ಅಥಣಿ, ಧರಣಿ ಸತ್ಯಾಗ್ರಹದ ಪೂರ್ವಭಾವಿ ಸಭೆ..
ಇವತ್ತು ಭಾರತೀಯ ಕಿಸಾನ್ ಸಂಘ -ಅಥಣಿ ಘಟಕದಿಂದ ತಾಲೂಕಾ ಪ್ರಮುಖರ ಭೈಠಕ್ ಕರೆಯಲಾಗಿತ್ತು, ಕಾರಣ 7 & 8 ಆಗಸ್ಟ್ 2021 ರಂದು ನಡೆದ ಸಂಘದ ಅಖಿಲ ಭಾರತೀಯ ಮಟ್ಟದ ಪ್ರತಿನಿಧಿ ಸಭೆಯಲ್ಲಿ ನಿರ್ಣಯಿಸಿದ ಹಾಗೆ, 8 ಸೆಪ್ಟೆಂಬರ್ 2021 ರಂದು ಚಿಕ್ಕೋಡಿ ವಿಭಾಗಮಟ್ಟದ ಅಧಿಕಾರಿಗಳಾದ ಚಿಕ್ಕೋಡಿ AC ಅಧಿಕಾರಿಗಳ ಕಛೇರಿ ಎದುರಿಗೆ 11 ಗಂಟೆಗೆ ಧರಣಿ ಮಾಡಲು ನಿಶ್ಚಯಿಸಲಾಗಿದೆ, ದೇಶದ ರೈತರ “ಬೆಳೆಗಳಿಗೆ ಲಾಭದಾಯಕ ಬೆಲೆ” ಘೋಸಿಸಬೇಕೆಂದು ಆ ದಿನ ಧರಣಿ ಮಾಡುವ ಮುಕಾಂತರ ಪ್ರಧಾನ ಮಂತ್ರಿಗಳಿಗೆ ಸಂಘದಿಂದ AC ಅಧಿಕಾರಿಯವರ ಮುಕಾಂತರ ಪತ್ರ ರವಾನಿಸಲಾಗುವದು.ಎಲ್ಲಾ ಕಿಸಾನ್ ಸಂಘದ ಕಾರ್ಯಕರ್ತರು ಸೆಪ್ಟೆಂಬರ್ 08 ರಂದು ಬರಬೇಕು ಎಂದು ಪತ್ರಿಕಾ ಮಾಧ್ಯಮದ ಮೂಲಕ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ. ನಮ್ಮ ಬೇಡಿಕೆಗೆ ಸಂದಿಸಬೇಕು ಎಂಬುದು ಕಿಸಾನ್ ಸಂಘದ ಪ್ರಮುಖ ಬೇಡಿಕೆಯಾಗಿದೆ. ಚಿಕ್ಕೋಡಿ ವಿಭಾಗದ 6 ತಾಲೂಕಿನ ಎಲ್ಲಾ ರೈತರಿಗೆ ಧರಣಿಯಲ್ಲಿ ಭಾಗಿಯಾಗಲು ಕರೆ ನೀಡಲಾಗಿದೆ.ಭರಮು ನಾಯಿಕ (ಭಾರತೀಯ ಕಿಸಾನ್ ಸಂಘದ ಅಥಣಿ ತಾಲೂಕಾ ಕಾರ್ಯದರ್ಶಿ )
ವರದಿ – ಮಹೇಶ ಶರ್ಮಾ