾರ್ಯಕರ್ತರು ಮಾಹಿತಿ ಹಕ್ಕು ಅಡಿಯಲ್ಲಿ ಅಪಾರ ಜಿಲ್ಲಾಧಿಕಾರಿ ಯವರನ್ನು ಹಿಂದೂ ಹೆಗ್ಗಡಿ ಗೌಡ ಪರಿಶಿಷ್ಟ ಜಾತಿ ವರ್ಗಕ್ಕೆ ಸೇರುತ್ತದೆಯೋ ಎಂದು ಕರವೇ ಕಾರ್ಯಕರ್ತರು ಕೇಳಿಕೊಂಡಗ ಆ ಮಾಹಿತಿಗೆ ಉತ್ತರವಾಗಿ ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಕೊಡಗು ಜಿಲ್ಲೆ. ಮಡಿಕೇರಿ ಇವರ ಮೂಲಕ ಪರಿಶಿಷ್ಟ ಜಾತಿ / ವರ್ಗಗಳ ಜಾತಿ ಪಟ್ಟಿಯಲ್ಲಿ ಹಿಂದೂ ಹೆಗ್ಗಡಿ ಗೌಡ ಎಂಬ ಜಾತಿಯು ಇರೋದಿಲ್ಲ ಎಂದು ದೃಢಪಡಿಸುತ್ತಾರೆ .ಆದುದರಿಂದಈ ನಮ್ಮ ಮನವಿಯನ್ನು ಪರಿಶೀಲಿಸಿ ಸುಳ್ಳು ಜಾತಿ ಪ್ರಮಾಣಪತ್ರ ಮಾಡಿಸಿರುವ (RD0039123035064) ಜಾತಿ ಪ್ರಮಾಣ ಪತ್ರವನ್ನು ಅಮಾನ್ಯ ಮಾಡಬೇಕು ಹಾಗೂ ಆರ್ .ಎಚ್ ಪುಟ್ಟಸ್ವಾಮಿ ಮತ್ತು ಅರ್ಜಿ ಸಲ್ಲಿಸಿದ ಸಮಯದಲ್ಲಿ ಕರ್ತವ್ಯ ನಿರ್ವಹಿಸಿದ *ಗ್ರಾಮ ಲೆಕ್ಕಿಗರಾದ ಜಾಟ್ಟಪ್ಪ ಮತ್ತು ಕಂದಾಯ ಪರಿವೀಕ್ಷಕರಾದ ನಂದಕುಮಾರ್ ಇವರು ಜಾತಿ ಪ್ರಮಾಣ ಪತ್ರವನ್ನು ಪರಿಶೀಲಿಸದೆ ಜಾತಿ ಪ್ರಮಾಣ ಪತ್ರವನ್ನು ಮಾನ್ಯ ಮಾಡಿರುತ್ತಾರೆ . ಈ ಮೂವರು ಮೇಲೆ ತಾವು ಕೂಡಲೇ ಕ್ರಮ ತೆಗೆದುಕೊಂಡು ಈ ಮೂವರು ಮೇಲೆ ತಾವುಗಳು ಕೂಡಲೇ ಕ್ರಮ ತೆಗೆದುಕೊಂಡು ಸರ್ಕಾರಿ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾಗೊಳಿಸಿ ಆದೇಶಿಸಬೇಕು . ಹಾಗೂ ಇವರು ಕರ್ತವ್ಯದಲ್ಲಿ ಇರುವ ಸಮಯದಲ್ಲಿ ಮಾನ್ಯ ಮಾಡಿರುವ ಎಲ್ಲಾ ಜಾತಿ ಪ್ರಮಾಣಪತ್ರವನ್ನು ಮರು ಪರಿಶೀಲನೆ ಮಾಡಬೇಕು ಮತ್ತುಇವರು ಕರ್ತವ್ಯ ದಲ್ಲಿ ಇರುವ ಸಮಯದಲ್ಲಿ ಇವರುಗಳು ಕರ್ತವ್ಯದಲ್ಲಿರುವಾಗ ಹಲವಾರು ಜನರಿಗೆ ಹೀಗೆ ಜಾತಿ ಪ್ರಮಾಣಪತ್ರ ಮಾಡಿಕೊಟ್ಟಿರುತ್ತಾರೆ ಎಂದು ನಮ್ಮ ಕರವೇ ಸಂಘಟನೆಯ ಗಮನಕ್ಕೆ ಬಂದಿರುತ್ತದೆ .ಈಗಾಗಲೇ ಸುಳ್ಳು ಜಾತಿ ಪ್ರಮಾಣ ಪತ್ರ ಮಾಡಿಸಿಕೊಂಡಿರುವ
