ಆಧ್ಯಾತ್ಮದ ಕುರಿತು ನಾಡಿನ ವಿವಿಧ ಕಡೆಗಳಲ್ಲಿ ಪ್ರವಚನ ನೀಡಿ, ಸಮಾಜದ ಒಳಿತಾಗಿ ಶ್ರಮಿಸುತ್ತಿರುವ ಶ್ರೀಮಾತೆ ಸೇವಾಕಾರ್ಯ ಸರ್ವರಿಗೂ ಪ್ರೇರಣೆ ಎಂದ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ ಯವರು…..
ವಿಜಯಪುರದಲ್ಲಿ, ಶ್ರೀ ಅದೃಷ್ಟಲಕ್ಷ್ಮಿ ದೇವಸ್ಥಾನ ಹಾಗೂ ಶ್ರೀ ಗಜಾನನ ಉತ್ಸವ ಮಹಾಮಂಡಳದ ಸಂಯುಕ್ತ ಆಶ್ರಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳ ಪರ್ಯಂತ ಬುರಣಾಪುರದ ಶ್ರೀ ಸಿದ್ಧಾರೂಡ ಮಠದ ಪರಮಪೂಜ್ಯ ಮಾತೋಶ್ರೀ ಯೋಗೇಶ್ವರಿ ತಾಯಿ ಅವರ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಮುಜರಾಯಿ, ಹಜ ಮತ್ತು ವಕ್ಫ್ ಇಲಾಖೆಯ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ ಯವರು ಭಾಗವಹಿಸಿ, ಶ್ರೀಮಾತೆಯ ಆಶೀರ್ವಾದ ಪಡೆದರು. ಆಧ್ಯಾತ್ಮದ ಕುರಿತು ನಾಡಿನ ವಿವಿಧ ಕಡೆಗಳಲ್ಲಿ ಪ್ರವಚನ ನೀಡಿ, ಸಮಾಜದ ಒಳಿತಾಗಿ ಶ್ರಮಿಸುತ್ತಿರುವ ಶ್ರೀಮಾತೆ ಸೇವಾಕಾರ್ಯ ಸರ್ವರಿಗೂ ಪ್ರೇರಣೆ ಎಂದು ಹೇಳಿದರು. ಇದೇ ಸುಸಂದರ್ಭದಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಿದ ನಿವೃತ್ತ ಯೋಧರಿಗೆ ಹಾಗೂ ಕೋವಿಡ್ ಸಂದಿಗ್ಧ ಸಂದರ್ಭದಲ್ಲಿ ನಿರಂತರವಾಗಿ ಶ್ರಮಿಸಿದ ಪೌರಕಾರ್ಮಿಕರನ್ನು ಸನ್ಮಾನಿಸಿ, ಗೌರವ ಸಲ್ಲಿಸಿದರು. ಬಳಿಕ ಕೊರೊನಾ ಸಂಕಷ್ಟದ ಸಮಯಯಲ್ಲಿ ತಮ್ಮ ಜೀವದ ಹಂಗು ತೊರೆದು ಸುಮಾರು 200 ಕ್ಕೂ ಅಧಿಕ ಶವಸಂಸ್ಕಾರವನ್ನು ಉಚಿತವಾಗಿ ಮಾಡಿದ ಶ್ರೀ ಶಂಕರ ನಾಗಪ್ಪ ಕಾಳೆ ಹಾಗೂ ಶ್ರೀಮತಿ ಶಾಂತಾ ಕಾಳೆ ದಂಪತಿಯನ್ನು ಸನ್ಮಾನಿಸಿ, ಅವರ ನಿಸ್ವಾರ್ಥ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂಸದರಾದ ಶ್ರೀ ರಮೇಶ ಜಿಗಜಿಣಗಿ ಜಿ, ಮಾಜಿ ಸಚಿವರಾದ ಶ್ರೀ ಅಪ್ಪು ಪಟ್ಟಣಶೆಟ್ಟಿ, ಶ್ರೀ ಆನಂದ ದುಮಾಳೆ, ಶ್ರೀ ಸುರೇಶ ಬಿರಾದಾರ ಜಿ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.
ವರದಿ – ಮಹೇಶ ಶರ್ಮಾ