ಯುವಕರಿಗೆ ಮಾದರಿ ಮೋಹನ್ ಕುಮಾರ್ ದಾನಪ್ಪ – ಶಾಸಕ ನೆಹರು ಸಿ ಓಲೇಕಾರ…
ಬೆಂಗಳೂರು: ಸೆಪ್ಟೆಂಬರ್ 2, ಆಗಸ್ಟ್ 15 ಧ್ವಜಾರೋಹಣ ದಿನದಂದು ಸೈರನ್ಸ್ ಫಿಟ್ನೆಸ್ ಕ್ಲಬ್ ಆಯೋಜಿಸಿದ್ದ ವರ್ಚುಯಲ್ ಓಟದ ಕಾರ್ಯಕ್ರಮದಲ್ಲಿ 10 ಕಿಲೋ ಮೀಟರ್ ವಿಭಾಗದಲ್ಲಿ ಹೈ ಕೋರ್ಟ್ ನ ಕೇಂದ್ರ ಸರ್ಕಾರಿ ವಕೀಲರು ಹಾಗೂ ಹವ್ಯಾಸಿ ಮ್ಯಾರಥಾನರ್ ಮೋಹನ್ ಕುಮಾರ್ ದಾನಪ್ಪನವರು ಭಾಗವಹಿಸಿ 55 ನಿಮಿಷದಲ್ಲಿ ಪೂರ್ಣಗೊಳಿಸಿ ಪಡೆದ ಪ್ರಮಾಣ ಪತ್ರ ಮತ್ತು ಪದಕವನ್ನ ಹಾವೇರಿ ಶಾಸಕರು ಹಾಗೂ ಕರ್ನಾಟಕ ಅನೂಸೂಚಿತ ಜಾತಿ, ಅನೂಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ನೆಹರು ಸಿ ಓಲೇಕಾರ್ ರವರು ಪ್ರಮಾಣ ಪತ್ರ ಮತ್ತು ಪದಕ ತೊಡಿಸಿ ಪ್ರಶಂಸಿದರು, ನಂತರ ಮಾತಾನಾಡಿದ ಹಾವೇರಿ ಶಾಸಕರಾದ ನೆಹರು ಓಲೇಕಾರ ರವರು “ಈಗೀನ ಯುವಕರು ಅನ್ಯ ಚಟಗಳಿಗೆ ದಾಸರಾಗಿ ಮಧ್ಯ ವಯಸ್ಸಿನಲ್ಲೇ ಇತರೆ ರೋಗಗಳಿಗೆ ತುತ್ತಾಗುತ್ತಿರುವುದು ನೋವಿನ ಸಂಗತಿಯಾಗಿದ್ದು ಕಳೆದ ತಿಂಗಳು ಧ್ವಜಾರೋಹಣ ದಿನದಂದು ಫಿಟ್ನೆಸ್ ಕ್ಲಬ್ ಆಯೋಜಿಸಿದ್ದ ವರ್ಚುಯಲ್ ಓಟದಲ್ಲಿ 10 ಕಿಲೋ ಮೀಟರ್ ದೂರದಷ್ಟು ದೇಶದ ಬಾವುಟ ಹಿಡಿದುಕೊಂಡು ಓಡಿ ದೇಶ ಪ್ರೇಮ ಮೆರೆದಿದ್ದಲ್ಲದೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದ ನಮ್ಮ ಛಲವಾದಿ ಸಮಾಜದ ಯುವಕ ಮೋಹನ್ ಕುಮಾರ್ ದಾನಪ್ಪ ತನ್ನ ಸೃಜನಶೀಲತೆಯಿಂದ ಸದಾ ಒಂದಲ್ಲೊಂದು ಕಾರ್ಯಚಟುವಟಿಕೆಯಲ್ಲಿ ತೊಡಗಿ ಯುವಕರಿಗೆ ಮಾದರಿಯಾಗಿದ್ದಾರೆ, ಯುವಕರು ಅನ್ಯ ಚಟಗಳಿಗೆ ಬೀಳದೆ ಸಧೃಡ ಆರೋಗ್ಯ, ಸಧೃಡ ದೇಹ ಹೊಂದುವಂತೆ” ಕರೆ ನೀಡಿದರು. ವರದಿ – ಮಹೇಶ ಶರ್ಮಾ