ಆರ್ .ಎಚ್ ಪುಟ್ಟಸ್ವಾಮಿ ರವರು ವ್ಯವಸಾಯ ಕೃಷಿ ಪತ್ತಿನ ಸಹಕಾರಿ ಸಂಘದ 2019 ಸಾಲಿನಲ್ಲಿ ಅನುಸೂಚಿತ ಜಾತಿಯ ಪ್ರಮಾಣ ಪತ್ರ ಇಟ್ಟುಕೊಂಡು ಚುನಾವಣೆಗೆ ಸ್ಪರ್ಧೆ ಮಾಡಿರುತ್ತಾರೆ . ಮತ್ತು ಕರ್ನಾಟಕ ಸರ್ಕಾರದ ಹಲವು ಇಲಾಖೆಯಲ್ಲಿ ಈ ಜಾತಿ ಪ್ರಮಾಣ ಪತ್ರವನ್ನು ಬಳಸಿ ಆರ್ಥಿಕ ಉಪಯೋಗ ಪಡೆದುಕೊಂಡಿರುತ್ತಾರೆ .ಇದುವರೆಗೂ ಈ ಜಾತಿ ಪ್ರಮಾಣ ಪತ್ರವನ್ನು ಬಳಸಿ ಆರ್ಥಿಕ ಉಪಯೋಗ ಪಡೆದುಕೊಂಡಿರುತ್ತಾರೆ .ಇದುವರೆಗೂ ಪಡೆದುಕೊಂಡಿರುವ ಎಲ್ಲ ಸವಲತ್ತುಗಳನ್ನು ತಾವುಗಳು ಹಿಂದಕ್ಕೆ ಪಡೆಯಬೇಕು ಮತ್ತು ಇವರುಗಳು ಮಾಡಿದ ತಪ್ಪಿಗೆ ತಾವುಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಕರವೇ ಕಾರ್ಯಕರ್ತರಿಂದ ಮನವಿ ಮಾಡಿಕೊಳ್ಳುತ್ತಿದ್ದೇವೆ . ಇಂತಹ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವುದರಿಂದ ನಿಜವಾದ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳು ಕೈ ಸೇರದ ಪರಿ ಸ್ಥಿತಿ ನಿರ್ಮಾಣವಾದಂತಾಗಿದೆ . 1 ವೇಳೆ ಈ ಮನವಿಗೆ ಸ್ಪಂದನೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ಕರವೇ ಕಾರ್ಯಕರ್ತರಿಂದ ಜಿಲ್ಲಾಧಿಕಾರಿಗಳ ರವರ ಕಚೇರಿ ಮುಂದೆ ನಮ್ಮ ಮನವಿಗೆ ನ್ಯಾಯ ಸಿಗುವ ವರೆಗೂ ಹೋರಾಟ ಮಾಡಲಾಗುವುದೆಂದು ಕರವೇ ವೇದಿಕೆಯಿಂದ ತಿಳಿಸಲಾಗುತ್ತಿದೆ .
