-ಆರೋಪ*ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೇಕೊಟೆ ಗ್ರಾಪಂ ಕಚೇರಿ ಲಂಚಬಾಕರ ಕೂಪವಾಗಿದೆ, ಹೀಗೆಂದು ಗ್ರಾಮಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ ಸಂಬಂಧಿಸಿದಂತೆ ಗ್ರಾಮಸ್ಥರು ಅಗತ್ಯ ದಾಖಲು ಸಮೇತ ಆರೋಪಿಸಿದ್ದಾರೆ. ಗ್ರಾಪಂ ಕಚೇರಿಯಲ್ಲಿ ಮದ್ಯವರ್ತಿಗಳದ್ದೇ ದರ್ಭಾರು,ಪುಂಡ ಪುಡಾರಿ ರಾಜಕಾರಣಿಗಳದ್ದೇ ದರ್ಭಾರು ಎಂಬ ಆರೋಪ ಪ್ರತಿಧ್ವನಿಸುತ್ತಿದೆ. ಪ್ರತಿಯೊಂದಕ್ಕೂ ಹಣ ಕೊಡಬೇಕಂತೆ ಇಲ್ಲವಾದಲ್ಲಿ ಆನಗತ್ಯ ತಿರುಗಾಟ, ಎಲ್ಲದಕ್ಕೂ ಲಂಚ ಲಂಚ, ಪ್ರತಿ ದಾಖಲಾತಿಗೆ ಇಂತಿಷ್ಟು ಅಂತ ನಿಗಧಿ ಮಾಡಲಾಗಿದೆಯಂತೆ ಎಂದು.ಭ್ರಷ್ಠಾಚಾರ ಹೆಚ್ಚಾಗಲು ಭ್ರಷ್ಠ ಅಧಿಕಾರಿಗಳು ಹಾಗೂ ಭ್ರಷ್ಠ ಜನಪ್ರತಿನಿಧಿಗಳು ಕಾರಣ ಎನ್ನಲಾಗುತ್ತಿದೆ, ಈ ಆರೋಪಕ್ಕೆ ಪೂರಜವಾದ ಸಾಕ್ಷಿ ಪುರಾವೆಗಳ ಸಮೇತ ಸಾರ್ವಜನಕ ಹಿತಾಸಕ್ತಿಯ ಮೇರೆಗೆ ಕೆಲವರು, ಗುಡೇಕೋಟೆ ಗ್ರಾಮ ಸೇರಿದಂತೆ ನೆರೆ ಹೊರೆಯ ಗ್ರಾಮಸ್ಥರು.ಕೆಲ ಸಂಘಟನೆ ಪದಾಧಿಕಾರಿಗಳು ಅಗತ್ಯ ಸಾಕ್ಷಿ ಪುರಾವೆಗಳೊಂದಿಗೆ, ಹೇಳಿಕೆ ನೀಡಿದ್ದು ದಾಖಲುಗಳ ಸಮೇತ ದೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಂ ಪಂ ಕೆಲ ಸಿಬ್ಬಂದಿ ಕೆಲವೊಮ್ಮೆ ಸಾರ್ವಜನಿಕರೊಂದಿಗೆ ಪಂಡಾಟಿಕೆಯಿಂದ ದುಂಡಾವರ್ತೆನೆಯಿಂದ ವರ್ತಿಸುತ್ತಾರೆ.ಇದಕ್ಕೆಲ್ಲಾ ಕಾರಣ ತಾವು ಪಕ್ಕಾ ಲೋಕಲ್ಲು ಶಾಸಕರು ಗೊತ್ತು, ಎಂಪಿ ಗೊತ್ತು ಜಡ್ಪಿ ಸದಸ್ಯರು ನಮ್ಮವರು. ಇತ್ಯಾದಿಯಾಗಿ ತಮಗೆ ತಾವೇ ಹೇಳಿಕೊಂಡು ಬೊಬ್ಬೆ ಹೊಡೆದುಕೊಳ್ಳುತಿದ್ದಾರೆಂದು, ಅವರಿಂದ ನಿಂದನೆಗೆ ಹಾಗೂ ಅಪಮಾನಕ್ಕೊಳಗಾದವರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಸಂಬಂಧಿಸಿದಂತೆ ಇಓ ರವರಿಗೆ ಸಾಕಷ್ಟು ಬಾರಿ ಹೇಳಿಯಾಗಿದೆ ಆದರೆ ಪ್ರಯೋಜವಾಗಿಲ್ಲ. ಅವರೂ ಮೌನ ಸಮ್ಮತಿಯನ್ನ ಅವರಿಗೇ ನೀಡಿದ್ದಾರೆ ಅದಕ್ಕಾಗಿ ಮೂಕ ಬಸವಣ್ಣನಂತೆ ವರ್ತಿಸುತಿದ್ದಾರೆ,ಇದು ಅವರ ಅಸಹಾಯಕತೆಗೆ ಸಾಕ್ಷಿಯಾಗಿದೆ ಎಂದು ಕೆಲ ಸಂಘಟನೆಕಾರರು ದೂರಿದ್ದಾರೆ.