ಕೂಡ್ಲಿಗಿ ಅಕ್ರಮ ಮದ್ಯ ಸಾಗಾಣಿಕೆ:ಮನವಿಗೆ ಸ್ಪಂಧಿಸಿದ ಅಭಕಾರಿ ಅಧಿಕಾರಿಗಳು-

Spread the love

ಕೂಡ್ಲಿಗಿ ಅಕ್ರಮ ಮದ್ಯ ಸಾಗಾಣಿಕೆ:ಮನವಿಗೆ ಸ್ಪಂಧಿಸಿದ ಅಭಕಾರಿ ಅಧಿಕಾರಿಗಳು

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ,ಅಕ್ರಮ ಮದ್ಯ ಹಾಗೂ ಮಟ್ಕಾ ಜೂಜು ಎಗ್ಗಿಲ್ಲದೇ ಜರುಗುತ್ತಿದೆ ಹಾಗೂ ಅಕ್ರಮ ಮದ್ಯ ಸಾಗಾಣಿಕೆ ಜರುಗುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು.ಕೂಡ್ಲಿಗಿ ಅಖಿಲ ಭಾರತ ಜನವಾದಿ ಸಂಘಟನೆ ದೂರಿತ್ತು,ಈ ಸಂಬಂದಿಸಿದಂತೆ ಪದಾಧಿಕಾರಿಗಳು ತಹಶಿಲ್ದಾರರಿಗೆ  ಸೂಕ್ತ ಕ್ರಮಕ್ಕಾಗಿ ಆ 26ರಂದು ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿರುವ ಕೂಡ್ಲಿಗಿ ಅಬಕಾರಿ ನಿರೀಕ್ಷಕರು,ಜಿಲ್ಲಾ ಅಬಕಾರಿ ಉಪವಿಭಾಗದ ಅಧೀಕ್ಷಕರಿಗೆ ಸೂಕ್ತ ಕ್ರಮಕ್ಕೆ ಕೋರಿ ಮನವಿ ಸಲ್ಲಿಸಿದ್ದಾರೆ.ಈ ಕುರಿತು ಸಿಐಟಿಯು ಮುಖಂಡ ಗುನ್ನಳ್ಳಿ ರಾಘವೇಂದ್ರ ಖಚಿತ ಪಡಿಸಿದ್ದಾರೆ, ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆಗಳಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಸಾಗಾಣಿಕೆ. ಹಾಗೂ ಮಟ್ಕಾ ಜೂಜು ಎಗ್ಗಿಲ್ಲದೇ ಜರುಗುತ್ತಿದೆ ಎಂದು ಸಿಐಟಿಯು ಮುಖಂಡ ಗುನ್ನಳ್ಳಿ ರಾಘವೇಂದ್ರ, ಜನವಾದಿ ಸಂಘಟನೆ ಕಾರ್ಯದರ್ಶಿ ಲಕ್ಷ್ಮೀದೇವಿ ನೇತೃತ್ವದಲ್ಲಿ ತಹಶಿಲ್ದಾರರಿಗೆ ಒತ್ತಾಯಿಸಿದ್ದರು. ಜನವಾದಿ ಸಂಘಟನೆ ಪದಾಧಿಕಾರಿಗಳು ಅಕ್ರಮ ನಿಯಂತ್ರಿಸುವಂತೆ ಅವರು ಅಧಿಕಾರಿಗಳಿಗೆ ಆಗ್ರಹಿಸಿದ್ದರು.ಈ ಸಂದರ್ಭದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ವರದಿ – ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Leave a Reply

Your email address will not be published. Required fields are marked *