ಬಿ ಫ್ರಾನ್ಸಿಸ್ ಡಿಸೋಜಾ ತಾಲ್ಲೂಕು ಅಧ್ಯಕ್ಷರು ಸೋಮವಾರಪೇಟೆ ಫೋನ್ ನಂಬರ್ 9449255831 9686095831
ದಾಖಲೆಗಳು ಲಗತ್ತಿಸಿರುವುದು
1) ಉಪನಿರ್ದೇಶಕರ ಕಚೇರಿ ಸಮಾಜ ಕಲ್ಯಾಣ ಕೊಡಗು ಜಿಲ್ಲೆ ಮಡಿಕೇರಿ ಇವರ ಮಾಹಿತಿ ಹಕ್ಕು ಅಧಿನಿಯಮ 2005 ಅಡಿ ಮಾಹಿತಿ ಒದಗಿಸಿರುವ ಬಗ್ಗೆ
2) ಅನುಸೂಚಿತ ಜಾತಿ /ಅನುಸೂಚಿತ ಬುಡಕಟ್ಟು ಜಾತಿ ಪ್ರಮಾಣ ಪತ್ರ
3) ಪ್ರಾಂಶುಪಾಲರ ಕಚೇರಿ ಪದವಿ ಪೂರ್ವ ಕಾಲೇಜಿನ ವ್ಯಾಸಂಗ ದಾಖಲಾತಿ ಪ್ರಮಾಣ ಪತ್ರ
4) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಪಾಲಪುರ ಶಾಲೆಯ ವ್ಯಾಸಂಗ ಪ್ರಮಾಣ ಪತ್ರ
5)ಸಮಾಜ ಕಲ್ಯಾಣ ಇಲಾಖೆಯ ಅನುಸೂಚಿತ ಅಡಿಯಲ್ಲಿ ಬರುವ ಜಾತಿಗಳ ಪಟ್ಟಿಯ ವಿವರ .. ಈ ದಿನ ಅಂದರೆ 1/9/2021 ರ ಸಂಜೆ 4ಗಂಟೆಗೆ ಶನಿವಾರಸಂತೆ ಕಂದಾಯ ಇಲಾಖೆಗೆ ಕರವೇ ಕಾರ್ಯಕರ್ತರಿಂದ ಸುಳ್ಳು ಜಾತಿ ಪ್ರಮಾಣಪತ್ರ ಮಾಡಿಸಿಕೊಂಡಿರುವ ಬಗ್ಗೆ ಮತ್ತು ಮಾಡಿ ಕೊಟ್ಟಿರುವ ಅಧಿಕಾರಿಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಕಂದಾಯ ವೀಕ್ಷಕರ ಮುಖಾಂತರ ಕೊಡಗು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಇರುತ್ತೇವೆ ಈ ಸಂದರ್ಭದಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ರು ಫ್ರಾನ್ಸಿಸ್ ಡಿಸೋಜ ಮಾತನಾಡಿ ಸುಳ್ಳು ಜಾತಿ ಪ್ರಮಾಣಪತ್ರ ಮಾಡಿಸಿಕೊಂಡಿರುವ ಆರ್ ಎಚ್ ಪುಟ್ಟಸ್ವಾಮಿ ಇವರ ಮೇಲೆ ಸರಿಯಾದ ಕಾನೂನು ಕ್ರಮ ಕೈಗೊಳ್ಳಬೇಕು ಇವರಿಗೆ ಸರಿಯಾದ ಶಿಕ್ಷೆ ಆಗಬೇಕೆಂದು ಮತ್ತು ಸುಳ್ಳು ಜಾತಿ ಪ್ರಮಾಣ ಪತ್ರಕ್ಕೆ ಅನುಮೋದನೆ ನೀಡಿದ ಆಗಿನ ಕಂದಾಯ ಅಧಿಕಾರಿಗಳಿಗೆ ಸರಿಯಾದ ಶಿಕ್ಷೆ ಆಗಬೇಕು ಮತ್ತು ಅವರ ಕೆಲಸದಿಂದ ವಜಾ ಆಗಬೇಕೆಂದು ಮನವಿ ಮಾಡಿಕೊಂಡಿರುತ್ತಾರೆ . ಮತ್ತು 1ವೇಳೆ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಕರವೇ ಕಾರ್ಯಕರ್ತರಿಂದ ಹೋರಾಟ ಹಮ್ಮಿಕೊಳ್ಳಲಾಗುವುದುತಿಳಿಸಿರುತ್ತೇವೆ .. ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ರಾದ ಫ್ರಾನ್ಸಿಸ್ ಡಿಸೋಜಾ ಮತ್ತು ಕರವೇ ತಾಲ್ಲೂಕು ಕಾರ್ಯದರ್ಶಿ ರಾಮನಲ್ಲಿ ಪ್ರವೀಣ್ ಮತ್ತು ರಾಮನಳ್ಳಿ ಗ್ರಾಮ ಘಟಕದ ಅಧ್ಯಕ್ಷರಾದ ಹರೀಶ್ ರವರು ಮತ್ತು ಕರವೇ ಕಾರ್ಯಕರ್ತರಾದ ರಾಜಣ್ಣ ನವರು ಉಪಸ್ಥತರಿದ್ದರು .
ವರದಿ – ಸಂಪಾದಕೀಯ