ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಬೀದರ್ ಜಿಲ್ಲಾ ಘಟಕ ಹಾಗೂ ಕರುನಾಡು ಸಾಹಿತ್ಯ ಪರಿಷತ್ತು ಬೀದರ ಜಿಲ್ಲಾ ಘಟಕಗಳು ತೀವ್ರವಾಗಿ ಖಂಡನೆ : ಸಂಗಮೇಶ ಎನ್ ಜವಾದಿ.
ಕಲ್ಯಾಣ ಕರ್ನಾಟಕ ಜಾನಪದ,ಸಂಗೀತ,ಸಾಹಿತ್ಯ, ನಾಡು, ನುಡಿ, ಜಲ – ನೆಲ, ಭಾಷೆ, ಗಡಿ ಹಾಗೂ ಸಾಮಾಜಿಕವಾಗಿ ಈ ನಮ್ಮ ಭಾಗದ ಹಲವು ಸಮಸ್ಯೆಗಳು ಸೇರಿದಂತೆ ನಮ್ಮ ವೈವಿಧ್ಯಮಯ ಜೀವನದ ವಿಚಾರಗಳನ್ನು ನಾಡಿನಾದ್ಯಂತ ಬಿತ್ತರಿಸುವ ಕಾಯಕದಲ್ಲಿ ನಿರಂತರವಾಗಿದ್ದ ಕಲಬುರಗಿಯ ದೂರದರ್ಶನ ಕೇಂದ್ರವನ್ನು ಇದೀಗ ಮುಚ್ಚುವ ಹುನ್ನಾರ ಮಾಡಿರುವ ಕೇಂದ್ರ ಸರಕಾರದ ಧೋರಣೆಯನ್ನು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಬೀದರ್ ಜಿಲ್ಲಾ ಘಟಕ ಹಾಗೂ ಕರುನಾಡು ಸಾಹಿತ್ಯ ಪರಿಷತ್ತು ಬೀದರ ಜಿಲ್ಲಾ ಘಟಕಗಳು ತೀವ್ರವಾಗಿ ಖಂಡಿಸುತ್ತವೆ ಎಂದು ಸಾಹಿತಿ, ಪರಿಸರ ಪ್ರೇಮಿ ಹಾಗೂ ಪರಿಷುತ್ತುಗಳ ಬೀದರ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಸಂಗಮೇಶ ಎನ್ ಜವಾದಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದೂರದರ್ಶನ ನೌಕರರ ವರ್ಗಾವಣೆ ಮಾಡುವ ಮೂಲಕ ಕೇಂದ್ರದ ಕೆಲಸ ಕಾರ್ಯವನ್ನು ಸ್ಥಗಿತಗೊಳಿಸುವ ಹುನ್ನಾರವನ್ನು ಸಾರಸ್ವತಲೋಕ ಹಾಗೂ ಕಲ್ಯಾಣ ಕರ್ನಾಟಕದ ಜನತೆ ಒಮ್ಮದಿಂದ ಖಂಡಿಸುವ ಮೂಲಕ ಹೋರಾಟಕ್ಕೆ ಮುಂದಾಗುವಂತೆ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಬೀದರ್ ಜಿಲ್ಲಾ ಘಟಕ ಹಾಗೂ ಕರುನಾಡು ಸಾಹಿತ್ಯ ಪರಿಷತ್ತು ಬೀದರ ಜಿಲ್ಲಾ ಘಟಕಗಳು ಕಲ್ಯಾಣ ಕರ್ನಾಟಕದ ವಿವಿಧ ಸಮಾಜಿಕ, ಶೈಕ್ಷಣಿಕ, ಸಾಹಿತ್ಯ, ಸಂಸ್ಕೃತಿಗಳ ಸಂಘಟನೆಗಳಲ್ಲಿ ವಿನಮ್ರವಾದ ಮನವಿಯನ್ನು ಮಾಡಿಕೊಳುತ್ತಾ, ಶಾಂತಿಯುತ ಹೋರಾಟಕ್ಕೆ ಕರೆಯನ್ನು ಕೊಡುತ್ತಿದೆ. ಆದಕಾರಣ ಕೇಂದ್ರ ಸರ್ಕಾರ ಮಾಡಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ವರ್ಗಾವಣೆ ಮಾಡಿರುವ ನೌಕರರನ್ನು ಪುನಃ ಇದೆ ಸ್ಥಳಕ್ಕೆ ನಿಯುಕ್ತಿ ಮಾಡುವ ಮೂಲಕ ಕಲಬುರಗಿ ದೂರದರ್ಶನ ಕೇಂದ್ರದ ತನ್ನ ಹಳೆಯ ವೈಭವಕ್ಕೆ ಮರಳುವಂತೆ ಹಾಗೂ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆದುಕೊಳ್ಳುವಂತೆ ನೋಡಿಕೊಳ್ಳಬೇಕೆಂದು ಈ ಮೂಲಕ ಒತ್ತಾಯಿಸಿ, ಆಗ್ರಹಪಡಿಸುತ್ತಿದ್ದೇವೆ.
ವರದಿ – ಅಮಾಜಪ್ಪ ಹೆಚ್.ಜುಮಾಲಾಪೂರ