ಇವರ ಲಂಚದಲ್ಲಿ ಅವರದು ಪಾಲಿದೆನಾ ಇಲ್ಲವಾ..!? ಆ ದೇವರಿಗೇ ಗೊತ್ತು, ಸಿಬ್ಬಂದಿಯರು ರಾಜಾ ರೋಷವಾಗಿ ಹೋಟರಲ್ ನಲ್ಲಿ ಧರ ಪಟ್ಟಿ ಹಾಕಿರುವಂತೆ, ಇದಕ್ಕೆ ಇಷ್ಟು ಎಂಬಂತೆ ದಾಖಲುಗಳಿಗೆ ತಕ್ಕ ಹಾಗೇ ದರ ಪಟ್ಟಿತರ ಲಂಚ ನಿಗಧಿ ಮಾಡಿದಂದಾರಂತೆ ಎಂದು ಗ್ರಾಮಸ್ಥರು ದೂರಿದ್ದಾರೆ. ಲಂಚದಲ್ಲಿ ಮೇಲಾಧಿಕಾರಿಗಳ ಪಾಲಿದೆ ಎಂದು ಗೊಣಗುಡುತ್ತಾರಂತೆ ಲಂಚಕೋರರು,ಇದೆಷ್ಟು ಸತ್ಯ ಮಿತ್ಯವೋ ಕೂಡ್ಲಿಗಿ ಇಓ ಜಿ.ಎಂ.ಬಸಣ್ಣರವರೇ ಹೇಳಬೇಕಿದೆ ಎಂದು. ಗ್ರಾಮಸ್ಥರು ಇಓ ಜಿ.ಎಂ.ಬಸಣ್ಣನವರ ಪ್ರಾಮಾಣಿಕತೆ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಜಿ.ಎಂ.ಬಸಣ್ಣನವರು ನಿಜವಾಗಲೂ ದಕ್ಷ ಅಧಿಕಾರಿಗಳಾಗಿದ್ದು ಅವರು ಶೀಘ್ರವೇ ಖುದ್ದು ಗುಡೇಕೋಟೆ ಗ್ರಾಪಂ ನಲ್ಲಿರುವ ಹೆಗ್ಗಣಗಳಂತಿರುವ, ಲಂಚಕೊರರಾದ ಬಿಲ್ ಕಲೆಕ್ಟರ್ ಹಾಗೂ ಪಿಡಿಓ ರವರನ್ನು ಇಲ್ಲಿಂದ ಒದ್ದೋಡಿಸಬೇಕಿದೆ. ಪ್ರತಿಯೊಂದು ದಾಖಲಾತಿಗೆ ಇಂತಿಷ್ಟು ಲಂಚ ನೀಡಬೇಕಂತೆ, ಇಲ್ಲವಾದರೆ ಗ್ರಾಪಂ ಕಚೇರಿ ಒಳಗೆ ಕಾಲಡದಂತೆ ನೋಡಿಕೊಳ್ಳುತ್ತಾರಂತೆ. ಅದಕ್ಕೆಂದೇ ಪುಂಡ ಪಠಾಲಂಗಳನ್ನು ಈ ಲಂಚಬಾಕರು ಸಾಕಿಕೊಂಡಿದ್ದಾರಂತೆ, ಅವರನ್ನ ಛೂ ಬಿಡುತ್ತಾರಂತೆ ಹೀಗೆಂದು ಹಲವರು ಹೇಳಿಕೆ ಕೊಟ್ಟಿದ್ದಾರೆ. ಒಟ್ಟಾರೆಯಾಗಿ ಗುಡೇಕೋಟೆ ಗ್ರಾಪಂ ಕಚೇರಿ ಕೆಲವೇ ಕೆಲ ಹೆಗ್ಗಣ ಹಂದಿ ಯಂತಹ ಲಂಚಬಾಕರಿಂದಾಗಿ,ಒನಕೆ ಒಬವ್ವಳ ತವರು ಮನೆಗೆ ಮರ್ಯಾದಿಗೇಡು ಮಾಡುತಿದ್ದಾರೆ.ಕಾರಣ ಸಂಬಂದಿಸಿದಂತೆ ಕೂಡ್ಲಿಗಿಯ ಇಓ ಹಾಗೂ ಬಳ್ಳಾರಿಯ ಸಿಒರವರು,ಲಂಚಬಾಕರನ್ನ ಹಿಡಿಬೇಕಿರುವ ಎಸಿಬಿ ಯವರು ಇಲ್ಲಿರುವ ಹೆಗ್ಗಣಗಳ ಬಾಲ ಕತ್ತಸಬೇಕಿದೆ. ಇಲ್ಲವಾದಲ್ಲಿ ಸಾರ್ವಜನಿಕರ ಸೇವೆಯ ಹೆಸರಲ್ಲಿ ಸಂಬಳ ಪಡೆದು,ಅಧಕಾರಿಗಳು ಸರ್ಕಾರಕ್ಕೆ ದ್ರೋಹ ಬಗೆದಂತಾಗುತ್ತದೆ.ಕಾರಣ ಶೀಘ್ರವೇ ಅವರು ಗ್ರಾಪಂ ಕಚೇರಿಗೆ ಬೆಟ್ಟಕೊಟ್ಟು ದೂರು ಹೇಳಿಕೆ ನೀಡಿದವರ,ಖುದ್ದು ಹೇಳಕೆ ಪಡೆದು ಪರಿಸ್ಥಿತಿ ಅವಲೋಕಿಸಿ ಅಗತ್ಯ ಶಿಸ್ಥು ಕ್ರಮ ಜರುಗಿಸಬೇಕೆಂದು ಎಂದು ಗ್ರಾಮಸ್ಥರು ಈ ಮೂಲಕ ಒತ್ತಾಯಿಸಿದ್ದಾರೆ. ವರಧಿ :- ಅಣ್ಣಪ್ಪ ಛಲುವಾದಿ